Friday, 22nd November 2024

Kalaburagi News: ತಡಕಲನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಗ್ರಾಮೀಣ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ

ಆಳಂದ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸೂಕ್ತ ಪ್ರತಿಭಾ ಕಾರಂಜಿಯಾಗಿದೆ ಎಂದು ಆಳಂದ ಆಶ್ರಯ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಅಂಬಾರಾಯ ಕಾಂಬಳೆ ನುಡಿದರು.

ತಾಲೂಕಿನ ತಡಕಲ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ೨೦೨೪-೨೫ನೇ ಸಾಲಿನ ತಡಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯಾವಸ್ಥೆ ಯಲ್ಲಿ ಮಕ್ಕಳು ಟಿವಿ, ಮೊಬೈಲ್ ಗೀಳಿನಿಂದ ಹೊರಬಂದು ಜಾನಪದ, ದೇಶೀಯ ಕಲೆಗಳನ್ನು, ಸಾಹಿತ್ಯ ಬರವಣಿಗೆ ಆಸಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿನ ಗುಣಾತ್ಮಕ ಶಿಕ್ಷಣ ಭವಿಷ್ಯದ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಯಾಗಲಿದೆ. ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ನಿರ್ಣಾಯಕರಾದ ಶಿಕ್ಷಕರು ನೈಜ ಪ್ರತಿಭೆಗಳನ್ನು ಗುರುತಿಸಿಮೂಲಕ ತಾಲೂಕು, ಜಿಲ್ಲಾ,ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಅನೀಲ ಜಮಾದಾರ
ಜೈ ಭೀಮ್ ತರುಣ ಸಂಘ ಅಧ್ಯಕ್ಷ ಪರಶುರಾಮ ರುದ್ರವಾಡಿ ಭಾವಚಿತ್ರಕ್ಕೆ ಪೂಜೆ ನೇರವೇರಿಸಿದರು.

ಸಿಆರ್‌ಸಿ ಶಬ್ಬೀರ ಅಲಿ, ಸಿದ್ದಾರ್ಥ ಅಟ್ಟೂರ ಪ್ರಾಸ್ಥವಿಕವಾಗಿ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಭೆ ಇರುತ್ತದೆ ಈ ಪ್ರತಿಭೆಯನ್ನು ಹೊರ ತರುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಪ್ರಾಸ್ತಾವಿಕ ನುಡಿದರು.

ಶಿಕ್ಷಕರರಾದ ಶರಣಬಸಪ್ಪ ವಡಗಾಂವ, ಶಿವಶರಣಪ್ಪ ಪೂಜಾರಿ, ವಿಠ್ಠಲ ಕಾಂದೆ, ನಸಿರೋದ್ದೀನ ಗೋಳಾ, ಶಿವಾನಂದ ಝಳಕಿ, ಸಾಹೇಬಗೌಡ ಪಾಟೀಲ್, ಮಹಾದೇವಿ ಅಷ್ಠಗಿ ಸೇರಿದಂತೆ ಕ್ಲಸ್ಟರ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವೀರಭದ್ರಪ್ಪ ಹಾರಕಿ ನಿರೂಪಿಸಿದರೆ, ಆನಂದ ಕೋಣಗುತ್ತಿ ಸ್ವಾಗತಿಸಿದರು. ಮಲ್ಲಿನಾಥ್ ವಚ್ಚೆ ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ಕಂಠಪಾಠ ಆಶುಭಾಷಣ, ಛದ್ಮ ವೇಷ, ಪ್ರಬಂಧ, ಸಂಗೀತ, ರಸಪ್ರಶ್ನೆ, ರಂಗೋಲಿ, ಕ್ಲೇ ಮಾಡಲಿಂಗ್, ಧಾರ್ಮಿಕ ಪಠಣ, ಚರ್ಚಾ ಸ್ಪರ್ಧೆ ನಡೆದು ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಸತ್ಕರಿಸಲಾಯಿತು.