Saturday, 23rd November 2024

ICC Test Rankings: ಬಾಂಗ್ಲಾ ಟೆಸ್ಟ್‌ ಸರಣಿಗೂ ಮುನ್ನವೇ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಪ್ರಗತಿ ಕಂಡ ರೋಹಿತ್

Rohit Sharma

ದುಬೈ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ನೂತನ ಟೆಸ್ಟ್‌ ಬ್ಯಾಟಿಂಗ್​(ICC Test Rankings) ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮೂರು ವರ್ಷಗಳ ಬಳಿಕ ಟಾಪ್‌ 5ರೊಳಗೆ ಕಾಣಿಸಿಕೊಂಡರು. ರೋಹಿತ್‌ ಕೊನೆಯ ಬಾರಿಗೆ 5ನೇ ಸ್ಥಾನ ಪಡೆದದ್ದು 2021ರಲ್ಲಿ.

ಬುಧವಾರ ಪ್ರಟಕಗೊಂಡ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ರೋಹಿತ್‌ ಒಂದು ಸ್ಥಾನದ ಪ್ರಗತಿ ಸಾಧಿಸುವುದರೊಂದಿಗೆ 5ನೇ ಸ್ಥಾನ ಪಡೆದರು. ಮತೋರ್ವ ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌(Yashasvi Jaiswal) ಕೂಡ ಒಂದು ಸ್ಥಾನದ ಜಿಗಿತದೊಂದಿಗೆ 6ನೇ ಸ್ಥಾನ, ವಿರಾಟ್‌ ಕೊಹ್ಲಿ(Virat Kohli) 7ನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಮೂರು ಭಾರತೀಯ ಬ್ಯಾಟರ್‌ಗಳು ಟಾಪ್‌ 10ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಗ್ರಸ್ಥಾನದಲ್ಲಿ ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌ ಕಾಣಿಸಿಕೊಂಡಿದ್ದಾರೆ. ಅವರು ಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆಡಿದ ಮೂರು ಟೆಸ್ಟ್‌ ಪಂದ್ಯಗಳಿಂದ ಒಟ್ಟು 375 ರನ್‌ ಕಲೆ ಹಾಕಿದ್ದರು. ಹೀಗಾಗಿ ಅವರು ಅಗ್ರಸ್ಥಾನದಲ್ಲೇ ಮುಂದುವರಿದರು.

ನ್ಯೂಜಿಲ್ಯಾಂಡ್‌ ತಂಡದ ಕೇನ್‌ ವಿಲಿಯಮ್ಸನ್‌(859), ಡೇರಿಯಲ್‌ ಮಿಚೆಲ್(768)‌, ಆಸ್ಟ್ರೇಲಿಯಾದ ಸ್ವೀವನ್‌ ಸ್ಮಿತ್‌(757) ಕ್ರಮವಾಗಿ 2, 3 ಮತ್ತು 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನವೇ ರೋಹಿತ್‌ ಶ್ರೇಯಾಂಕದಲ್ಲಿ ಪಗತಿ ಸಾಧಿಸಿದ್ದು ಅವರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಏಕದಿನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ರೋಹಿತ್‌ 2ನೇ ಸ್ಥಾನಿಯಾಗಿದ್ದಾರೆ.

ರೋಹಿತ್ ಮತ್ತು ಜೈಸ್ವಾಲ್ ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಜೈಸ್ವಾಲ್ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿ 712 ರನ್ ಬಾರಿಸಿದ್ದರು. ರೋಹಿತ್ ಕೂಡ ಎರಡು ಶತಕಗಳನ್ನು ಬಾರಿಸಿ 400 ರನ್‌ಗಳನ್ನು ಕಲೆಹಾಕಿದ್ದರು. ಬಾಂಗ್ಲಾ ಸರಣಿಯಲ್ಲೂ ಉಭಯ ಆಟಗಾರರ ಬ್ಯಾಟಿಂಗ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

ಇದನ್ನೂ ಓದಿ IPL 2025: ರೋಹಿತ್‌ ಲಕ್ನೋ ತಂಡ ಸೇರುವ ಬಗ್ಗೆ ಮಾಲಿಕ ಗೋಯೆಂಕಾ ಹೇಳಿದ್ದೇನು?

ಬೌಲಿಂಗ್‌ ಶ್ರೇಯಾಂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಭಾರತದ ಹಿರಿಯ ಹಾಗೂ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿನ್‌ 870 ರೇಟಿಂಗ್‌ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ 2ನೇ, ರವೀಂದ್ರ ಜಡೇಜಾ 7ನೇ ಸ್ಥಾನ ಪಡೆದಿದ್ದಾರೆ.

ಟಾಪ್‌ 5 ಬ್ಯಾಟರ್‌ಗಳು

ಜೋ ರೂಟ್‌-899 ರೇಟಿಂಗ್‌ ಅಂಕ

ಕೇನ್‌ ವಿಲಿಯಮ್ಸನ್‌-859 ರೇಟಿಂಗ್‌ ಅಂಕ

ಡೇರಿಯಲ್‌ ಮಿಚೆಲ್-768 ರೇಟಿಂಗ್‌ ಅಂಕ

ಸ್ವೀವನ್‌ ಸ್ಮಿತ್‌-757 ರೇಟಿಂಗ್‌ ಅಂಕ

ರೋಹಿತ್‌ ಶರ್ಮ-751 ರೇಟಿಂಗ್‌ ಅಂಕ