ಕಳೆದ 57 ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ದೂರದರ್ಶನ (Krishi Darshan)
ಕಾರ್ಯಕ್ರಮವೊಂದನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ 16,000ಕ್ಕೂ ಹೆಚ್ಚು ಶೋಗಳನ್ನು ಪ್ರಸಾರ ಮಾಡಲಾಗಿದೆ. ಆದರೆ ಇದು ವ್ಯಾಪಕವಾಗಿ ಜನಪ್ರಿಯವಾದ ‘ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ), ಥ್ರಿಲ್ಲಿಂಗ್ ‘ಸಿಐಡಿ’, ಕಾಮಿಡಿ ಶೋ ‘ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ’ ಅಥವಾ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್’ ಶೋಗಳಂತಹ ಕಾರ್ಯಕ್ರಮಗಳಲ್ಲ. ಬದಲಾಗಿ ದೂರದರ್ಶನದಲ್ಲಿ ಪ್ರಸಾರವಾಗುವ ಕೃಷಿಗೆ ಸಂಬಂಧಪಟ್ಟ ಮಾಹಿತಿಯುಕ್ತ ಕಾರ್ಯಕ್ರಮ ‘ಕೃಷಿ ದರ್ಶನ’ ಇದಾಗಿದೆ. ಇದು ಭಾರತದಲ್ಲಿ ಹೆಚ್ಚು ಕಾಲ ಪ್ರಸಾರವಾಗುತ್ತಿರುವ ಟಿವಿ ಕಾರ್ಯಕ್ರಮವಾಗಿದೆ!
57 ವರ್ಷಗಳ ಕಾಲ 16,780ಕ್ಕೂ ಹೆಚ್ಚು ಎಪಿಸೋಡ್‍ಗಳನ್ನು ಪೂರೈಸಿರುವ ‘ಕೃಷಿ ದರ್ಶನ’ ಹೆಚ್ಚು ಮನೆಮಾತಾಗಿದೆ. ಈ ಕಾರ್ಯಕ್ರಮವು ಕೃಷಿ ಪದ್ಧತಿಗಳು, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ಅಪಾರವಾದ ಜ್ಞಾನದ ಕಣಜವಾಗಿದೆ. ಹಾಗೇ ಇದು ದೇಶದ ಮೂಲೆ ಮೂಲೆಯ ಜನರನ್ನು ತಲುಪಿದೆ.ಹಾಗೇ ಇದು ಕೆಬಿಸಿ ಸೇರಿದಂತೆ ಇತರ ಯಾವುದೇ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಮೀರಿಸುವ ಮೂಲಕ ದೂರದ ಹಳ್ಳಿಗಳಿಗೂ ತಲುಪಿದೆ.
‘ಕೃಷಿ ದರ್ಶನ’ ಕಾರ್ಯಕ್ರಮವನ್ನು ಅಂದಿನ ಪ್ರಧಾನಿಯಾದ ಇಂದಿರಾ ಗಾಂಧಿ ಅವರು ಉದ್ಘಾಟಿಸಿದ್ದರು. ಮೊದಲ ಎಪಿಸೋಡ್ ಜನವರಿ 26, 1967 ರಂದು ಪ್ರಸಾರವಾಯಿತು. ಅಂದು ಭಾರತದ ಸ್ವಾತಂತ್ರ್ಯದ ನಂತರದ 20 ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗಿತ್ತು. ಕಳೆದ 57 ವರ್ಷಗಳಿಂದ, ಈ ಕಾರ್ಯಕ್ರಮವು ಡಿಡಿ ನ್ಯಾಷನಲ್‍ನಲ್ಲಿ ಮುಖ್ಯ ಕಾರ್ಯಕ್ರಮವಾಗಿ ಪ್ರಸಾರವಾಗಿತ್ತು. ನಂತರ ಅದು 2015 ರಲ್ಲಿ ಡಿಡಿ ಕಿಸಾನ್ ಆಗಿ ಮುಂದುವರಿಯಿತು. ಇದರ ಪ್ರತಿ ಎಪಿಸೋಡ್ ಸುಮಾರು 30 ನಿಮಿಷಗಳ ಕಾಲ ನಡೆಯುತ್ತದೆ. ಶುರುವಿನಲ್ಲಿ, ಪ್ರಸಾರವು ದೆಹಲಿಯ ಸುತ್ತಮುತ್ತಲಿನ 80 ಹಳ್ಳಿಗಳಿಗೆ ಸೀಮಿತವಾಗಿತ್ತು, ಆದರೆ ಇದು ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಜನಪ್ರಿಯತೆಯನ್ನು ಗಳಿಸಿತು.
ಭಾರತದ ಎರಡನೇ ಅತಿ ಹೆಚ್ಚು ಕಾಲ ಪ್ರಸಾರವಾದ ಟಿವಿ ಕಾರ್ಯಕ್ರಮವಾದ ‘ಚಿತ್ರಹಾರ್’ 12,000 ಕ್ಕೂ ಹೆಚ್ಚು ಎಪಿಸೋಡ್‍ಗಳನ್ನು ಪ್ರಸಾರ ಮಾಡುವುದರ ಮೂಲಕ ಈ ಸಂಗೀತ ಕಾರ್ಯಕ್ರಮವು 42 ವರ್ಷಗಳಿಂದ ಡಿಡಿ ನ್ಯಾಷನಲ್ ಚಾನೆಲ್‍ನಲ್ಲಿ ಜನಪ್ರಿಯವಾಗಿದೆ. ಬಾಲಿವುಡ್ ಚಲನಚಿತ್ರ ಗೀತೆಗಳನ್ನು ಒಳಗೊಂಡ ಇದರ ಮೊದಲ ಎಪಿಸೋಡ್ ಆಗಸ್ಟ್ 15, 1982 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಸಾರವಾಯಿತು.
1989ರಿಂದ ವೀಕ್ಷಕರನ್ನು ರಂಜಿಸುತ್ತಿರುವ ಮತ್ತೊಂದು ಸಂಗೀತ ಕಾರ್ಯಕ್ರಮ ‘ರಂಗೋಲಿ’ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 35 ವರ್ಷದಿಂದ 11,500 ಎಪಿಸೋಡ್‍ಗಳನ್ನು ಹೊಂದಿರುವ ‘ರಂಗೋಲಿ’ ಧಾರಾವಾಹಿಯಲ್ಲಿ ಹೇಮಾ ಮಾಲಿನಿ, ಶರ್ಮಿಳಾ ಟ್ಯಾಗೋರ್ ಮತ್ತು ಶ್ವೇತಾ ತಿವಾರಿ ಅವರಂತಹ ಹಲವಾರು ಜನಪ್ರಿಯ ನಟಿಯರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಿಮ್ಮ ಮನೆಯಲ್ಲಿ ನಿತ್ಯ ಈ ವಸ್ತುಗಳನ್ನು ಬಳಸುತ್ತಿದ್ದೀರಾ? ಇದು ಕ್ಯಾನ್ಸರ್‌ಗೆ ಕಾರಣವಾದೀತು!
ಇದಕ್ಕೆ ಹೋಲಿಸಿದರೆ, ಜನಪ್ರಿಯ ಕಾರ್ಯಕ್ರಮಗಳಾದ ‘ಕೌನ್ ಬನೇಗಾ ಕರೋಡ್‌ಪತಿ’ 2000 ನೇ ವರ್ಷದಿಂದ 1,230 ಎಪಿಸೋಡ್‍ಗಳನ್ನು ಪ್ರಸಾರ ಮಾಡಿದೆ, ‘ಸಿಐಡಿ’ ತನ್ನ 20 ವರ್ಷಗಳ ಅವಧಿಯಲ್ಲಿ 1,547 ಎಪಿಸೋಡ್‍ಗಳನ್ನು, ‘ಬಿಗ್ ಬಾಸ್’ 17 ವರ್ಷಗಳಲ್ಲಿ 1,864 ಎಪಿಸೋಡ್‍ಗಳನ್ನು ಮತ್ತು ‘ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ’ 2008 ರಿಂದ 4,180 ಎಪಿಸೋಡ್‍ಗಳೊಂದಿಗೆ ಪ್ರಸಾರವಾಗುತ್ತಿದೆ.