Friday, 22nd November 2024

Showroom caught fire: ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲವೆಂದು ಶೋರೂಂಗೆ ಬೆಂಕಿ ಇಟ್ಟ ಭೂಪಾ

ಕಲಬುರಗಿ: ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಅವಘಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ತಗುಲಿಲ್ಲ. ಬದಲಿಗೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲವೆಂದು ಕೋಪಗೊಂಡ ಗ್ರಾಹಕನೋರ್ವ ಇಡೀ ಶೋರೂಂಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ನಗರದ ಹುಮನಬಾದ್ ಬೇಸ್‌ನಲ್ಲಿರೋ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಾಟಲ್‌ನಲ್ಲಿ ಪೆಟ್ರೋಲ್ ಕೊಂಡೊಯ್ದಿದ್ದ ಗ್ರಾಹಕ ಮಹ್ಮದ್ ನದೀಮ್ ಎಂಬಾತ ತನ್ನ ಬೈಕ್ ಸರಿಯಾಗಿ ರಿಪೇರಿ ಆಗಿಲ್ಲವೆಂದು ಸಿಬ್ಬಂದಿಗಳ ಜತೆ ವಾಗ್ವಾದ ನಡೆಸಿದ್ದ ಬಳಿಕ ಶೋರೂಮ್ ಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸರ ತನಿಖೆ ವೇಳೆ ಬೆಂಕಿ ಹಚ್ಚಿರುವ ಕೃತ್ಯ ಬೆಳಕಿಗೆ ಬಂದಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಮಹ್ಮದ್ ‌ನದೀಮ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.