Friday, 22nd November 2024

Eid Milad 2024: ಈದ್‌ ಮಿಲಾದ್‌ ಸೆಲೆಬ್ರೆಷನ್‌ಗೆ ಬಂತು ಬಗೆಬಗೆಯ ಬ್ಯಾಂಗಲ್ಸ್!

Eid Milad 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು (ಲೇಖಕಿ, ಫ್ಯಾಷನ್‌ ಪತ್ರಕರ್ತೆ)

ಈ ಫೆಸ್ಟಿವ್‌ ಸೀಸನ್‌ನಲ್ಲಿ ಆಗಮಿಸುತ್ತಿರುವ ಈದ್‌ ಮಿಲಾದ್‌ ಸೆಲೆಬ್ರೇಷನ್‌ಗೆಂದು (Eid Milad 2024) ಈಗಾಗಲೇ ಮಾರುಕಟ್ಟೆಯಲ್ಲಿ ಜಗಮಗಿಸುವ ನಾನಾ ಬಗೆಯ ಬ್ಯಾಂಗಲ್ಸ್ ಕಾಲಿಟ್ಟಿವೆ. ಈದ್‌ ಮಿಲಾದ್‌ ಸಂಭ್ರಮಿಸುವ ಹಬ್ಬ. ಈ ಹಬ್ಬಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ಮಿರ ಮಿರ ಮಿನುಗುವ ಬಳೆಗಳು (bangles Design) ಈಗಾಗಲೇ ಫ್ಯಾನ್ಸಿ ಶಾಪ್‌ಗಳಲ್ಲಿ ಬಂದಿವೆ. ಈ ಹಬ್ಬಕ್ಕೆ ಕಣ್ಣಿಗೆ ಎದ್ದು ಕಾಣುವಂತಹ ಜಗಮಗಿಸುವ ನಾನಾ ವೆರೈಟಿ ಬ್ಯಾಂಗಲ್‌ಗಳು ಲಗ್ಗೆ ಇಟ್ಟಿವೆ. ಅವುಗಳಲ್ಲಿ ಮೆಟಲ್‌, ಫೈಬರ್‌, ಪ್ಲಾಸ್ಟಿಕ್‌, ವುಡನ್‌ ಹಾಗೂ ಇನ್ನಿತರೆ ಮೆಟಿರಿಯಲ್‌ನ ಬಳೆಗಳು ಸೇರಿವೆ.

ಚಿತ್ರಗಳು: ಮಿಂಚು

ಮನಸೆಳೆಯುವ ಬಳೆಗಳು

ಇಂದು ಗಾಜಿನ ಬಳೆಗಳಿಗಿಂತ ಹೆಚ್ಚು ಬಾಳಿಕೆ ಬರುವಂತಹ ಇತರೆ ಮೆಟಿರಿಯಲ್‌ನ ಬಳೆಗಳಿಗೆ ಹೆಚ್ಚು ಡಿಮ್ಯಾಂಡ್‌. ಅದರಲ್ಲೂ ಧರಿಸಿದಾಗ ಎಲ್ಲರ ಕಣ್ಣು ಧರಿಸಿರುವ ಬಳೆಗಳ ಮೇಲೆ ಸೆಳೆಯುವಂತಹ ಜಗಮಗಿಸುವ ಬಳೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾನ್ಸಿ ಶಾಪ್‌ವೊಂದರ ಸೇಲ್ಸ್ ಮ್ಯಾನ್‌.

ಇದನ್ನೂ ಓದಿ: World Dolphin Day 2024: ಇಂದು ವಿಶ್ವ ಡಾಲ್ಫಿನ್ ದಿನ; ಇದರ ಹಿನ್ನೆಲೆ, ಮಹತ್ವವೇನು ಗೊತ್ತೇ?

ಜಗಮಗಿಸುವ ಬ್ಯಾಂಗಲ್‌ ಸೆಟ್‌

ಈ ಫೆಸ್ಟಿವ್‌ ಸೀಸನ್‌ನಲ್ಲಿ ಸಿಂಗಲ್‌ ಬಳೆಗಳಿಗಿಂತ ಮಿನುಗುವ ಸೆಟ್‌ ಬ್ಯಾಂಗಲ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಹೌದು. ಕೆಲವು ಒಂದು ಸೆಟ್‌ನಲ್ಲಿ 12 ಬಳೆಗಿರುತ್ತವೆ. ಇನ್ನು ಕೆಲವಲ್ಲಿ 6 ಇರುತ್ತವೆ. ಎಲ್ಲಾ ಬಣ್ಣದಲ್ಲೂ ಇವು ಲಭ್ಯ. ನಾನಾ ಗ್ರ್ಯಾಂಡ್‌ ವಿನ್ಯಾಸದಲ್ಲಿ ದೊರೆಯುತ್ತಿವೆ.

ಗೋಲ್ಡನ್ ಬಳೆಗಳಿಗೆ ಬೇಡಿಕೆ

ಶೈನಿಂಗ್‌ ಶೇಡ್‌ಗಳಲ್ಲಿ ಅದರಲ್ಲೂ ಗೋಲ್ಡನ್‌ ಹಾಗೂ ಸಿಲ್ವರ್‌ ಕಲರ್‌ನವು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಸೆಟ್‌ ಬ್ಯಾಂಗಲ್ಸ್ ಮಧ್ಯೆ ಬಿಗ್‌ ಗೋಲ್ಡನ್‌ ಬ್ಯಾಂಗಲ್‌ಗಳು ಸೇರಿಕೊಂಡಿವೆ. ಇವು ಸೈಡ್‌ ಬ್ಯಾಂಗಲ್‌ಗಳ ಅಂದ ಹೆಚ್ಚಿಸುತ್ತವೆ ಎನ್ನುತ್ತಾರೆ ಆಕ್ಸೆಸರೀಸ್‌ ಸ್ಟೈಲಿಸ್ಟ್‌ಗಳು.

ಜಗಮಗಿಸುವ ಬ್ಯಾಂಗಲ್ಸ್ ಪ್ರಿಯರಿಗೆ ಟಿಪ್ಸ್‌

· ಗೋಲ್ಡನ್‌ ಶೇಡ್‌ನವು ಟ್ರೆಂಡಿಯಾಗಿವೆ. ಎಲ್ಲದಕ್ಕೂ ಹೊಂದುತ್ತವೆ.
· ಎಲ್ಲಾ ಮೆಟಿರಿಯಲ್‌ನಲ್ಲೂ ಈ ಡಿಸೈನ್‌ನವು ಲಭ್ಯ.
· ಹಬ್ಬ ಹೊರತುಪಡಿಸಿ ಇತರೆ ಗ್ರ್ಯಾಂಡ್‌ ಸಮಾರಂಭಕ್ಕೂ ಧರಿಸಬಹುದು.
· ಬಂಗಾರದ ಆಭರಣಗಳೊಂದಿಗೂ ಇವು ಮ್ಯಾಚ್‌ ಆಗುತ್ತವೆ.
· ಆದಷ್ಟೂ ಕೊಂಚ ಸುಲಭವಾಗಿ ಧರಿಸಬಹುದಾದ ಸೈಝ್‌ನವನ್ನು ಆಯ್ಕೆ ಮಾಡಿಕೊಳ್ಳಿ.
· ಮ್ಯಾಚಿಂಗ್‌ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುತ್ತದೆ.
· ಧೂಳು ಹಿಡಿಯದಂತೆ ಎತ್ತಿಟ್ಟಲ್ಲಿ ಆಕರ್ಷಣೆ ಕುಂದುವುದಿಲ್ಲ.