Sunday, 24th November 2024

AksharaDasoha: ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಕನ್ನ.!

ಕಲಬುರಗಿ: ಶಾಲಾ ಮಕ್ಕಳಿಗೆ ನೀಡಲು ಸರಕಾರ ಅಕ್ಷರ ದಾಸೋಹ ಯೋಜನೆಯಡಿ ಕ್ಷೀರ ಭಾಗ್ಯದ ಮೂಲಕ ನೀಡುವ ಹಾಲಿನ ಪೌಡರ್ ಅನ್ನು ಶಾಲಾ ಹೆಡ್ ಮಾಸ್ಟರ್ ನಿಂದಲೇ ಬೇರೆಡೆ ಸಾಗಿಸಿ ಕನ್ನ ಹಾಕುವ ಯತ್ನ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರಕಾರಿ ಶಾಲಾ ಹೆಡ್ ಮಾಸ್ಟರ್ ಶಾಲಾ ಹೆಡ್ ಮಾಸ್ಟರ್ ಖಾಜಪ್ಪಾ ಅವರು ಹಾಲಿನ ಪೌಡರ್ ಗೆ ಕನ್ನ ಹಾಕಲು ಯತ್ನಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, ಚೀಲದಲ್ಲಿ ಹಾಲಿನ ಪೌಡರ್ ತುಂಬಿಕೊಂಡು ಬೈಕ್ ಮೇಲೆ ಬೇರೆಡೆ ಒಯ್ಯುತ್ತಿದ್ದಾಗ ಸಿಕ್ಕಿಬಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಡ್ ಮಾಸ್ಟರ್ ಖಾಜಪ್ಪಾ ಚೀಲದಲ್ಲಿ ಸುಮಾರು 28 ಕೆ.ಜಿ ಯಷ್ಟು ಹಾಲಿನ ಪೌಡರ್ ಒಯ್ತುತ್ತಿದ್ದಾಗ ಗ್ರಾಮದ ಯುವಕರ ಕೈಗೆ ಸಿಕ್ಕಿಬಿದ್ದಿದ್ದು, ನಿತ್ಯ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯಲು ನೀಡುವ ಹಾಲಿನ ಪೌಡರ್ ಗೆ ಕನ್ನ ಹಾಕುತ್ತೀಯಾ ಎಂದು ಹೆಡ್ ಮಾಸ್ಟರ್ ನನ್ನ ಹಿಡಿದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.