ಬೆಂಗಳೂರು: ಸೆ.11ರಂದು ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆ ಸೇರಿ ಉತ್ತರ ಒಳನಾಡು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಲಘುವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಸೆ.12ರಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳ ಮೇಲಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳ ಮೇಲೆ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅದೇ ರೀತಿ 13ನೇ ಸೆಪ್ಟೆಂಬರ್ 2004): ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಸೆ.16ರವರೆಗೂ ಇದೇ ರೀತಿಯ ಹವಾಮಾನ ಇರಲಿದೆ.
ಈ ಸುದ್ದಿಯನ್ನೂ ಓದಿ | Krishi Darshan: ಭಾರತದಲ್ಲಿ ಅತಿ ಹೆಚ್ಚು ಪ್ರಸಾರವಾಗುತ್ತಿರುವ ಟಿವಿ ಶೋ ಯಾವುದು ನೋಡಿ!
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30° C ಮತ್ತು 21° C ಆಗಿರಬಹುದು.
ರಾಜ್ಯದಲ್ಲಿ 2024ರ ಮುಂಗಾರು ಮಳೆ ಪರಿಸ್ಥಿತಿ
- 2024ರ ಮುಂಗಾರು ಜೂನ್ ತಿಂಗಳಲ್ಲಿ ವಾಡಿಕೆಯಾಗಿ 199 ಮಿ.ಮೀ ಮಳೆಯಾಗಬೇಕಿದ್ದು ವಾಸ್ತವಿಕ 194 ಮಿ.ಮೀ ಮಳೆಯಾಗಿದೆ.
- ಜುಲೈ ತಿಂಗಳಲ್ಲಿ ವಾಡಿಕೆಯಾಗಿ 271 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 409 ಮಿ.ಮೀ ಮಳೆಯಾಗಿದ್ದು, ಶೇ.51ರಷ್ಟು ಅಧಿಕ ಮಳೆಯಾಗಿದೆ.
- ಆಗಸ್ಟ್ ತಿಂಗಳಲ್ಲಿ ವಾಡಿಕೆಯಾಗಿ 220 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 236 ಮಿ.ಮೀ ಮಳೆಯಾಗಿದ್ದು, ಶೇ.7ರಷ್ಟು ಅಧಿಕ ವಾಡಿಕೆ ಮಳೆಯಾಗಿದೆ.
- ಸೆಪ್ಟೆಂಬರ್ (1ರಿಂದ 10ನೇ ಸೆಪ್ಟೆಂಬರ್) ಅವಧಿಗೆ ವಾಡಿಕೆಯಾಗಿ 47 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 61 ಮಿ.ಮೀ ಮಳೆಯಾಗಿದ್ದು ಶೇ.30ರಷ್ಟು ಅಧಿಕ ಮಳೆಯಾಗಿದೆ.
- ಜೂನ್ 1ರಿಂದ ಸೆಪ್ಟೆಂಬರ್ 10ರವರೆಗೆ ವಾಡಿಕೆಯಾಗಿ 737 ಮಿ.ಮೀ. ಮಳೆಯಾಗಬೇಕಿದ್ದು ವಾಸ್ತವಿಕ 908 ಮಿ.ಮೀ ಮಳೆಯಾಗಿದ್ದು, ಶೇ.23ರಷ್ಟು ಅಧಿಕ ಮಳೆಯಾಗಿದೆ.