Thursday, 19th September 2024

World Dolphin Day 2024: ಇಂದು ವಿಶ್ವ ಡಾಲ್ಫಿನ್ ದಿನ; ಇದರ ಹಿನ್ನೆಲೆ, ಮಹತ್ವವೇನು ಗೊತ್ತೇ?

World Dolphin Day 2024

ಇಂದು ವಿಶ್ವ ಡಾಲ್ಫಿನ್ ದಿನ (World Dolphin Day 2024). ಬುದ್ಧಿವಂತಿಕೆ ಮತ್ತು ವರ್ಚಸ್ಸಿನಿಂದ ಖ್ಯಾತಿ ಪಡೆದಿರುವ ಡಾಲ್ಫಿನ್ ಗಳು ಮಾನವರೊಂದಿಗೆ ಬಹು ಬೇಗನೆ ಹೊಂದಿಕೊಳ್ಳುವ ಗುಣದಿಂದ ಮಾತ್ರವಲ್ಲದೆ ಚುರುಕಿನ ಕಾರ್ಯಗಳು ಮತ್ತು ತಮಾಷೆಯ ನಡವಳಿಕೆಯಿಂದ ಹೆಸರುವಾಸಿಯಾಗಿದೆ. ಸೃಷ್ಟಿಯ ಅದ್ಭುತ ಎಂದೆನಿಸುವ ಈ ಜೀವಿಗಳು ಸಾಂಸ್ಕೃತಿಕ ಮಹತ್ವವನ್ನು ಪಡೆದಿರುವುದು ಮಾತ್ರವಲ್ಲ ಪರಿಸರ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.

ಪರಿಸರ ಸಂರಕ್ಷಣೆಯಲ್ಲಿ (Environmental protection) ಪ್ರತಿಯೊಂದು ಜೀವಿಯು ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ಅದರಲ್ಲೂ ಡಾಲ್ಫಿನ್ ಗಳ (Dolphin) ಕೊಡುಗೆ ಅಪಾರವೆಂದೇ ಹೇಳಬಹುದು. ಆದರೆ ಇವುಗಳೂ ಅಪಾಯದಲ್ಲಿದೆ. ಹೀಗಾಗಿ ವಿಶ್ವದಾದ್ಯಂತ ಈ ಜೀವಿಯ ಸಂರಕ್ಷಣೆಗೆ ಸೆಪ್ಟೆಂಬರ್ 12ರಂದು ವಿಶ್ವ ಡಾಲ್ಫಿನ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಡಾಲ್ಫಿನ್ ಗಳಿಗೆ ಸುರಕ್ಷಿತ, ಸಂತೋಷ ಮತ್ತು ದೀರ್ಘಾವಧಿಯ ಜೀವನ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿಸುವ, ಒದಗಿಸುವಲ್ಲಿ ಮಾನವನ ಕರ್ತವ್ಯವನ್ನು ನೆನಪಿಸಲಾಗುತ್ತದೆ.

ಪ್ರಪಂಚದಾದ್ಯಂತದ ಅನೇಕ ಜಾತಿಯ ಡಾಲ್ಫಿನ್ ಗಳಿವೆ. ಇವುಗಳು ಹೆಚ್ಚಾಗಿ ಬೆಚ್ಚಗಿನ, ಸಮಶೀತೋಷ್ಣ ಮತ್ತು ಶೀತ ಸಮುದ್ರಗಳಲ್ಲಿ ಬದುಕುತ್ತವೆ.. ಸಮುದ್ರ, ನದಿ, ಸರೋವರಗಳಲ್ಲಿ ಕಂಡು ಬರುವ ಇವುಗಳು ಹೆಚ್ಚು ಸೂಕ್ಷ್ಮ ಜೀವಿಗಳೂ ಹೌದು.

World Dolphin Day 2024

ಶಿಳ್ಳೆ ಹೊಡೆಯುವ ಮೂಲಕ ಅಥವಾ ಧ್ವನಿ ತರಂಗ, ಪ್ರತಿಧ್ವನಿಗಳ ಮೂಲಕ ಸಂವಹನ ನಡೆಸುವ ಇವುಗಳ ಕಿವಿ ಅತ್ಯಂತ ಸೂಕ್ಷ್ಮವಾಗಿವೆ. ಸಣ್ಣ ಶಬ್ದವನ್ನೂ ಇವುಗಳು ಕೇಳಿಸಿಕೊಳ್ಳುತ್ತವೆ. ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶ್ವ ಡಾಲ್ಫಿನ್ ದಿನ ಅತ್ಯಂತ ಮಹತ್ವದ್ದಾಗಿದೆ.

ವಿಶ್ವ ಡಾಲ್ಫಿನ್ ದಿನಾಚರಣೆ ಯಾಕೆ?

ಡೆನ್ಮಾರ್ಕ್ ನ ಫೈರೋ ದ್ವೀಪದಲ್ಲಿ 2021ರ ಸೆಪ್ಟೆಂಬರ್ 12ರಂದು ಸಂಪ್ರದಾಯದ ಹೆಸರಿನಲ್ಲಿ 1,400ಕ್ಕೂ ಹೆಚ್ಚು ಡಾಲ್ಫಿನ್‌ಗಳನ್ನು ಹತ್ಯೆ ಮಾಡಲಾಯಿತು. ಬಳಿಕ ವಿಶ್ವದ ಹಲವು ಪ್ರಾಣಿ ಪ್ರಿಯರು, ಪರಿಸರ ಸ್ನೇಹಿಗಳು ಸಂಘಟನೆಯನ್ನು ರೂಪಿಸಿ ಈ ಜೀವಿಗಳ ಹತ್ಯೆಯನ್ನು ಖಂಡಿಸಿದರು. ಡಾಲ್ಫಿನ್‌ಗಳ ರಕ್ಷಣೆಗಾಗಿ ಸೆಪ್ಟೆಂಬರ್ 12 ಅನ್ನು ‘ವಿಶ್ವ ಡಾಲ್ಫಿನ್ ದಿನ’ ಎಂದು ಆಚರಿಸಲು ನಿರ್ಧರಿಸಿದರು. ಸೀ ಶೆಫರ್ಡ್ ಗ್ಲೋಬಲ್‌ನ ಪ್ರಯತ್ನ ಮತ್ತು ಬೆಂಬಲದ ಬಳಿಕ 2022ರಲ್ಲಿ ಮೊದಲ ಬಾರಿಗೆ ವಿಶ್ವ ಡಾಲ್ಫಿನ್ ದಿನವನ್ನು ಆಚರಿಸಲಾಯಿತು.

ಪರಿಸರ ಸಮತೋಲನ ಕಾಪಾಡುವಲ್ಲಿ ಡಾಲ್ಫಿನ್ ಗಳ ಆವಾಸಸ್ಥಾನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವವರಿಗೆ ಡಾಲ್ಫಿನ್‌ಗಳ ಸಂರಕ್ಷಣೆಯು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಪ್ರತಿ ವರ್ಷ ವಿಶ್ವ ಡಾಲ್ಫಿನ್ ದಿನವನ್ನು ಆಚರಿಸಲಾಗುತ್ತಿದೆ.

ಡಾಲ್ಫಿನ್ ವಿಶೇಷತೆ

ಡಾಲ್ಫಿನ್ ನಿದ್ದೆ ಮಾಡಲು ಅರ್ಧ ಮೆದುಳನ್ನು ಮಾತ್ರ ಬಳಸುತ್ತದೆ. ಇದನ್ನು “ಯುನಿಹೆಮಿಸ್ಫಿರಿಕ್ ಸ್ಲೋ-ವೇವ್ ಸ್ಲೀಪ್” ಎನ್ನಲಾಗುತ್ತದೆ. ಯಾವ ಮೆದುಳಿನ ಭಾಗ ನಿದ್ರೆಯಲ್ಲಿರುತ್ತದೋ ಅದರ ವಿರುದ್ಧವಾದ ಕಣ್ಣು ಮುಚ್ಚಿರುತ್ತದೆ. ಇದರಿಂದ ಡಾಲ್ಫಿನ್ ಮಲಗಿರುವಾಗಲೂ ಅದರ ಸುತ್ತಮುತ್ತ ಏನು ನಡೆಯುತ್ತದೆ ಎಂಬುದನ್ನು ನೋಡುತ್ತಿರುತ್ತದೆ. ಇದರ ಮೆದುಳಿನ ಪ್ರತಿಯೊಂದು ಭಾಗವು ಪ್ರತಿ ದಿನ ಸುಮಾರು ನಾಲ್ಕು ಗಂಟೆಗಳ ನಿದ್ದೆಯನ್ನು ಪಡೆಯುತ್ತದೆ.

ಡಾಲ್ಫಿನ್‌ಗಳು ಅತ್ಯಂತ ವೇಗವಾಗಿ ಈಜಬಲ್ಲವು. ಅಪಾಯ ಎದುರಾದಾಗ ಗಂಟೆಗೆ ಸುಮಾರು 25 ಮೈಲುಗಳವರೆಗೆ ಈಜುತ್ತವೆ.

ಡಾಲ್ಫಿನ್ ಗಳು ನೀರಿನ ಮೇಲ್ಮೈಯಿಂದ ಗಾಳಿಯನ್ನು ಉಸಿರಾಡುತ್ತವೆ. ಅವುಗಳು ತಮ್ಮ ಉಸಿರನ್ನು ಮನುಷ್ಯರಿಗಿಂತ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಬಲ್ಲವು. ಹೆಚ್ಚಿನ ಡಾಲ್ಫಿನ್‌ಗಳು 8 ರಿಂದ 10 ನಿಮಿಷಗಳ ಕಾಲ ನೀರಿನ ಒಳಗೆ ಉಸಿರಾಡದೆ ಇರುತ್ತವೆ. ಕೆಲವು ಪ್ರಭೇದಗಳು ಉಸಿರನ್ನು ತೆಗೆದುಕೊಳ್ಳಲು ನೀರಿನಿಂದ ಹೊರಬರುವ ಮೊದಲು 15 ನಿಮಿಷಗಳವರೆಗೆ ನೀರಿನೊಳಗೆ ಇರುತ್ತವೆ.

ಡಾಲ್ಫಿನ್‌ಗಳು ಹೆಚ್ಚು ಬುದ್ಧಿವಂತ, ಸಾಮಾಜಿಕ ಜೀವಿಗಳು. ಅವುಗಳು ಜಂಟಿಯಾಗಿ ವಾಸಿಸುತ್ತವೆ. ಬೇಟೆಯ ಸಂದರ್ಭದಲ್ಲಿ ಒಂದಕ್ಕೊಂದು ಸಹಾಯ ಮಾಡುತ್ತದೆ.

ಡಾಲ್ಫಿನ್ ಗಳು ಕುಟುಂಬ ಸಂಬಂಧವನ್ನು ಹೊಂದಿರುತ್ತದೆ. ಮರಿ ಡಾಲ್ಫಿನ್ ಗಳು ತಾಯಿಯೊಂದಿಗೆ ಏಳು ವರ್ಷಗಳವರೆಗೆ ಇರುತ್ತದೆ. ಇದು ಪ್ರಾಣಿ ಪ್ರಪಂಚದಲ್ಲಿ ಅಪರೂಪವಾಗಿದೆ.

World Dolphin Day 2024

ಅವುಗಳಿಗೂ ವಿಶಿಷ್ಟ ಹೆಸರುಗಳಿರುತ್ತವೆ. ಡಾಲ್ಫಿನ್‌ಗಳು ಒಂದಕ್ಕೊಂದು ಹೆಸರಿನಿಂದ ಕರೆಯುತ್ತವೆ. ಈ ಹೆಸರುಗಳನ್ನೂ 20 ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ಅಪಾಯದಲ್ಲಿರುವ, ಒಬ್ಬರಿಂದ ಒಬ್ಬರು ಬೇರ್ಪಟ್ಟಾಗ ಹೆಸರಿನಿಂದ ಕರೆಯುತ್ತದೆ.

ಡಾಲ್ಫಿನ್ ಗಳ ಗರ್ಭಾವಸ್ಥೆಯ ಅವಧಿಯು ಸರಾಸರಿ 12 ತಿಂಗಳು ಕೆಲವು ಡಾಲ್ಫಿನ್ ಪ್ರಭೇದಗಳು 18 ತಿಂಗಳವರೆಗೆ ಗರ್ಭಧಾರಣೆಯಗಳನ್ನು ಹೊಂದಿರುತ್ತವೆ.

ಓರ್ಕಾ ಎಂದೂ ಕರೆಯಲ್ಪಡುವ ತಿಮಿಂಗಿಲವು ಡಾಲ್ಫಿನ್‌ನ ಅತಿದೊಡ್ಡ ಜಾತಿಯಾಗಿದೆ. ಇದು ಅಪಾಯಕಾರಿ ಅಗಿದ್ದು, ಹೆಚ್ಚಾಗಿ ಸಾಗರಗಳಲ್ಲಿ ವಾಸಿಸುತ್ತವೆ.ಅಂಟಾರ್ಕ್ಟಿಕಾ, ಅಲಾಸ್ಕಾ ಮತ್ತು ಉತ್ತರ ಪೆಸಿಫಿಕ್ ಮಹಾಸಾಗರದ ಸುತ್ತಮುತ್ತಲಿನ ತಂಪಾದ ನೀರಿನಲ್ಲಿ ಕಂಡು ಬರುತ್ತವೆ.

ಡಾಲ್ಫಿನ್ ಹೆಚ್ಚಾಗಿ ನಗುತ್ತಿರುವಂತೆ ಭಾಸವಾದರೂ ಅವುಗಳು ನಗುವುದಿಲ್ಲ. ಅವುಗಳ ಮುಖದ ನೋಟವು ಅದರ ದವಡೆಯ ಆಕಾರದಿಂದಾಗಿದೆ.

Salman Khan: ಬರೋಬ್ಬರಿ 174 ವಜ್ರಗಳಿರುವ ಕಾಸ್ಟ್ಲೀ ವಾಚ್‌ ಇದು! ಸಲ್ಲು ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ

ಭಾರತದಲ್ಲಿ ಡಾಲ್ಫಿನ್ ಗಳು

ಭಾರತದಲ್ಲಿ ಡಾಲ್ಫಿನ್ ಗಳು ಕರಾವಳಿ ಮತ್ತು ಸಿಹಿ ನೀರಿನ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇವುಗಳಲ್ಲಿ ಎರಡು ಪ್ರಮುಖ ಜಾತಿಗಳೆಂದರೆ ಇಂಡೋ- ಪೆಸಿಫಿಕ್ ಹಂಪ್‌ ಬ್ಯಾಕ್ ಡಾಲ್ಫಿನ್ ಮತ್ತು ಗಂಗಾ ನದಿ ಡಾಲ್ಫಿನ್. ಗಂಗಾ ನದಿ ಡಾಲ್ಫಿನ್ ಗುಲಾಬಿ ಬಣ್ಣದಲ್ಲಿದ್ದು ಸಿಹಿನೀರಿನ ಪರಿಸರಕ್ಕೆ ಹೊಂದಿಕೊಳ್ಳುವ ವಿಶಿಷ್ಟತೆಯಿಂದಾಗಿ ಗಂಗಾ, ಬ್ರಹ್ಮಪುತ್ರ ಮತ್ತು ಅವುಗಳ ಉಪನದಿಗಳಲ್ಲಿ ಕಂಡು ಬರುತ್ತವೆ.

ಡಾಲ್ಫಿನ್ ಗಳಿಗೆ ಯಾವುದರಿಂದ ಅಪಾಯ?

ಆವಾಸಸ್ಥಾನದ ವಿನಾಶ, ಜಲಮಾಲಿನ್ಯ, ಮೀನುಗಾರಿಕೆ, ಅಣೆಕಟ್ಟುಗಳಿಂದ ನೀರಿನ ಹರಿವಿಗೆ ಅಡ್ಡಿ, ಹವಾಮಾನ ಬದಲಾವಣೆಯಿಂದ ಡಾಲ್ಫಿನ್ ಗಳು ಅಪಾಯವನ್ನು ಎದುರಿಸುತ್ತಿವೆ.