Friday, 20th September 2024

President Anand Tiger : ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಆನಂದ ಟೈಗರ್ ಆಯ್ಕೆ

ವೆಂಕಟೇಶ್ ದುದ್ಯಾಳ್

ಚಿಂಚೋಳಿ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ಸ್ವ-ಪಕ್ಷಿಯರಿಂದ ನಾಮಪತ್ರ ಸಲ್ಲಿಸದಂತೆ ಒತ್ತಡ

ಚಿಂಚೋಳಿ: ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಆನಂದ ಟೈಗರ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸುಲ್ತಾನ ಬೇಗಂ ಖಲೀಲ್ ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಹುಮತವಿದ್ದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಲು ವಿಫಲವಾಗಿದೆ.

ಚಿಂಚೋಳಿ ಪುರಸಭೆಯು ಒಟ್ಟು 23 ಸದಸ್ಯ ಸಂಖ್ಯೆ ಬಲ ಹೊಂದಿದ್ದು, ಕಾಂಗ್ರೆಸ್ ಪಕ್ಷ ಸಂಸದ ಸಾಗರ ಖಂಡ್ರೆ ಸೇರಿ 13 ಸದಸ್ಯರೊಂದಿಗೆ ಬಹುಮತ ಹೊಂದಿತು. ಆದರೂ ಸಹ ಸ್ವಪಕ್ಷಿಯ ಅಭ್ಯರ್ಥಿಯನ್ನು ಅಧ್ಯಕ್ಷ ಮಾಡುವ ಬದಲಿಗೆ ಪಕ್ಷೇತರ ಅಭ್ಯರ್ಥಿಗೆ ಮಣೆ ಹಾಕಿದೆ. ಆದರಿಂದ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ತೃಪ್ತಿ ಪಡಬೇಕಾಯಿತು. ಮೊದಲ ಬಾರಿಗೆ ಪುರಸಭೆಗೆ ಆಯ್ಕೆಯಾಗಿರುವ ಆನಂದ ಟೈಗರ್ ಈ ಹಿಂದೇ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದರು. ಇದೀಗ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಬೀದರ್ ಸಂಸದ ಸಾಗರ ಖಂಡ್ರೆ, ಸೇರಿ ಪುರಸಭೆಯ ಸದಸ್ಯರು, ಅಧಿಕಾರಗಳು ಇದ್ದರು.

ನಾಮಪತ್ರ ಸಲ್ಲಿಕೆಗೆ ಸ್ವ-ಪಕ್ಷಿಯರಿಂದಲ್ಲೇ ಅಡಿ: ನಾಮಪತ್ರ ಸಲ್ಲಿಸುವುದಕ್ಕೆ ಬೆಳಗ್ಗೆ 11 ಗಂಟೆಗೆ ಸಮಯ ನಿಗದಿ ಪಡಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಕಾಂಕ್ಷಿ ಜಗನ್ನಾಥ ಗುತ್ತೇದಾರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ವೇಳೆ ಪಕ್ಷದ ಮುಖಂಡ ಸುಭಾಸ್ ರಾಠೋಡ್ ಹಾಗೂ ಪಕ್ಷದ ನೋಡಲ್ ಅಧಿಕಾರಿ ನಾಗೇಶ್ವರ್ ಮಾಲಿ ಪಾಟೀಲ್ ಅವರು ನಾಮಪತ್ರ ಸಲ್ಲಿಕೆಗೆ ಅಡ್ಡ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

*

ಸಚಿವರಾದ ಪ್ರಿಯಾಂಕ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಸುಭಾಷ ರಾಠೋಡ ಅವರ ಸಹಕಾರದಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿದ್ದೇನೆ. ಪುರಸಭೆಯ ಎಲ್ಲಾ ವಾರ್ಡಗಳಿಗೆ ಯಾವುದೇ ಸಮಸ್ಯೆ ಆಗದಂತೆ ಉತ್ತಮ ಆಡಳಿತ ನೀಡುತ್ತೇನೆ.

ಆನಂದ ಟೈಗರ್, ಅಧ್ಯಕ್ಷ, ಚಿಂಚೋಳಿ ಪುರಸಭೆ

ಅಧ್ಯಕ್ಷನಾಗುವ ಎಲ್ಲಾ ರೀತಿಯ ಅಹರ್ತೆ ಇದ್ದರು ಸಹ ಪಕ್ಷೇತರ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ ದ್ದಾರೆ. ಇದಕೆಲ್ಲ ಸುಭಾಷ ರಾಠೋಡ ಅವರೇ ನೇರ ಹೊಣೆ. ಭೋವಿ ವಡ್ಡರ ಸಣ್ಣ ಸಮಾಜವನ್ನು ಅವಕಾಶ ವಂಚಿತ ರಾಗಿಸಿ, ರಾಜಕೀಯವಾಗಿ ಬೆಳೆಯದಂತೆ ತುಳಿಯುವ ಕೆಲಸ ಮಾಡಿದ್ದಾರೆ.

ಜಗನ್ನಾಥ್ ಗುತ್ತೇದಾರ, ಅಧ್ಯಕ್ಷ ಸ್ಥಾನದ ವಂಚಿತ ಸದಸ್ಯ