Saturday, 23rd November 2024

Tata Power and Tata Motors: ವಿದ್ಯುತ್ ವಾಣಿಜ್ಯ ವಾಹನಗಳಿಗಾಗಿ 200 ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಎಂಓಯು ಗೆ ಸಹಿ ಹಾಕಿದ ಟಾಟಾ ಪವರ್ ರಿನೀವೇಬಲ್ ಎನರ್ಜಿ ಮತ್ತು ಟಾಟಾ ಮೋಟಾರ್ಸ್

ಬೆಂಗಳೂರು: ಟಾಟಾ ಪವರ್ ರಿನೀವೇಬಲ್ ಎನರ್ಜಿ ಲಿಮಿಟೆಡ್‌ನ ಅಂಗಸಂಸ್ಥೆ ಮತ್ತು ಭಾರತದ ಅತಿದೊಡ್ಡ ಇವಿ ಚಾರ್ಜಿಂಗ್ ಉತ್ಪನ್ನ ಪೂರೈಕೆದಾರರಲ್ಲಿ ಒಂದಾಗಿರುವ ಟಾಟಾ ಪವರ್ ಇವಿ ಚಾರ್ಜಿಂಗ್ ಸೊಲ್ಯೂಷನ್ಸ್ ಲಿಮಿಟೆಡ್ ಇಂದು ವಿದ್ಯುತ್ ವಾಣಿಜ್ಯ ವಾಹನಗಳಿಗಾಗಿ ಭಾರತದ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ 200 ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್‌ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಈ ಸಂಸ್ಥೆಗಳು ಈಗಾಗಲೇ ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸಲು ಮಾಡಿಕೊಂಡಿದ್ದು, ಈ ಹೊಸ ಸಹಯೋಗದ ಮೂಲಕ ಸಣ್ಣ ವಿದ್ಯುತ್ ವಾಣಿಜ್ಯ ವಾಹನಗಳಿಗೆ ಸುಲಭವಾದ ಚಾರ್ಜಿಂಗ್ ಸೌಲಭ್ಯ ಒದಗಿಸಲು ಕಾರ್ಯ ನಿರ್ವಹಿಸಲಿದೆ.

ಈ ಯೋಜನೆಯ ಭಾಗವಾಗಿ ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಸಂಸ್ಥೆಗಳು ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಸಿವಿ ಮಾಲೀಕರಿಗೆ ವಿಶೇಷ ಚಾರ್ಜಿಂಗ್ ಶುಲ್ಕಗಳನ್ನು ಹಾಕಲಿದ್ದು, ಬದಲಿಗೆ ಗ್ರಾಹಕರು ಕಡಿಮೆ ನಿರ್ವಹಣಾ ವೆಚ್ಚದ ಲಾಭ ಪಡೆಯುತ್ತಾರೆ ಮತ್ತು ಅದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭದಾಯಕತೆ ಒದಗುತ್ತದೆ. ಚಾರ್ಜಿಂಗ್ ನೆಟ್‌ವರ್ಕ್‌ ವಿಸ್ತರಣೆ ಮಾಡುವ ಮೂಲಕ ದೇಶದಾದ್ಯಂತ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಳಕೆದಾರರು ಶೀಘ್ರದಲ್ಲೇ ಸುಮಾರು 1000 ಪಾಸ್ಟ್ ಚಾರ್ಜರ್‌ಗಳ ಪ್ರಯೋಜನ ಪಡೆಯಲಿದ್ದಾರೆ.

ಈ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್‌ನ ಎಸ್‌ಸಿವಿ ಮತ್ತು ಪಿಯು ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ. ವಿನಯ್ ಪಾಠಕ್ ಅವರು, “ಟಾಟಾ ಪವರ್‌ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಸಂತೋಷ ಪಡುತ್ತೇವೆ. ಈ ಸಹಯೋಗದ ಮೂಲಕ ವಿದ್ಯುತ್ ವಾಣಿಜ್ಯ ವಾಹನ ಕ್ಷೇತ್ರಕ್ಕೆ ನೆರವಾಗಲು ಮತ್ತು ಬದಲಿಸಲು ದೇಶದ ಅನುಕೂಲಕರ ಸ್ಥಳಗಳಲ್ಲಿ ಫಾಸ್ಟ್ ಚಾರ್ಜರ್‌ಗಳನ್ನು ಸ್ಥಾಪಿಸಲು ನಾವು ಸಂತೋಷ ಪಡುತ್ತೇವೆ. ಈ ಮೂಲಕ ನಾವು ವಿಶ್ವದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವುದರ ಜೊತೆಗೆ ಅದಕ್ಕೆ ಅಗತ್ಯವಾಗಿರುವ ಪರಿಸರ ವ್ಯವಸ್ಥೆಯನ್ನು ರೂಪಿಸುವ ಮೂಲಕ ಈ ಪರಿಸರ ಸ್ನೇಹಿ ಮತ್ತು ಹೊರಸೂಸುವಿಕೆ-ಮುಕ್ತ ವಾಹನಗಳ ಬಳಕೆಯನ್ನು ಹೆಚ್ಚುಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಸಹಭಾಗಿತ್ವದ ಮೂಲಕ ಎಲೆಕ್ಟ್ರಿಕ್ ವಾಹನ ಕಾರ್ಯಾಚರಣೆಗಳನ್ನು ಮತ್ತಷ್ಟು ಉತ್ತಮ ಗೊಳಿಸಲು ನವೀಕರಿಸಬಹುದಾದ ಶಕ್ತಿಯ ಬಳಕೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ಈ ಕುರಿತು ಟಾಟಾ ಪವರ್ ರಿನೀವೇಬಲ್ ಎನರ್ಜಿ ಲಿಮಿಟೆಡ್‌ನ ಸಿಇಒ ಮತ್ತು ಎಂಡಿ ಶ್ರೀ ದೀಪೇಶ್ ನಂದಾ ಮಾತನಾಡಿ, “ದೇಶದಾದ್ಯಂತ ಅತಿ ದೊಡ್ಡ ಇವಿ ಚಾರ್ಜಿಂಗ್ ನೆಟ್‌ವರ್ಕ್‌ಗಳಲ್ಲಿ ಒಂದಾಗಿರುವ ಟಾಟಾ ಪವರ್ ದೇಶಾದ್ಯಂತ ವಿಶ್ವಾಸಾರ್ಹ ಮತ್ತು ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಉತ್ಪನ್ನಗಳ ಮೂಲಕ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ನೆರವಾಗುತ್ತಿದೆ. ಸಾರ್ವಜನಿಕ, ಅರೆ-ಸಾರ್ವಜನಿಕ, ಬಸ್/ಫ್ಲೀಟ್ ಮತ್ತು ಹೋಮ್ ಚಾರ್ಜರ್‌ಗಳಂತಹ ವಿವಿಧ ವಿಭಾಗಗಳಲ್ಲಿ ಈಗಾಗಲೇ ಪ್ರಸ್ತುತವಾಗಿರುವ ನಾವು ಇದೀಗ

ವಾಣಿಜ್ಯ ವಾಹನ ಚಾರ್ಜಿಂಗ್ ವಿಭಾಗಕ್ಕೆ ಕಾಲಿಡುತ್ತಿದ್ದೇವೆ ಮತ್ತು ಸಮಗ್ರ ಇವಿ ಚಾರ್ಜಿಂಗ್ ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ. ಈ ಸಹಯೋಗವು ಭಾರತದಾದ್ಯಂತ ವಿಶ್ವಾಸಾರ್ಹ ಇವಿ ಚಾರ್ಜಿಂಗ್ ನೆಟ್‌ವರ್ಕ್ ಒದಗಿಸುವ ಮತ್ತು ಇ-ಸಾರಿಗೆಯನ್ನು ಅಭಿವೃದ್ಧಿಗೊಳಿಸುವ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.

ಟಾಟಾ ಪವರ್ ಸಂಸ್ಥೆಯು ಇಝಡ್ ಚಾರ್ಜ್‌ ಬ್ರಾಂಡ್ ಹೆಸರಿನಲ್ಲಿ 1100+ ಬಸ್ ಚಾರ್ಜಿಂಗ್ ಸ್ಟೇಷನ್‌ಗಳು, 1,00,000 ಹೋಮ್ ಚಾರ್ಜರ್‌ಗಳು, 5,500+ ಸಾರ್ವಜನಿಕ, ಅರೆ-ಸಾರ್ವಜನಿಕ ಮತ್ತು ಫ್ಲೀಟ್ ಚಾರ್ಜಿಂಗ್ ಪಾಯಿಂಟ್‌ ಗಳನ್ನು ಹೊಂದಿದ್ದು, 530 ನಗರಗಳು ಮತ್ತು ಪಟ್ಟಣಗಳಲ್ಲಿ ಉಪಸ್ಥಿತಿ ಹೊಂದಿದೆ. ಈ ಚಾರ್ಜರ್‌ ಗಳನ್ನು ಹೆದ್ದಾರಿಗಳು, ಹೋಟೆಲ್‌ಗಳು, ಮಾಲ್‌ಗಳು, ಆಸ್ಪತ್ರೆಗಳು, ಕಚೇರಿಗಳು, ವಸತಿ ಸಂಕೀರ್ಣ ಗಳಂತಹ ವಿವಿಧ ಮತ್ತು ಸುಲಭವಾಗಿ ದೊರೆಕುವ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈ ಸಂಘಟಿತ ಪ್ರಯತ್ನವು ಭಾರತದಲ್ಲಿ ವಿದ್ಯುತ್ ಸಾರಿಗೆ ಕ್ಷೇತ್ರದ ಬೆಳವಣಿಗೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖವಾಗಿದೆ.

ಟಾಟಾ ಮೋಟಾರ್ಸ್ ಸಂಸ್ಥೆಯು ಭಾರತದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನವಾಗಿರುವ ಏಸ್ ಇವಿ ಅನ್ನು ಒದಗಿಸುತ್ತಿದ್ದು, ಈ ವಾಹನಕ್ಕೆ ರಾಷ್ಟ್ರವ್ಯಾಪಿ ಇರುವ 150ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸೇವಾ ಕೇಂದ್ರಗಳಲ್ಲಿ ನೆರವು ದೊರೆಯುತ್ತದೆ. ಏಸ್ ಇವಿಯು ಅತ್ಯಾಧುನಿಕ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು ‘ಫ್ಲೀಟ್ ಎಡ್ಜ್’ ಟೆಲಿಮ್ಯಾಟಿಕ್ಸ್ ಅನ್ನು ಹೊದಿದೆ. ವಾಹನದ ಸ್ಥಿತಿ, ಆರೋಗ್ಯ, ಇರುವ ಸ್ಥಳ ಮತ್ತು ಚಾಲಕನ ನಡವಳಿಕೆಯ ಕುರಿತು ತಕ್ಷಣ ಮಾಹಿತಿಯನ್ನು ನೀಡುವಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಿಂದ ರೂಪುಗೊಳಿಸಿದ್ದು, ವಾಹನದ ದಕ್ಷತೆ ನೋಡಿಕೊಳ್ಳಬಹುದು ಮತ್ತು ರಸ್ತೆಯಲ್ಲಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು.