Friday, 22nd November 2024

M D Narasimhamurthy: ಶಿಕ್ಷಣದ ಜೊತೆಗೆ ಕಲೆಗಳನ್ನು ಮೈಗೂಡಿಸಿಕೊಳ್ಳಿ -ನಿವೃತ್ತ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ

ಚಿಕ್ಕಬಳ್ಳಾಪುರ: ಶ್ರೀಜಲಧಿ ಗ್ರಾಮೀಣಾಭಿವೃದ್ದಿ ಸಂಸ್ಥೆ(ರಿ), ಬೆಜ್ಜಿಹಳ್ಳಿ ಶಿರಾ ತಾಲೂಕು ತುಮಕೂರು ಜಿಲ್ಲೆ ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ದೊಡ್ಡ ಮಲ್ಲೇಕೆರೆ ಗ್ರಾಮದಲ್ಲಿ “ಜಾನಪದ ಗಾನಸಿರಿ” ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀಜಲಧಿ ಗ್ರಾಮೀಣಭಿವೃದ್ದಿ ಸಂಸ್ಥೆ(ರಿ)ಯ ಜಾನಪದ ಗಾನಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿದ ದೊಡ್ಡಮಲ್ಲೇ ಕೆರೆ ಗ್ರಾಮದ ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಮಾತನಾಡಿ, ಕಲೆಗಳು ಅದರಲ್ಲಿಯೂ ಜಾನಪದ ಕಲೆಗಳು ಇಂದಿಗೂ ಪ್ರಚಲಿತದಲ್ಲಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ನಮ್ಮೂರು ದೊಡ್ಡಮಲ್ಲೇಕೆರೆಯಲ್ಲಿ ಇಂದಿಗೂ ಕಲೆಗಳನ್ನು ಆಸ್ವಾದಿಸುವ ಮನಸ್ಸುಗಳು ಸಾಕಷ್ಟಿವೆ. ಕಳೆದ ಹದಿನೈದು ವರ್ಷಗಳಿಂದಲೂ ಈ ಗ್ರಾಮದಲ್ಲಿ ತಿಂಗಳಿಗೆ ಒಂದಾದರೂ ಇಂತಹ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅನೇಕ ಹೆಸರಾಂತ ಕಲಾವಿದರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ ಎಂದರು.

ಶಿಕ್ಷಣ ಎಲ್ಲರ ಬದುಕಿನಲ್ಲಿಯೂ ಅತಿ ಮುಖ್ಯ. ಯುವಕರು ವಿದ್ಯಾಬ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣದ ಜೊತೆ ಜೊತೆಗೆ ಇಂತಹ ಕಲೆಗಳನ್ನು ಮೈಗೂಡಿಸಿಕೊಂಡರೆ, ರಾಜ್ಯವಲ್ಲದೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು. ಇಂದು ಪ್ರದರ್ಶನ ನೀಡುತ್ತಿರುವ ಬಹುತೇಕ ಕಲಾವಿದರಿಗೆ ಆರ್ಹತೆ ಇದೆ. ಅವಕಾಶಗಳನ್ನು ಪಡೆದು ಮುನ್ನೆಡೆಯುವಂತಾಗಲಿ. ಜಲಧಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಮತ್ತಷ್ಟು ಅವಕಾಶಗಳನ್ನು ಈ ಕಲಾವಿದರಿಗೆ ನೀಡಲಿ ಎಂದು ಎಂ.ಡಿ.ನರಸಿAಹಮೂರ್ತಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಜಾನಪದ ಎಲ್ಲಾ ಕಲಾ ಪ್ರಕಾರಗಳ ತಾಯಿ ಬೇರು. ನಿಸರ್ಗವೇ ದೇವರು, ಧರ್ಮವೆಂದು ಭಾವಿಸಿದ್ದ ಜನರು, ತಮ್ಮ ನೋವು, ನಲಿವುಗಳನ್ನು ವ್ಯಕ್ತಪಡಿಸಲು ಕಂಡುಕೊಂಡ ದಾರಿಯೇ ಜಾನಪದ ಗಾಯನ, ಓದು ಬರಹ ಬಲ್ಲದವರ ಎದೆಯಲ್ಲಿ ಸಾವಿರಾರು ಪುಟಗಳ ಹಾಡುಗಳು ಹುಟ್ಟಿರುವುದನ್ನು ಕಾಣಬಹುದಾಗಿದೆ. ಕುಟ್ಟುವಾಗ, ಬೀಸುವಾಗ, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ, ತಮ್ಮ ಆಯಾಸ ಮರೆಯಲು ಇತರರೊಂದಿಗೆ ಸೇರಿ ಹಾಡುವ ಸೋಬಾನೆ, ಗೀಗಿ, ಭಜನೆ, ಜರಿಯುವ ಪದಗಳು, ಒಗಟುಗಳು ಇಡೀ ಮನುಕುಲಕ್ಕೆ ವಿಸ್ಮಯವನ್ನು ಮೂಡಿಸುತ್ತವೆ ಎಂದರು.

ಸಹಕಾರ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಎಂ.ಡಿ.ನರಸಿAಹಮೂರ್ತಿ ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಡಿ.ಎಂ.ರವಿಕುಮಾರ್ ಅವರುಗಳು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಹೊಸ ಕಲಾವಿದರಿಗೆ ಅವಕಾಶಗಳನ್ನು ಕರುಣಿಸುವಂತಾಗಲಿ. ಕೆಂಕೆರೆ ಮಲ್ಲಿಕಾರ್ಜುನ್ ಜಾನಪದ ಅಕಾಡೆಮಿ ಸದಸ್ಯರಾಗಿ, ಮೋಹನ ಕುಮಾರ್ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕ ಗೊಂಡಿದ್ದಾರೆ. ಇವರ ಕಾಲದಲ್ಲಿ ಹೆಚ್ಚು ಯುವ ಕಲಾವಿದರಿಗೆ ಅವಕಾಶ ದೊರೆಯುವಂತಾಗಲಿ ಎಂದು ಡಾ.ಲಕ್ಷ್ಮಣದಾಸ್ ಶುಭ ಹಾರೈಸಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಜಲಧಿ ಸಂಸ್ಥೆ ಸರಕಾರ ಸಹಯೋಗ ದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಎಲ್ಲಿಯ ಶಿರಾ, ಎಲ್ಲಿಯ ಚಿಕ್ಕಬಳ್ಳಾಪುರ ಕಲೆಗೆ ಜಾತಿ, ಭಾಷೆ, ಗಡಿಯ ಭೇಧವಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?. ನೂರಾರು ಕಲಾವಿದರಿಗೆ ಅವಕಾಶ ಗಳನ್ನು ನೀಡಿದೆ. ಇದಕ್ಕೆ ಪ್ರೇರಣೆ ಡಿ.ಎಂ.ರವಿಕುಮಾರ್ ಅವರು, ಇವರಿಂದ ಹಲವಾರು ಕಲಾವಿದರು ತಮ್ಮ ಕಲೆಯನ್ನು ಬದುಕಿಸಿಕೊಂಡು, ತಾವು ಬದುಕಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದರು.

ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಜುAಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಹಾವೇರಿಯ ಕರ್ನಾಟಕ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯರಾದ ಮೋಹನಕುಮಾರ್.ಎನ್., ಪಾವಗಡ ತಾಲೂಕು ರ‍್ಲಗೊಂದಿಯ ಜಾನಪದ ಕಲಾವಿದ ಡಿ.ನಾಗರಾಜು, ಶ್ರೀಜಲಧಿ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಬಿ.ಟಿ.ರಾಜಣ್ಣ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ವಿಶ್ವನಾಥ ನಾಯಕ, ದೊಡ್ಡ ಮಲ್ಲೇಕೆರೆ ಹಿರಿಯ ಕಲಾವಿದರಾದ ಗಂಗಪ್ಪ, ದೊಡ್ಡ ಮಲ್ಲೇಕೆರೆ ಗ್ರಾ.ಪಂ.ಸದಸ್ಯರಾದ ನರಸಿಂಹಮೂರ್ತಿ, ಲಕ್ಷಿö್ಮÃದೇವಮ್ಮ, ಶ್ರೀನವದೃಷ್ಟಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಯಶೋಧಮ್ಮ. ಡಿ.ಎಂ, ಕಾರ್ಯದರ್ಶಿ ಷಣ್ಮುಗ.ಡಿ.ವಿ, ಬೆಳ್ಳಿಬಟ್ಲು ಜಾನಪದ ಕಲಾವಿದರಾದ ಬಲರಾಮ, ರಂಗಸೊಗಡು ಕಲಾ ಟ್ರಸ್ಟ್ನ ಕಾರ್ಯದರ್ಶಿ ಸಿದ್ದರಾಜು ಸ್ವಾಂದೇನಹಳ್ಳಿ, ದೊಡ್ಡಮಲ್ಲೇಕೆರೆ ನಿವೃತ್ತ ಮುಖ್ಯೋಪಾಧ್ಯಾಯರಾದ ನಾಗರಾಜು ಡಿ.ಎನ್. ಉಪಸ್ಥಿತರಿದ್ದರು.

ಜಲಧಿ ಜಾನಪದ ಗಾನಸಿರಿ ಕಾರ್ಯಕ್ರಮದಲ್ಲಿ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮತ್ತು ತಂಡದಿAದ ರಂಗಗೀತೆಗಳ ಗಾಯನ, ಚಲನಚಿತ್ರ ಹಿನ್ನೆಲೆ ಗಾಯಕರು ಹಾಗೂ ಜಾನಪದ ಕಲಾವಿದರಾದ ಮೋಹನಕುಮಾರ್ ಅವರಿಂದ ಜಾನಪದ ಗೀತೆಗಳ ಗಾಯನ, ಪಾವಗಡ ತಾಲೂಕು ರ‍್ಲಗೊಂದಿ ಗ್ರಾಮದ ಕಲಾವಿದ ಡಿ.ನಾಗರಾಜು ಮತ್ತು ತಂಡದಿಂದ ಗೀತ ಗಾಯನ ನಡೆಯಿತು.

ಶಿರಾದ ದರ್ಶನ ಮತ್ತು ತಂಡದಿಂದ ವೀರಗಾಸೆ, ಚಳ್ಳಕೆರೆ ತಾಲೂಕು ಪರುಶುರಾಮಪುರದ ಗಗನ್ ಮತ್ತು ತಂಡದಿಂದ ನಾಸಿಕ್ ಡೋಲ್, ಪಾವಗಡ ತಾಲೂಕು ಬೆಳ್ಳಿಬಟ್ಲು ಗ್ರಾಮದ ಬಲರಾಮ ಮತ್ತು ತಂಡದಿಂದ ಗಾರುಡಿ ಗೊಂಬೆ, ಪಾವಗಡ ತಾಲೂಕು ನಿಡಗಲ್ಲು ಗ್ರಾಮದ ಗುರುರಾಜ ಮತ್ತು ತಂಡದಿಂದ ಕೀಲುಕುದುರೆ, ಡಿ.ಮಾದಯ್ಯ ಮತ್ತು ತಂಡದಿAದ ಸೋಮನ ಕುಣಿತ ಜಾನಪದ ಕಲೆಗಳ ಪ್ರದರ್ಶನಗಳ ಮೂಲಕ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.