Friday, 20th September 2024

Protest: ಅಮೆರಿಕದಲ್ಲಿ ರಾಹುಲ್ ಹೇಳಿಕೆಗೆ ಖಂಡನೆ; ಬಿಜೆಪಿಯ ಸಿಖ್ಖ್ ಘಟಕದಿಂದ ಪ್ರತಿಭಟನೆ

Protest

ನವದೆಹಲಿ: ಸಿಖ್ಖ್ ಸಮುದಾಯಕ್ಕೆ (Sikh community ) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿ (Rahul gandhi) ನೀಡಿರುವ ಹೇಳಿಕೆಗಳನ್ನು ಖಂಡಿಸಿ ದೆಹಲಿ ಬಿಜೆಪಿಯ ಸಿಖ್ಖ್ ಸೆಲ್ (Sikh Prakoshth of BJP) ಸದಸ್ಯರು ಬುಧವಾರ ಅವರ ಮನೆಯ ಹೊರಗೆ ಪ್ರತಿಭಟನೆ (Protest) ನಡೆಸಿದರು. ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ರಾಹುಲ್ ಗಾಂಧಿ ನಿವಾಸದ ಸಮೀಪ ಹೋಗಲು ಪ್ರಯತ್ನಿಸಿದ್ದು ಪೊಲೀಸರು ಅವರನ್ನು ತಡೆದಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಸೋಮವಾರ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಕೆಲವು ಧರ್ಮ, ಭಾಷೆ ಮತ್ತು ಸಮುದಾಯಗಳನ್ನು ಕೀಳು ಎಂದು ಪರಿಗಣಿಸುತ್ತಿದೆ. ಭಾರತದಲ್ಲಿ ಹೋರಾಟವು ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದರು. ಬಳಿಕ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ ಕಾರ್ಯಕ್ರಮದ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬರನ್ನು ಗುರುತಿಸಿ, ಪೇಟ ತೊಟ್ಟ ಸಹೋದರ ನಿನ್ನ ಹೆಸರೇನು ಎಂದು ಕೇಳಿದ್ದರು.

Protest

ಸಿಖ್ಖರು ಭಾರತದಲ್ಲಿ ಪೇಟ ಮತ್ತು ಕೃಪಾಣವನ್ನು ಧರಿಸಲು ಹೋರಾಟ ನಡೆಸಬೇಕಾಗಿದೆ. ಸಿಖ್ಖ್ ಆಗಿ ಗುರುದ್ವಾರಕ್ಕೆ ಹೋಗಲೂ ಹೋರಾಡಬೇಕಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಇದನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೆಹಲಿಯ ಸಿಖ್ಖ್ ಪ್ರಕೋಷ್ಠವು ಸಿಖ್ಖ್ ಸಮುದಾಯದ ಬಗ್ಗೆ ಮಾಡಿರುವ ಹೇಳಿಕೆ ವಿರುದ್ಧ ರಾಹುಲ್ ಮತ್ತು ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು.

ಪ್ರತಿಭಟನೆಯ ವೇಳೆ ಬಿಜೆಪಿ ನಾಯಕ ಆರ್‌ಪಿ ಸಿಂಗ್ ಮತ್ತು ಇತರ ಸಿಖ್ಖ್ ಮುಖಂಡರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯ ವೇಳೆ ಮಾತನಾಡಿರುವ ಆರ್‌.ಪಿ. ಸಿಂಗ್, ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು. ಅವರು ವಿದೇಶಿ ನೆಲದಲ್ಲಿ ಭಾರತದ ಮತ್ತು ಸಿಕ್ಖರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಖ್ಖ್ ಸಮುದಾಯದ ಪ್ರತಿಭಟನಾಕಾರರು ಕೂಡ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಖ್ಖರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕ್ಷಮೆಯಾಚಿಸಲು ಒತ್ತಾಯಿಸಿದರು.

Chalavadi Narayanaswamy: ನೆಹರೂ ಮನೋಭಾವದಲ್ಲೇ ಮೀಸಲು ರದ್ದು ಪ್ರಸ್ತಾಪಿಸಿದ ರಾಹುಲ್; ಬಿಜೆಪಿ ಟೀಕೆ

ದೇಶದಲ್ಲಿ 1984ರ ಸಿಖ್ಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಹೊಣೆಯಾಗಿದೆ. ಸಿಖ್ಖ್ ಸಮುದಾಯದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯು ಭಾರತದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ವಿರೋಧ ಪಕ್ಷದ ನಾಯಕ ವಿದೇಶದಲ್ಲಿ ಭಾರತವನ್ನು ದೂಷಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.