Friday, 22nd November 2024

Traffic Diversions: ಗಣೇಶ ವಿಸರ್ಜನೆ; ಇಂದು ರಾಜಧಾನಿಯ ಈ ಭಾಗದಲ್ಲಿ ಸಂಚಾರ ಮಾರ್ಗ ಬದಲಾವಣೆ

Traffic Diversions

ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಹಲಸೂರು ಸಂಚಾರ ಠಾಣಾ ವ್ಯಾಪ್ತಿ, ಇಂದಿರಾನಗರದ 80 ಅಡಿ ರಸ್ತೆ ಮತ್ತು ಇಂದಿರಾನಗರ 100 ಅಡಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗಲು ಸೆ.11 ಸಂಜೆಯಿಂದ ಸೆ.12ರ ಗುರುವಾರ ಬೆಳಗ್ಗೆ 6 ಗಂಟೆವರೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಬದಲಾವಣೆ (Traffic Diversions) ಮಾಡಲಾಗಿದೆ.

ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯುವಾಗ ವಾಹನ ದಟ್ಟಣೆ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಈ ಕೆಳಕಂಡಂತೆ ಸಂಚಾರ ಬದಲಾವಣೆಗಳನ್ನು ಸಂಚಾರ ಪೊಲೀಸ್‌ ವಿಭಾಗ ಮಾಡಿದೆ.

ಸಂಚಾರ ನಿರ್ಬಂಧ:

  1. ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್‌ನಿಂದ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಕೆನ್ಸಿಂಗ್ಟನ್ ಜಂಕ್ಷನ್ – ಗುರುದ್ವಾರ ಜಂಕ್ಷನ್‌ವರೆಗೆ
  2. ಗಂಗಾಧರಚೆಟ್ಟಿ ರಸ್ತೆ ನಾಗಮ್ಮ ದೇವಸ್ಥಾನದ ಜಂಕ್ಷನ್‌ನಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್‌ವರೆಗೆ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:

  1. ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ಬರುವ ವಾಹನಗಳು ಆಂಜನೇಯ ಜಂಕ್ಷನ್ ಬಳಿ ಎಡ ತಿರುವು ಪಡೆದು ಸ್ವಾಮಿ ವಿವೇಕಾನಂದ ರಸ್ತೆಯ ಮೂಲಕ ಆದರ್ಶ ಜಂಕ್ಷನ್ – ರಾಮಯ್ಯ ಜಂಕ್ಷನ್ – ಕಾಮಧೇನು ಜಂಕ್ಷನ್ – ಟ್ರಿನಿಟಿ ಜಂಕ್ಷನ್ – ವೆಬ್ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
  2. ಎಂ.ಜಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆ ಚಲಿಸುವ ವಾಹನಗಳು ಟ್ರನಿಟಿ ಜಂಕ್ಷನ್ ಕಾಮಧೇನು ಜಂಕ್ಷನ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ರಾಮಯ್ಯ ಜಂಕ್ಷನ್ – ಆದರ್ಶ ಜಂಕ್ಷನ್ – ಆಂಜನೇಯ ಜಂಕ್ಷನ್ ಬಳಿ ಬಲ ತಿರವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಮುಂದೆ ಸಂಚರಿಸುವುದು.
  3. ಕಬ್ಬನ್ ರಸ್ತೆಯಿಂದ ಬರುವ ವಾಹನಗಳು ಮಣಿಪಾಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು ವೆಬ್ ಜಂಕ್ಷನ್
    ಬಳಿ ಎಡ ತಿರುವು ಪಡೆದು ಟ್ರನಿಟಿ ಜಂಕ್ಷನ್ ಮೂಲಕ ಸ್ವಾಮಿ ವಿವೇಕಾನಂದ ರಸ್ತೆ ಕಡೆಗೆ ಸಂಚರಿಸುವುದು.
  4. ಹಲಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಬೇಗಂ ಮಹಲ್ ಜಂಕ್ಷನ್ ಮೂಲಕ ಬಜಾರ್ ಸ್ಟ್ರೀಟ್ ನಿಂದ ರಾಮಯ್ಯ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.
  5. ಡಿಕೆನ್ಸನ್ ರಸ್ತೆಯಿಂದ ಸೆಂಟ್ ಜಾನ್ಸ್ ರಸ್ತೆಯ ಮೂಲಕ ಗಂಗಾಧರ ಚೆಟ್ಟಿ ರಸ್ತೆ ಕಡೆಗೆ ಬರುವ ವಾಹನಗಳು ಸೆಂಟ್ ಜಾನ್ಸ್ ರಸ್ತೆಯ ನಾಗಮ್ಮ ದೇವಸ್ಥಾನದ ಜಂಕ್ಷನ್ ಮೂಲಕ ಹಾದು ಹೋಗಿ ಶ್ರೀ ಸರ್ಕಲ್ ಬಳಿ ಬಲ ತಿರುವು ಪಡೆದು ಅಜಂತಾ ರಸ್ತೆಯ ಮೂಲಕ ಹಾದು ಆರ್.ಬಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ತಿರುವಳ್ಳವ‌ರ್ ಪ್ರತಿಮೆ ಜಂಕ್ಷನ್ ಬಳಿ ಎಡ ತಿರುವು ಪಡೆದು ಗಂಗಾಧರ ಚೆಟ್ಟಿ ರಸ್ತೆಯ ಮೂಲಕ ಮುಂದೆ ಸಂಚರಿಸುವುದು.

ಈ ಸುದ್ದಿಯನ್ನೂ ಓದಿ | Ganesh Chaturthi 2024 : ಒಂದೇ ದಿನ 48 ಲಕ್ಷ ರೂ.ಗಿಂತ ಹೆಚ್ಚು ಕಾಣಿಕೆ ಪಡೆದ ಮುಂಬಯಿಯ ಗಣೇಶ