Friday, 22nd November 2024

Eid Mehandi Trend: ಈದ್‌ ಮಿಲಾದ್‌ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಂಡಿ ಮೆಹಂದಿ ಡಿಸೈನ್ಸ್!

Eid Mehandi Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈದ್‌ ಮಿಲಾದ್‌ (Eid Milad) ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುವಂತಹ ನಾನಾ ಡಿಸೈನ್‌ನ ಮೆಹಂದಿ ಚಿತ್ತಾರಗಳು (Eid Mehandi Trend) ಇಂದು ಸಿಂಗಾರ ಲೋಕಕ್ಕೆ ಎಂಟ್ರಿ ನೀಡಿವೆ. ಅವುಗಳಲ್ಲಿ 3 ಬಗೆಯ ಡಿಸೈನ್ಸ್ ಹೆಣ್ಣುಮಕ್ಕಳ ಕೈಗಳನ್ನು ಸಿಂಗರಿಸಲು ಸಜ್ಜಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈದ್‌ ಮಿಲಾದ್‌ ಹಬ್ಬದ ಈ ಸೀಸನ್‌ನಲ್ಲೂ ವೈವಿಧ್ಯಮಯ ಡಿಸೈನ್‌ನ ಮೆಹಂದಿ ಡಿಸೈನ್‌ಗಳು (Mehandi Designs) ಈಗಾಗಲೇ ಬ್ಯೂಟಿ ಬ್ಲಾಗ್‌ಗಳಲ್ಲಿ ಬ್ಯೂಟಿ ಇನ್‌ಫ್ಲೂಯೆನ್ಸರ್ಸ್ ಪೇಜ್‌ಗಳಲ್ಲಿ ಪರಿಚಯಗೊಳ್ಳುತ್ತಿವೆ. ಇವುಗಳನ್ನು ಬಿಡಿಸುವ ಕುರಿತಂತೆಯೂ ಹಾಗೂ ಟಿಪ್ಸ್ ಕೂಡ ಅನೇಕ ಬ್ಯೂಟಿ ಕುರಿತ ಯೂಟ್ಯೂಬ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಈಗಾಗಲೇ ಲೆಕ್ಕವಿಲ್ಲದಷ್ಟು ಮೆಹಂದಿ ಡಿಸೈನರ್‌ಗಳು ಕೂಡ ಪ್ರಯೋಗಾತ್ಮಕ ಡಿಸೈನ್‌ನ ಮೆಹಂದಿ ಚಿತ್ತಾರಗಳನ್ನು ತಮ್ಮದೇ ಆದ ಕ್ರಿಯಾತ್ಮಕ ಹಾಗೂ ಕಲಾತ್ಮಕ ವಿನ್ಯಾಸಗಳನ್ನು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದು ಮೆಹಂದಿ ಪ್ರೇಮಿಗಳಿಗೆ ಕೆಲಸ ಸುಲಭ ಮಾಡಿದೆ ಎನ್ನುತ್ತಾರೆ ಮೆಹಂದಿ ಡಿಸೈನರ್‌ ರೇಷ್ಮಾ ಖನ್ನಾ. ಅವರ ಪ್ರಕಾರ, ಮೆಹಂದಿ ಬಿಡಿಸುವುದು ಒಂದು ಕಲೆ ಎನ್ನುತ್ತಾರೆ.

ಇಂಡೋ-ಅರೇಬಿಕ್‌ ಡಿಸೈನ್ಸ್

ಹಿಂದಿನಿಂದಲೂ ಇಂದಿಗೂ ಸದಾ ಟ್ರೆಂಡಿಯಾಗಿರುವ ಈ ಮೆಹಂದಿ ಚಿತ್ತಾರಗಳಲ್ಲಿ ಇಂಡೋ-ಅರೇಬಿಕ್‌ ಡಿಸೈನ್‌ ಕೂಡ ಒಂದು. ಪ್ರಯೋಗಾತ್ಮಕವಾಗಿ ಬಿಡಿಸಲಾಗುವ ಅರೇಬಿಕ್‌ ವಿನ್ಯಾಸದೊಂದಿಗೆ ಸ್ಥಳೀಯ ವಿನ್ಯಾಸವು ಮಿಕ್ಸ್ ಆಗಿರುತ್ತದೆ. ಎರಡು ಜತೆಗಿರುವ ಈ ಮೆಹಂದಿ ಚಿತ್ತಾರ ಎವರ್‌ಗ್ರೀನ್‌ ಡಿಸೈನ್‌ನಲ್ಲಿದೆ.

ಈ ಸುದ್ದಿಯನ್ನೂ ಓದಿ | Eid Milad 2024: ಈದ್‌ ಮಿಲಾದ್‌ ಸೆಲೆಬ್ರೆಷನ್‌ಗೆ ಬಂತು ಬಗೆಬಗೆಯ ಬ್ಯಾಂಗಲ್ಸ್!

ಈದ್‌ ಮೆಹಂದಿ ಡಿಸೈನ್ಸ್

ಹಬ್ಬದ ಪ್ರಯುಕ್ತ ಮೂಡಿಸಲಾಗುವ ಈ ಡಿಸೈನ್‌ಗಳಲ್ಲಿ ಹಬ್ಬಕ್ಕೆ ಪೂರಕವಾಗುವಂತಹ ಅರ್ಧ ಚಂದ್ರ, ನಕ್ಷತ್ರಗಳು, ತೂಗುದೀಪ, ಲೈಟಿಂಗ್ಸ್ ಸೇರಿದಂತೆ ಅರೇಬಿಕ್‌ ಅಥವಾ ಉರ್ದುವಿನಲ್ಲಿನ ಪವಿತ್ರ ಕೋಟ್ಸ್‌ಗಳನ್ನು ಬಳಸಲಾಗುತ್ತದೆ. ಚಿತ್ತಾರದ ನಡುವೆ ಇವೆಲ್ಲವನ್ನು ಈ ಡಿಸೈನ್‌ನಲ್ಲಿ ಸೇರಿಸಲಾಗಿರುತ್ತದೆ.

ಜ್ಯುವೆಲರಿ ಡಿಸೈನ್ಸ್

ವೈವಿಧ್ಯಮಯ ಆಭರಣಗಳ ಡಿಸೈನ್‌ಗಳು ಇದೀಗ ಮೆಹೆಂದಿ ಡಿಸೈನ್‌ನಲ್ಲಿ ಸೇರಿ ಹೋಗಿವೆ. ಕೈಗಳ ಮೇಲೂ ಕಾಣಿಸತೊಡಗಿವೆ. ಉದಾಹರಣೆಗೆ, ಹಾರ, ನೆಕ್ಲೇಸ್‌, ಜುಮ್ಕಾ, ಚಾಂದ್‌ಬಾಲಿ, ಲೇಯರ್‌ ಹಾರ ಹೀಗೆ ನಾನಾ ಡಿಸೈನ್‌ಗಳು ಮೆಹಂದಿಯಲ್ಲೂ ರಾರಾಜಿಸತೊಡಗಿವೆ.

ಈ ಸುದ್ದಿಯನ್ನೂ ಓದಿ | World Dolphin Day 2024: ಇಂದು ವಿಶ್ವ ಡಾಲ್ಫಿನ್ ದಿನ; ಇದರ ಹಿನ್ನೆಲೆ, ಮಹತ್ವವೇನು ಗೊತ್ತೇ?

ಈದ್‌ ಮೆಹಂದಿ ಪ್ರಿಯರಿಗೆ 5 ಸಿಂಪಲ್‌ ಟಿಪ್ಸ್

·ನಿಮ್ಮ ಡ್ರೆಸ್‌ಕೋಡ್‌ಗೆ ಮ್ಯಾಚ್‌ ಆಗುವಂತಹ ಟ್ರೆಂಡಿಯಾಗಿರುವ ಮೆಹಂದಿ ಡಿಸೈನ್ಸ್ ಆಯ್ಕೆ ಮಾಡಿ.
·ಬ್ರಾಂಡೆಡ್‌ ಕ್ವಾಲಿಟಿ ಮೆಹಂದಿ ಕೋನ್‌ ಬಳಸಿ.
·ಕೆಮಿಕಲ್‌ ಡೈ ಫ್ರೀ ಇರುವ ಮೆಹಂದಿ ಚೂಸ್‌ ಮಾಡಿ.
·ಮೆಹಂದಿ ಹಚ್ಚುವಾಗ ಆದಷ್ಟೂ ಕಂಫರ್ಟಬಲ್‌ ಡ್ರೆಸ್‌ ಧರಿಸಿ.
·ಹಚ್ಚಿದ ನಂತರ ಮೆಹಂದಿ ವಾಶ್‌ ಮಾಡುವವರೆಗೂ ಯಾವುದೇ ಕೆಲಸ ಮಾಡಬೇಡಿ.

(ಲೇಖಕಿ ಫ್ಯಾಷನ್ ಪತ್ರಕರ್ತೆ)