Thursday, 19th September 2024

Onam Saree 2024: ಓಣಂ ಹಬ್ಬಕ್ಕೆ ಸೀರೆ ಖರೀದಿಸುವವರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್!

Onam Saree 2024

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬದ ಆಚರಣೆ (Onam Saree 2024) ಹಿನ್ನೆಲೆಯಲ್ಲಿ ಇದೀಗ ಈ ಹಬ್ಬಕ್ಕೆ ಉಡಬಹುದಾದ ಕೇರಳದ ಶ್ವೇತ ವರ್ಣದ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ.

ಮಾನಿನಿಯರಿಗೆ ಪ್ರಿಯವಾದ ಸೀರೆಗಳಿವು

ಓಣಂ ಸೀರೆಗಳು ಇದೀಗ ಕೇವಲ ಕೇರಳದ ನಾರಿಯರಿಗೆ ಮಾತ್ರ ಸೀಮಿತವಾಗಿಲ್ಲ! ಎಲ್ಲೆಡೆ ಈ ಹಬ್ಬವನ್ನು ಆಚರಿಸುವವರು ಹೆಚ್ಚಾಗಿದ್ದಾರೆ. ಹಾಗಾಗಿ ಪ್ರತಿ ಮಾನಿನಿಯರ ಬಳಿ ಒಂದಲ್ಲ ಒಂದು ಓಣಂಗೆ ಉಡಬಹುದಾದ ಸೀರೆ ಇದ್ದೇ ಇರುತ್ತವೆ. ಉದಾಹರಣೆಗೆ., ಹಾಫ್‌ ಕ್ರೀಮ್‌, ಹಾಫ್‌ ವೈಟ್‌, ಮಿಲ್ಕಿ ವೈಟ್‌ನಂತಹ ಶೇಡ್‌ಗಳ ಸೀರೆಗಳು ವಾರ್ಡ್ರೋಬ್‌ನಲ್ಲಿ ಎಲ್ಲಾ ಮಹಿಳೆಯರ ಕಲೆಕ್ಷನ್‌ನಲ್ಲಿರುತ್ತವೆ.

ಚಿತ್ರಕೃಪೆ: ಪಿಕ್ಸೆಲ್‌

ಇನ್ನು, ಇತ್ತೀಚೆಗೆ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಹಾಗೂ ಉದ್ಯೋಗಸ್ಥ ಮಹಿಳೆಯರು ತಮ್ಮ ತಮ್ಮ ಕಚೇರಿಯಲ್ಲಿ ಓಣಂ ಹಬ್ಬವನ್ನು ಒಂದು ದಿನ ಆಚರಿಸುವುದು ಕಾಮನ್‌ ಆಗಿದ್ದು, ಆ ದಿನದಂದು ಉಡಲೆಂದೇ ಕೇರಳದ ಶೈಲಿಯ ಸೀರೆಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಇಲ್ಲವಾದಲ್ಲಿ, ಅವುಗಳ ರಿಪ್ಲಿಕಾ ಸೀರೆಗಳನ್ನು ಖರೀದಿಸುವುದು ಸಾಮಾನ್ಯವಾಗತೊಡಗಿದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ದಕ್ಷಾ.

ಈ ಸುದ್ದಿಯನ್ನೂ ಓದಿ | BESCOM EV Mitra App: ಇವಿ ಚಾರ್ಜಿಂಗ್‌ ಸ್ಟೇಷನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಬೆಸ್ಕಾಂ ʼಇವಿ ಮಿತ್ರʼ ಆ್ಯಪ್‌ಗೆ ಹೊಸ ರೂಪ

ಹೆಚ್ಚಿದ ಶ್ವೇತ ವರ್ಣದ ಸೀರೆಗಳ ಮಾರಾಟ

ಕೇರಳದ ಸೀರೆಗಳಂತೆ ಕಾಣಿಸುವ ಕಾನ್‌, ಖಾದಿ, ಕ್ರೇಪ್‌ ಹಾಗೂ ಲೆನಿನ್‌ನ ಗೋಲ್ಡನ್‌ ಬಾರ್ಡರ್‌ ಹೊಂದಿರುವಂತಹ ಶ್ವೇತ ವರ್ಣದ ಸೀರೆಗಳ ಮಾರಾಟ ಮೊದಲಿಗಿಂತ ಹೆಚ್ಚಿದೆ. ಈ ಸೀರೆಗಳನ್ನು ಉಟ್ಟು ಹೂವಿನ ರಂಗೋಲಿ ಮುಂದೆ ಪೋಸ್‌ ನೀಡುವುದು ಕೂಡ ಕಾಮನ್‌ ಆಗಿದೆ. ಕಾರ್ಪೋರೇಟ್‌ ಕಚೇರಿಗಳಲ್ಲಿ ಈ ಹಬ್ಬದ ಸೆಲೆಬ್ರೇಷನ್‌ ಕೂಡ ಸಾಮಾನ್ಯವಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ, ಅಲಂಕರಿಸಿಕೊಳ್ಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಐಟಿ ಉದ್ಯೋಗಿ ಭೂಮಿಕಾ ಹಾಗೂ ಛಾಯಾ.

ಕೇರಳದ ಸೀರೆಗಳಿಗೆ ಆದ್ಯತೆ

ಎಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಕೇರಳ ಮೂಲದ ಸೀರೆಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಅವುಗಳಲ್ಲಿ ನಾನಾ ಬಗೆಯ ಗೋಲ್ಡನ್‌ ಬಾರ್ಡರ್‌ ಇರುವಂತಹ ಸೀರೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್‌ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಮಾರಾಟಗಾರರು.

ಈ ಸುದ್ದಿಯನ್ನೂ ಓದಿ | Vikasa Parva movie: ರೋಹಿತ್ ನಾಗೇಶ್ ಅಭಿನಯದ ಸಾಮಾಜಿಕ ಕಳಕಳಿಯ ʼವಿಕಾಸ ಪರ್ವʼ ಚಿತ್ರ ಸೆ.13ಕ್ಕೆ ರಿಲೀಸ್‌

ಓಣಂ ಸೀರೆ ಖರೀದಿಸುವವರಿಗೆ ಸಿಂಪಲ್‌ ಟಿಪ್ಸ್

  • ಮರು ಬಳಕೆ ಮಾಡಬಹುದಾದ ಡಿಸೈನ್‌ನ ಸೀರೆ ಖರೀದಿ ಮಾಡಿ.
  • ಟ್ರೆಡಿಷನಲ್‌ ಲುಕ್‌ ನೀಡುವಂತವನ್ನು ಆಯ್ಕೆ ಮಾಡಿ.
  • ಝರಿ ಬಾರ್ಡರ್‌ನವು ಎವರ್‌ಗ್ರೀನ್‌ ಸೀರೆ ಫ್ಯಾಷನ್‌ನಲ್ಲಿವೆ.