Friday, 20th September 2024

Vijayapura News : ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ

ಇಂಡಿ: ತಾಲೂಕಿನವರಾದ 110 ಕೆವಿ ವಿದ್ಯುತ್‌ ಪ್ರಸರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ. (Vijayapura News) 40 ವರ್ಷ ಸುಧೀರ್ಘ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಯಾರೊಂದಿಗೂ ವೈಷ್ಯಮ್ಯ ಇಲ್ಲದೆ ಅಜಾತ ಶತ್ರು ಆಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ತಂದಿದ್ದಾರೆ. ಇಂತಹ ಒಳ್ಳೆಯ ಸಜ್ಜನ ವ್ಯಕ್ತಿಯ ಬಗ್ಗೆ ಮಾತನಾಡುವುದು ತರವಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

ಸಿಂದಗಿ ರಸ್ತೆಯ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹಿರಿಯರನ್ನು ಗೌರವಿಸುವ ಗುಣ ನಿಮ್ಮಲ್ಲಿ ಇರದಿದ್ದರೆ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಹೆಸರು ಪದೇ ಪದೆ ರಾಜಕಾರಣದಲ್ಲಿ ಬೆರೆಸುವುದು ಸರಿಯಲ್ಲ. ಹಿರಿಯ ರಾಜಕಾರಣಿ ಬಗ್ಗೆ ಸಂಸದ ರಮೇಶ ಜಿಗಜಿಣಗಿಯವರನ್ನು ಅಗೌರವ ಮಾತನಾಡಿರುವುದು ಖಂಡಿಸುತ್ತೇವೆ. ಕೇಂದ್ರ ಸಚಿವ ನೀತಿನ ಗಡ್ಕರಿ ಬೆಳಗಾವಿಯಲ್ಲಿ ರಾಜ್ಯದಲ್ಲಿನ ಹೆದ್ದಾರಿಗಳಿಗೆ ಸಾಮೂಹಿಕವಾಗಿ ಚಾಲನೆ ನೀಡಿದ್ದಾರೆ ವಿನಹ ಆದರೆ ಇಂಡಿಯಲ್ಲಿ ನಡೆದಿದ್ದು ಭೂಮಿ ಪೂಜಾ ಇದು ಶಾಸಕರು ತಿಳಿದುಕೊಳ್ಳಬೇಕು.

ಈ ಹಿಂದೆ ಬಿಜೆಪಿ ಸರಕಾರ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರ ಕಾಲದಲ್ಲಿ ಮಂಜೂರು ಮಾಡಿದ ಅನೇಕ ಕಾಮಗಾರಿಗಳಿಗೆ ನೀವು ಶಾಸಕರಾದ ಮೇಲೆ ಭೂಮಿ ಪೂಜೆ ಮಾಡಿದ್ದೀರಿ ಒಮ್ಮೆಯೂ ಅವರ ಹೆಸರು ಹೇಳಿರಲಿಲ್ಲ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭೂಮಿ ಪೂಜೆ ಮಾಡಿದ್ದು ಕಾರ್ಯಕರ್ತರ ಒತ್ತಾಯದ ಮೇರೆಗೆ ಸಂಸದ ರಮೇಶ ಜಿಗಜಿಣಗಿಯವರು ದೂರವಾಣಿ ಮೂಲಕ ನಿಮಗೆ ಉದ್ಘಾಟನೆಗೆ ಆಮಂತ್ರಿಸಿದ್ದಾರೆ ಆದರೆ ಪ್ರೋಟೋಕಾಲ್ ಪಾಲಿಸಿಲ್ಲ ಎಂದು ಅಪಾಧನೆ ಮಾಡಿರುವುದು ಸರಿಯಾದ ಕ್ರಮವಲ್ಲ.

ಈ ಸುದ್ದಿಯನ್ನೂ ಓದಿ : Mandya violence: ದುಷ್ಕರ್ಮಿಗಳು ಯಾವುದೇ ಧರ್ಮದವರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ: ಸಿಎಂ

ಎನ್.ಟಿ.ಪಿ.ಸಿ ಸುಶೀಲಕುಮಾರ ಸಿಂಧೆ ಯವರಿಂದ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ ಸರಕಾರದ ಅಂದಿನ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಇವರಿಂದ ಆಗಿದೆ ಎಂದು ಸಂಸದರು ಸತ್ಯ ಹೇಳಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಸಾವಿರಾರು ಕೋಟಿ ಅನುಧಾನ ತಂದಿರುವುದು ನಿಮ್ಮ ಹೊಟ್ಟೆ ಉರಿಯಿಂದ ಮಾತನಾಡು ತ್ತಿದ್ದೀರಿ. ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ ಮುಂದಿನ ತಾ.ಪಂ ,ಜಿ,ಪಂ ಚುನಾವಣೆ ಅಧಿಕಾರ ಕಾಂಗ್ರೆಸ್ ಎಂದಿರುವುದು ಹಾಸ್ಯಾಸ್ಪದ ಜನರ ತೀರ್ಮಾನ ಮುಖ್ಯ.

ಪುರಸಭೆ ಚುನಾವಣೆಯಲ್ಲಿ ಹಣ ಇತರೆ ಆಮೀಷಗಳನ್ನು ಒಡ್ಡಿ ಅಧಿಕಾರ ಪಡೆದುಕೊಂಡಿದ್ದೀರಿ. ಈ ಹಿಂದೆ ಬಿಜೆಪಿ ಎರಡು ಬಾರಿ ಪುರಸಭೆ ಮಾಡಿದ ಉದಾಹರಣೆಗಳಿವೆ ನೀವು ಮರೆತಿರಬೇಕು. ಎಲ್ಲವೂ ನಾನೇ ಮಾಡಿರುವೆ ಎಂದು ಹೇಳುತ್ತಿರುವುದು ಖೇದಕರ ಸಂಗತಿ. ಸಂಸದ ರಮೇಶ ಜಿಗಜಿಣಗಿಯವರು ಜಿಲ್ಲೆಯಲ್ಲಿ ಹಿರಿಯರು ಇವರ ಬಗ್ಗೆ ನಿಮಗೆ ಗೌರವ ಇರಲಿ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಹಣಮಂತರಾಯಗೌಡ ಪಾಟೀಲ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಮಹಾದೇವ ರಜಪೂರತ ಪತ್ರಿಕಾಗೋಷ್ಠಿಯಲ್ಲಿದ್ದರು.