ಪಾಟ್ನಾ: ಇತ್ತೀಚೆಗೆ ಮಕ್ಕಳ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಸಾಲದು. ಅದರಲ್ಲೂ ಹದಿಹರೆಯ ಮಕ್ಕಳ ಮನಸ್ಥಿತಿ ಯಾವಾಗ ಹೇಗೆ ಇರುತ್ತದೆ ಎಂಬುದನ್ನು ಊಹಿಸಲೂ ಅಸಾಧ್ಯ. ಕೆಲವೊಮ್ಮೆ ಮಕ್ಕಳು ಎಂತಹ ಅಪಾಯ ತಂದೊಡ್ಡುತ್ತಾರೆ ಎಂದರೆ ಅದನ್ನು ಅರಗಿಸಿಕೊಳ್ಳೋಕು ಸಾಧ್ಯವಿಲ್ಲ. ಇದೀಗ ಅಂತಹದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಮುಜಾಫರ್‌ಪುರ ಜಿಲ್ಲೆಯ ಖಾಸಗಿ ಕೋಚಿಂಗ್ ಸೆಂಟರ್(Coaching Center)ನ ತರಗತಿಯೊಳಗೆ 16 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕನೊಬ್ಬ ಗುಂಡು(Bihar shootout) ಹಾರಿಸಿದ್ದಾನೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಜಿಲ್ಲೆಯ ಸಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಕೃಷ್ಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಪರಾರಿಯಾಗಿದ್ದಾನೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ 11 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಅವರು ಆ ಕೋಚಿಂಗ್ ಸೆಂಟರ್‌ನಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ನಿನ್ನೆ ತರಗತಿಯಲ್ಲಿ ಇದ್ದಕ್ಕಿದ್ದಂತೆ ಬಾಲಕ ಶೂಟ್ ಮಾಡಿದ್ದಾನೆ. ಬಾಲಕಿಯ ಸೊಂಟಕ್ಕೆ ಗುಂಡೇಟು ಬಿದ್ದಿದ್ದು, ಆಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“ಗುಂಡೇಟುಗಳ ಸದ್ದು ಕೇಳಿದ ನಂತರ ಕೋಚಿಂಗ್ ಸೆಂಟರ್‌ನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆ ವೇಳೆಗಾಗಲೇ ಬಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಂದು ಕೋಚಿಂಗ್ ಸೆಂಟರ್‌ನ ಉದ್ಯೋಗಿಯೊಬ್ಬರು ಹೇಳಿದ್ದಾರೆ.ಗುಂಡು ತಗುಲಿ ಗಾಯಗೊಂಡ ನಂತರ ಸಂತ್ರಸ್ತೆ ನೆಲದ ಮೇಲೆ ಬಿದ್ದಳು. ತಕ್ಷಣವೇ ಇತರ ವಿದ್ಯಾರ್ಥಿಗಳು ಮತ್ತು ಕೋಚಿಂಗ್ ಸೆಂಟರ್ ನೌಕರರು ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು” ಎಂದು ಅವರು ಹೇಳಿದರು.
मेंटोर वाटिका कोचिंग सेंटर में फायरिंग: पिस्टल लेकर पहुंचा था 10वीं का छात्र, क्लास खत्म होते ही कर दिया फायर; गोली लगने से छात्रा घायल@MuzaffarpurPol3 @bihar_police #Bihar #Biharnews pic.twitter.com/9OmQKuAs8t
— FirstBiharJharkhand (@firstbiharnews) September 10, 2024
ಸುದ್ದಿಗಾರರೊಂದಿಗೆ ಮಾತನಾಡಿದ ಸಕ್ರಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜು ಪಾಲ್, “ಹೌದು, ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿನಿಯೊಬ್ಬಳಿಗೆ ಬುಲೆಟ್ ಗಾಯವಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳಿಗೆ ಸಹಾಯ ಮಾಡಲು ಫೋರೆನ್ಸಿಕ್ ತಜ್ಞರನ್ನು ಸಹ ಕರೆಯಲಾಗಿದೆ. ನಾವು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ” ಎಂದು ಎಸ್‌ಎಚ್‌ಒ ಹೇಳಿದರು.
ಯಾರೊಂದಿಗೂ ತಕರಾರು ಇಲ್ಲ ಎನ್ನುತ್ತಾರೆ ವಿದ್ಯಾರ್ಥಿನಿ ಕುಟುಂಬಸ್ಥರು, ಗುಂಡು ಏಕೆ ಹಾರಿದೆ ಎಂಬುದು ಅರ್ಥವಾಗುತ್ತಿಲ್ಲ. ಹೊರಗಿನಿಂದ ಯಾರೂ ತರಗತಿಗೆ ಬಂದಿರಲಿಲ್ಲ ಎಂದು ಕೋಚಿಂಗ್ ಟೀಚರ್ ಕೂಡ ಘಟನೆಯ ಬಗ್ಗೆ ಹೇಳಿದ್ದಾರೆ. ತರಗತಿಯೊಳಗೆ ಘಟನೆ ನಡೆದಿದೆ. ಆರೋಪಿ ವಿದ್ಯಾರ್ಥಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಆತನಿಗೆ ಪಿಸ್ತೂಲ್ ಎಲ್ಲಿಂದ ಬಂತು ಎಂಬುದೂ ತನಿಖೆಯ ವಿಷಯವಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ:America shootout: ರಾಷ್ಟ್ರೀಯ ಹೆದ್ದಾರಿಯಲ್ಲಿ ಶೂಟೌಟ್; ಏಳು ವಾಹನ ಚಾಲಕರಿಗೆ ಗಂಭೀರ ಗಾಯ- ದುಷ್ಕರ್ಮಿ ಎಸ್ಕೇಪ್