Friday, 20th September 2024

Rahul Gandhi Controversy: ಸಿಖ್ಖರ ಬಗ್ಗೆ ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ- ಕೋರ್ಟ್‌ಗೆಳೆಯುತ್ತೇವೆ ಎಂದು ಖಡಕ್‌ ಎಚ್ಚರಿಕೆ

Rahul Gandhi Controversy

ಹೊಸದಿಲ್ಲಿ: ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi), ಬಿಜೆಪಿ(BJP) ಮತ್ತು ಆರ್‌ಎಸ್‌ಎಸ್‌(RSS) ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi Controversy) ಸಿಖ್‌ಗಳ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗುತ್ತಿದೆ. ಇದರಿಂದ ತೀವ್ರ ಕೆಂಡಾಮಂಡಲವಾಗಿರುವ ಬಿಜೆಪಿ ರಾಹುಲ್‌ ಗಾಂಧಿಯವರನ್ನು ಕೋರ್ಟ್‌ಗೆಳೆಯುವುದಾಗಿ ಎಚ್ಚರಿಕೆ ನೀಡಿದೆ.

ರಾಹುಲ್‌ ಹೇಳಿದ್ದೇನು?

ವರ್ಜೀನಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಭಾರತದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೆ. ಸಭೆಯ ಮುಂದಿನ ಸಾಲಿನಲ್ಲಿ ಕುಳಿತ ಸಿಖ್ ಧರ್ಮೀಯರಲ್ಲಿ ಒಬ್ಬರಿಗೆ ತಮ್ಮ ಹೆಸರು ಹೇಳುವಂತೆ ರಾಹುಲ್ ಗಾಂಧಿ ಹೇಳಿದಾಗ, ಟರ್ಬನ್‌(ಪೇಟ) ಧರಿಸಿದ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದರು. ಭಾರತದಲ್ಲಿ ಸಿಖ್ಖರು ಪೇಟವನ್ನು ಧರಿಸಲು ಅಥವಾ ಅನುಮತಿ ನೀಡಬಹುದೇ ಬೇಡವೇ, ಅಥವಾ ಅವರು ಸಿಖ್ಖರು ಗುರುದ್ವಾರಕ್ಕೆ ಹೋಗಲು ಸಾಧ್ಯವೇ ಎಂಬುದಕ್ಕಾಗಿ ಹೋರಾಟವಾಗಿದೆ. ಇದು ಕೇವಲ ಒಂದು ಧರ್ಮದಲ್ಲಿ ಅಲ್ಲ, ಎಲ್ಲಾ ಧರ್ಮದಲ್ಲಿ ಇಂತಹ ಹೋರಾಟ, ಸಂಘರ್ಷಗಳಿವೆ ಎಂದು ಹೇಳಿದ್ದಾರೆ.

ಬಿಜೆಪಿ ಕಿಡಿ

ರಾಹುಲ್ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ರಾಹುಲ್‌ ಗಾ‍ಂಧಿ ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ನಮ್ಮ ಏಕತೆ ಮತ್ತು ವೈವಿಧ್ಯತೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಂಭವಿಸಿದ 1984 ರ ಗಲಭೆಯ ಸಮಯದಲ್ಲಿ ಸಮುದಾಯವು ಪೇಟ ಮತ್ತು ಕದ ಧರಿಸಲು ಹೆದರುತ್ತಿದ್ದರು ಎಂದು ತಿರುಗೇಟು ಕೊಟ್ಟಿದ್ದಾರೆ.

1984 ರಲ್ಲಿ 3000 ಅಮಾಯಕರು ಕೊಲ್ಲಲ್ಪಟ್ಟರು. ಅವರನ್ನು ಮನೆಯಿಂದ ಹೊರಗೆ ಎಳೆದು ತರಲಾಯಿತು. ಇವೆಲ್ಲವೂ ಈ ಬಗ್ಗೆ ದಾಖಲಿತ ಸತ್ಯಗಳು. ರಾಜೀವ್ ಗಾಂಧಿಯವರ ಕಾಲದಲ್ಲಿ (1984) ಸಿಖ್ಖರು ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಅನುಭವಿಸಿದ ಏಕೈಕ ಸಮಯ, ”ಎಂದು ಅವರು ಹೇಳಿದರು.

ರಾಹುಲ್‌ರನ್ನು ಕೋರ್ಟ್‌ಗೆಳೆಯುತ್ತೇವೆ

ವಿವಾದಾತ್ಮಕ ಹೇಳಿಕೆ ನೀಡಿದ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕೋರ್ಟ್‌ಗೆಳೆಯುತ್ತೇವೆ ಎಂದು ಬಿಜೆಪಿ ನಾಯಕ ಆರ್‌ಪಿ ಸಿಂಗ್ ಹೇಳಿದ್ದಾರೆ. “ನಾನು ಅವನ ವಿರುದ್ಧ ಕೇಸು ದಾಖಲಿಸುತ್ತೇನೆ. ನಾನು ಅವರನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ, ದೆಹಲಿಯಲ್ಲಿ ಮೂರು ಸಾವಿರ ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು, ಅವರ ಪೇಟಗಳನ್ನು ತೆಗೆಯಲಾಯಿತು, ಅವರ ಕೂದಲನ್ನು ಕತ್ತರಿಸಲಾಯಿತು ಮತ್ತು ಗಡ್ಡವನ್ನು ಬೋಳಿಸಲಾಯಿತು… ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದು ಸಂಭವಿಸಿತು. ನಾನು ರಾಹುಲ್ ಗಾಂಧಿಗೆ ಸವಾಲು ಹಾಕುತ್ತೇನೆ. ಅವರು ಸಿಖ್ಖರ ಬಗ್ಗೆ ಏನು ಹೇಳುತ್ತಿದ್ದಾರೋ ಅದನ್ನು ಭಾರತದಲ್ಲಿ ಬಂದು ಹೇಳಲಿ ಎಂದು ಸವಾಲೆಸೆದರು. ಅವರು ಸೇರಿಸಿದರು.

ಈ ಸುದ್ದಿಯನ್ನೂ ಓದಿ: Rahul Gandhi: ಲೋಕಸಭಾ ಚುನಾವಣೆ ಸೋಲನ್ನು ಮೋದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ರಾಹುಲ್‌ ಗಾಂಧಿ ವ್ಯಂಗ್ಯ