ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹುಡುಗ ಹುಡುಗಿಯರಲ್ಲಿ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಸ್ನೇಹಿತರಾಗುತ್ತಾರೆ. ನಂತರ ಅವರ ನಡುವೆ ಪ್ರೀತಿ ಚಿಗುರಿ ಕೊನೆಗೆ ಮೋಸ ಹೋಗುವಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ನಡೆಯುತ್ತಿದೆ. ಅದೇರೀತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Online Friend) ಪರಿಚಯನಾದ ಗೆಳೆಯನನ್ನು ಭೇಟಿ ಮಾಡಲು ಹೋಟೆಲ್ ರೂಂಗೆ ಹೋದ ಹುಡುಗಿ ಅಲ್ಲಿ ಆತನಿಂದ ಬಂದಿಯಾದ ಘಟನೆ ಹೈದರಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.
ನಾರಾಯಣಗುಡದಲ್ಲಿ 20 ದಿನಗಳ ಕಾಲ ಹೋಟೆಲ್ ಕೋಣೆಯಲ್ಲಿ ಬಂದಿಯಾಗಿದ್ದ 18 ವರ್ಷದ ವಿದ್ಯಾರ್ಥಿನಿಯನ್ನು ಹೈದರಾಬಾದ್ ಪೊಲೀಸರ ವಿಭಾಗವಾದ She ತಂಡ ರಕ್ಷಿಸಿದೆ ಎಂಬುದಾಗಿ ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಂತ್ರಸ್ತೆಯನ್ನು ಹೋಟೆಲ್ ರೂಂನಲ್ಲಿ ಲಾಕ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯನ್ನು ಶನಿವಾರ ಪೊಲೀಸರ ತಂಡ ರಕ್ಷಿಸಿದ್ದು, 19 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭೈಂಸಾ (Bhainsa)ಪಟ್ಟಣದ ವಿದ್ಯಾರ್ಥಿನಿಯ ಪೋಷಕರು ಹೈದರಾಬಾದ್ ಶಿ ಟೀಮ್‍ಗೆ ದೂರು ನೀಡಿದ್ದು, ತಮ್ಮ ಮಗಳು ಕರೆ ಮಾಡಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮೂಲಕ ಪರಿಚಯನಾದ ಸ್ನೇಹಿತನಿಂದ ಸಿಕ್ಕಿಬಿದ್ದಿದ್ದಾಳೆ ಎಂದು ಮಾಹಿತಿ ನೀಡಿದ್ದಾಳೆ ಎಂದು ಉಪ ಪೊಲೀಸ್ ಆಯುಕ್ತ (ಸೈಬರ್ ಅಪರಾಧಗಳು ಮತ್ತು ಮಹಿಳಾ ಸುರಕ್ಷತೆ-ಹೈದರಾಬಾದ್) ಡಿ ಕವಿತಾ ಅವರಿಗೆ ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರ ತಂಡ ತನಿಖೆ ನಡೆಸಿದ್ದಾರೆ. ಆ ವೇಳೆ ಪೊಲೀಸರಿಗೆ ನಾರಾಯಣಗುಡದ ಹೋಟೆಲ್ ರೂಂನಲ್ಲಿ ಆರೋಪಿ ಸಂತ್ರಸ್ತೆಯನ್ನು ಬಂಧಿಸಿರುವುದಾಗಿ ಮಾಹಿತಿ ತಿಳಿದು ಹೋಟೆಲ್ ಮೇಲೆ ದಾಳಿ ಮಾಡಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ನೀಳ ಕೇಶರಾಶಿ ನಿಮ್ಮದಾಗಬೇಕೆ? ಈ ಚಹಾ ಟ್ರೈ ಮಾಡಿ ನೋಡಿ!
ಆರೋಪಿ ಬೆದರಿಕೆ ಹಾಕಿ ಹೈದರಾಬಾದ್‍ಗೆ ಬರುವಂತೆ ಬಲವಂತಪಡಿಸಿದ್ದಾನೆ ಮತ್ತು 20 ದಿನಗಳ ಕಾಲ ಹೋಟೆಲ್ ರೂಂನಲ್ಲಿ ಲಾಕ್ ಮಾಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಾರಾಯಣಗುಡದ ಬೀಗ ಹಾಕಿದ ಹೋಟೆಲ್ ಕೋಣೆಯಲ್ಲಿ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿದ ಎಸ್ಐಟಿ ತಂಡಗಳು ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿವೆ. ನಂತರ ಆರೋಪಿಯನ್ನು ಸಹ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.