Friday, 22nd November 2024

Death Penalty: ಮರಣದಂಡನೆ ಸಮಯದಲ್ಲಿ ಅಪರಾಧಿ ಕಿವಿಯಲ್ಲಿ ಏನು ಹೇಳಲಾಗುತ್ತದೆ ಗೊತ್ತೇ?

Death Penalty

ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಕೆಲವು ಅಪರಾಧಿಗಳಿಗೆ (criminals) ಮರಣದಂಡನೆ (Death Penalty) ವಿಧಿಸಲಾಗುತ್ತದೆ. ಆದರೆ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಮರಣದಂಡನೆಕಾರನು (executioner) ಮರಣ ದಂಡನೆ ಶಿಕ್ಷೆಯನ್ನು ವಿಧಿಸುವ ಮೊದಲು ಏನು ಹೇಳುತ್ತಾರೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

ಅಪರಾಧಿಗಳಿಗೆ ಮರಣದಂಡನೆ ವಿಧಿಸುವಾಗ ಮರಣದಂಡನೆಕಾರರು ಅವರ ಕಿವಿಯಲ್ಲಿ ಕೆಲವು ಮಾತುಗಳನ್ನು ಹೇಳುತ್ತಾರೆ. ಅದು ಏನು ಎನ್ನುವ ಪ್ರಶ್ನೆ ಬಹುಶಃ ಎಲ್ಲರ ಮನದಲ್ಲೂ ಒಂದಲ್ಲ ಒಂದು ಬಾರಿ ಖಂಡಿತಾ ಉದ್ಭವಿಸುತ್ತದೆ. ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದು ಸಾಬೀತಾದ ಬಳಿಕ ವಿವಿಧ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದರಲ್ಲೂ ಘೋರ ಅಪರಾಧದ ಸಂದರ್ಭದಲ್ಲಿ ಮಾತ್ರ ಮರಣದಂಡನೆ ವಿಧಿಸಲಾಗುತ್ತದೆ. ಭಾರತದಲ್ಲಿ ಅತ್ಯಾಚಾರ, ದೇಶದ್ರೋಹದ ಅಪರಾಧಗಳಿಗೆ ಮರಣದಂಡನೆಯನ್ನು ವಿಧಿಸಲಾಗಿದೆ. ಭಾರತದಲ್ಲಿ ನೀಡಲಾದ ಪ್ರತಿಯೊಂದು ಮರಣದಂಡನೆಯು ಚರ್ಚೆಯ ವಿಷಯವಾಗಿದೆ.

Death Penalty

ಅಪರಾಧಿಗೆ ಮರಣದಂಡನೆ ನೀಡುವ ಮೊದಲು ಅನುಸರಿಸಬೇಕಾದ ಕೆಲವು ನಿಯಮಗಳಿವೆ. ನೇಣು ಹಾಕುವ ಸಮಯ, ಅದನ್ನು ನೀಡುವ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿಷಯಗಳನ್ನು ಮುಂಚಿತವಾಗಿಯೇ ನಿರ್ಧರಿಸಲಾಗುತ್ತದೆ.

ದೇಶದಲ್ಲಿ ಅಪರಾಧಿಯನ್ನು ಗಲ್ಲಿಗೇರಿಸುವಾಗ ಮರಣದಂಡನೆಕಾರನು ಅವನ ಕಿವಿಯಲ್ಲಿ ಹೇಳುವ ವಿಷಯವು ಅತ್ಯಂತ ಮುಖ್ಯವಾಗಿದೆ.

ಮರಣದಂಡನೆಕಾರನು ಮರಣದಂಡನಾ ಸ್ಥಳದಲ್ಲಿ ಜೋಡಿಸಲಾದ ಲಿವರ್ ಅನ್ನು ಎಳೆಯುವ ಮೊದಲು ಅವನು ಅಪರಾಧಿಯ ಕಿವಿಯಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಹೇಳುತ್ತಾನೆ. ಅಪರಾಧಿ ಹಿಂದೂ ಆಗಿದ್ದರೆ ‘ರಾಮ್-ರಾಮ್’ ಮತ್ತು ಅಪರಾಧಿಯು ಮುಸ್ಲಿಂ ಆಗಿದ್ದರೆ ‘ಸಲಾಮ್’ ಎಂದು ಹೇಳುತ್ತಾನೆ.

Eid Milad 2024: ಈದ್‌ ಮಿಲಾದ್‌ ಸೆಲೆಬ್ರೆಷನ್‌ಗೆ ಬಂತು ಬಗೆಬಗೆಯ ಬ್ಯಾಂಗಲ್ಸ್!

ಅವನು ತನ್ನ ಮಾತನ್ನು ಮುಂದುವರಿಸುತ್ತಾ, ನಾನು ಏನು ಮಾಡಲೂ ಸಾಧ್ಯವಿಲ್ಲ. ನನ್ನ ಕೈಗಳನ್ನು ಕರ್ತವ್ಯಗಳಿಂದ ಕಟ್ಟಲಾಗಿದೆ ಎನ್ನುತ್ತಾನೆ. ಬಳಿಕ ಶಿಕ್ಷೆಯನ್ನು ವಿಧಿಸುತ್ತಾನೆ.

ಮರಣದಂಡನೆಯ ಸಮಯದಲ್ಲಿ ಈ ನಾಲ್ಕು ಜನರು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಜೈಲು ಸೂಪರಿಂಟೆಂಡೆಂಟ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಮರಣದಂಡನೆಕಾರ ಮತ್ತು ವೈದ್ಯರು. ಇವರಲ್ಲಿ ಒಬ್ಬರು ಇಲ್ಲದೇ ಇದ್ದರೂ ಮರಣದಂಡನೆಯನ್ನು ಜಾರಿಗೊಳಿಸಲಾಗುವುದಿಲ್ಲ!