Saturday, 23rd November 2024

Golden Milk Benefits: ಗೋಲ್ಡನ್ ಮಿಲ್ಕ್‌ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?

Golden Milk Benefits

ಬೆಂಗಳೂರು : ಗೋಲ್ಡನ್ ಮಿಲ್ಕ್ (Golden Milk Benefits) ಎಂಬುದು ಬಹಳ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಾ ಬಂದ ಒಂದು ಸಾಂಪ್ರದಾಯಿಕ ಪಾನೀಯವಾಗಿದೆ. ಇದನ್ನು ಜನರು ಅರಿಶಿನ, ಶುಂಠಿ, ದಾಲ್ಚಿನ್ನಿ ಈ ಮೂರು ಪದಾರ್ಥಗಳನ್ನು ಹಾಲಿನೊಂದಿಗೆ ಬೆರೆಸಿ ತಯಾರಿಸುತ್ತಾರೆ. ಈ ಗೋಲ್ಡನ್ ಮಿಲ್ಕ್ ಅನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಯಾಕೆಂದರೆ ಈ ಮಸಾಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹಾಗಾದ್ರೆ ಈ ಗೋಲ್ಡನ್ ಮಿಲ್ಕ್ ಅನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.

ಉರಿಯೂತವನ್ನು ಕಡಿಮೆ ಮಾಡುವುದು
ಶುಂಠಿ, ದಾಲ್ಚಿನ್ನಿ ಮತ್ತು ಅರಿಶಿನ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇವುಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಹೃದ್ರೋಗ, ಕ್ಯಾನ್ಸರ್, ಸಂಧಿವಾತ, ಅಲ್ಝೈಮರ್ ಕಾಯಿಲೆ, ಮೆಟಾಬಾಲಿಕ್ ಸಿಂಡ್ರೋಮ್ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಜೀವಕೋಶದ ಹಾನಿ ತಡೆಗಟ್ಟುವುದು
ಶುಂಠಿ, ದಾಲ್ಚಿನ್ನಿ ಮತ್ತು ಅರಿಶಿನದ ಹಾಲು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಸಹ ಹೊಂದಿದೆ. ಆಂಟಿಆಕ್ಸಿಡೆಂಟ್‍ಗಳು ವ್ಯಕ್ತಿಯ ದೇಹವು ಜೀವಕೋಶಗಳ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಕಾಯಿಲೆಗಳು ಬರದಂತೆ ತಡೆಯುತ್ತವೆ.

ಮನಸ್ಥಿತಿಯನ್ನು ಸುಧಾರಿಸುವುದು:
ಗೋಲ್ಡನ್ ಮಿಲ್ಕ್ ಅನ್ನು ನಿಯಮಿತವಾಗಿ ಕುಡಿಯುವ ಜನರು ಒಳ್ಳೆಯ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರಲ್ಲಿ ಕಿರಿಕಿರಿ, ಆತಂಕ, ಖಿನ್ನತೆ ಸಮಸ್ಯೆ ಇರುವುದಿಲ್ಲ. ಇವರು ಯಾವಾಗಲೂ ಖುಷಿಯಿಂದ ಇರುತ್ತಾರೆ.

ಮೆದುಳಿನ ಕಾರ್ಯವನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ:
ಗೋಲ್ಡನ್ ಮಿಲ್ಕ್ ಅನ್ನು ಕುಡಿಯುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿಯಲ್ಲಿರುವ ಪ್ರೋಟೀನ್‍ಗಳು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೇ ಪ್ರೋಟೀನ್‍ನಿಂದ ನೆನೆಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಹಾಗಾಗಿ ದಾಲ್ಚಿನ್ನಿ ಮೆದುಳಿಗೆ ತುಂಬಾ ಒಳ್ಳೆಯದು.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ:
ಗೋಲ್ಡನ್ ಮಿಲ್ಕ್ ನಲ್ಲಿರುವ ಶುಂಠಿ, ದಾಲ್ಚಿನ್ನಿ, ಅರಿಶಿನ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯಾಘಾತದ ಸಮಸ್ಯೆ ಕಾಡುವುದಿಲ್ಲ. ಇದು ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಇರುವುದನ್ನು ನಿವಾರಿಸುತ್ತದೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:
ಶುಂಠಿ, ದಾಲ್ಚಿನ್ನಿ ಮತ್ತು ಅರಿಶಿನ ಮಿಶ್ರಿತ ಹಾಲು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ ಮತ್ತು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು:
ಗೋಲ್ಡನ್ ಮಿಲ್ಕ್‌ನಲ್ಲಿರುವ ಪದಾರ್ಥಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಶುಂಠಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಧುಮೇಹ ಸಮಸ್ಯೆ ಕಾಡುವುದಿಲ್ಲ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು:
ಶೀತದಂತಹ ಸಾಮಾನ್ಯ ಕಾಯಿಲೆಗಳ ವಿರುದ್ಧ ಹೋರಾಡಲು ಜನರು ಗೋಲ್ಡನ್ ಮಿಲ್ಕ್ ಅನ್ನು ಕುಡಿಯಬಹುದು. ಇದರಲ್ಲಿರುವ ಅರಿಶಿನ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ವ್ಯಕ್ತಿಯು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೇ ಶುಂಠಿ ಮತ್ತು ದಾಲ್ಚಿನ್ನಿ ಶೀತ ಮತ್ತು ಜ್ವರಗಳನ್ನು ನಿವಾರಿಸುತ್ತವೆ.

ಮೂಳೆಯ ಆರೋಗ್ಯವನ್ನು ಸುಧಾರಿಸುವುದು:
ಹಾಲಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುತ್ತದೆ, ಇದು ಮೂಳೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೂಳೆಯ ಬೆಳೆವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಅಲ್ಲದೇ ಹಾಲಿನಲ್ಲಿರುವ ವಿಟಮಿನ್ ಡಿ ದೇಹವು ಆಹಾರದಿಂದ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮೂಳೆಗಳು ಆರೋಗ್ಯವಾಗಿ ಬೆಳೆಯುತ್ತವೆ.

ಇದನ್ನೂ ಓದಿ: ಮೋಸದ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ; ಏನಾಯಿತು ಆಕೆಗೆ?

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:
ಗೋಲ್ಡನ್ ಹಾಲಿನಲ್ಲಿರುವ ಶುಂಠಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ವಾಕರಿಕೆ ಮತ್ತು ವಾಂತಿ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತದೆ.