Friday, 22nd November 2024

Cow Rescue Operation: ಏಣಿ ಮೂಲಕವೇ 70 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಹಸು; ಇಳಿಸಲು ಹರಸಾಹಸಪಟ್ಟ ಅಧಿಕಾರಿಗಳು!

Cow Rescue Operation

ಲಕ್ನೋ: ಸುಮಾರು 70 ಅಡಿ ಎತ್ತರದ ನೀರಿನ ಟ್ಯಾಂಕ್ (water tank) ಏರಿದ ಹಸುವೊಂದು (Cow Rescue Operation) ಕೆಲಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಉತ್ತರ ಪ್ರದೇಶದ (uttar pradesh) ಲಕ್ನೋದಲ್ಲಿ ನಡೆದಿದೆ. ಲಕ್ನೋದ ಆಲಂಬಾಗ್‌ನಲ್ಲಿಈ ಪ್ರಸಂಗ ನಡೆದಿದ್ದು, ಹಸು 70 ಅಡಿ ಎತ್ತರದ ನೀರಿನ ಟ್ಯಾಂಕ್ ಏರಿದೆ. ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಹಸುವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದ್ ನಗರದ ಮಾನವವರ್ ಬಾಗ್ ರೈಲ್ವೇ ಕಾಲೋನಿಯಲ್ಲಿ ಘಟನೆ ಇದಾಗಿದ್ದು, ವಿಚಿತ್ರ ಘಟನೆಯನ್ನು ನೋಡಲು ನೂರಾರು ಮಂದಿ ಅಲ್ಲಿ ಜಮಾಯಿಸಿದ್ದರು.

ರೈಲ್ವೆ ಇಲಾಖೆಗೆ ಸೇರಿದ ಓವರ್ ಹೆಡ್ ವಾಟರ್ ಟ್ಯಾಂಕ್ ಮೇಲೆ ಹಸುವೊಂದು ಹತ್ತಿತ್ತು. ಎತ್ತರಕ್ಕೆ ಏರಿದ್ದ ಹಸುವನ್ನು ನೋಡಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ತಕ್ಷಣ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡ ಆಗಮಿಸಿ ದನವನ್ನು ಉಳಿಸಿದ್ದಾರೆ.

Cow Rescue Operation

ಬಳಿಕ ಹೈಡ್ರಾಲಿಕ್ ಕ್ರೇನ್ ತರಿಸಿ ಹಸುವನ್ನು ಕೆಳಗೆ ಇಳಿಸಲು ಪ್ರಯತ್ನಿಸಲಾಯಿತು. ಆದರೆ ಇದು ಸಾಧ್ಯವಾಗದ ಕಾರಣ ಬಳಿಕ ಪೋಕ್ಲಿನ್ ಯಂತ್ರವನ್ನು ತರಿಸಿ ಕಾರ್ಯಾಚರಣೆ ನಡೆಸಲಾಯಿತು. ರಕ್ಷಣಾ ಕಾರ್ಯಾಚರಣೆ ಆರಂಭಗೊಂಡ ಬಳಿಕ ಭಾರೀ ಮಳೆ ಸಮಸ್ಯೆಯೂ ಎದುರಾಯಿತು. ಜತೆಗೆ ಟ್ಯಾಂಕ್‌ನ ಎತ್ತರದಿಂದಾಗಿ ಹಸುವನ್ನು ಕೆಳಗಿಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತು.

Cyber Awareness: ಹ್ಯಾಕರ್‌ಗಳು ಸಂಘಟಿತರಾಗಿದ್ದಾರೆ: ಕೆ. ವೆಂಕಟೇಶ್ ಮೂರ್ತಿ

ಅಗ್ನಿಶಾಮಕ ದಳದ ಸಿಬ್ಬಂದಿ ಹಸುವನ್ನು ಸುರಕ್ಷಿತವಾಗಿಡಲು ಟ್ಯಾಂಕ್‌ನ ಎರಡೂ ಬದಿಗಳಲ್ಲಿ ತಡೆ ಕಟ್ಟಿದ್ದರು. ಹಸುವಿದ್ದ ಎತ್ತರವನ್ನು ಹೈಡ್ರಾಲಿಕ್ ಕ್ರೇನ್ ನಿಂದ ತಲುಪಲು ಸಾಧ್ಯವಾಗಲಿಲ್ಲ. ಅಲ್ಲದೇ ಕ್ರೇನ್‌ ಕೆಸರಿನಲ್ಲಿ ಸಿಲುಕಿಕೊಂಡಿತು. ಬಳಿಕ ಭಾರೀ ಗಾತ್ರದ ಪೊಕ್ಲಿನ್ ಯಂತ್ರದಿಂದ ಕ್ರೇನ್ ಅನ್ನು ಕೆಸರಿನಿಂದ ಹೊರತೆಗೆಯುವ ಕಾರ್ಯಾಚರಣೆ ತಡರಾತ್ರಿಯವರೆಗೂ ನಡೆಯಿತು.

ರಾತ್ರಿಯಿಡಿ ಕಾರ್ಯಾಚರಣೆಯ ಬಳಿಕ ಆಲಂಬಾಗ್ ಪೊಲೀಸರು, ಅಗ್ನಿಶಾಮಕ ದಳ, ಮುನ್ಸಿಪಲ್ ಕಾರ್ಪೊರೇಷನ್ ವಲಯ 5 ಮತ್ತು ರೈಲ್ವೆ ತಂಡಗಳು ಸುರಕ್ಷಿತವಾಗಿ ಹಸುವನ್ನು ಕೆಳಗೆ ಇಳಿಸಿದರು.