ದಾನ ಉಪಕ್ರಮಗಳಿಗಾಗಿ ರೂ. 8.6 ಕೋಟಿ ಗಳಿಕೆ
ಸೆಂಟೆನಿಯಲ್ ಕಲೆಕ್ಟರ್ಸ್ ಆವೃತ್ತಿಯ ಬೈಕ್ ಗೆಲ್ಲಲು ಗ್ರಾಹಕರಿಗಾಗಿ ಸ್ಪರ್ಧೆಯ ಘೋಷಣೆ
ಬೆಂಗಳೂರು: ”ದಿ ಸೆಂಟೆನಿಯಲ್”ಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆ, ನಮ್ಮ ಚೇರ್ಮನ್ ಎಮೆರಿಟಸ್ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್‌ಗೆ ಇರುವ ಆಳವಾದ ಮೆಚ್ಚುಗೆ ಮತ್ತು ಗೌರವವನ್ನು ಪ್ರತಿಫಲಿಸುತ್ತದೆ. ಈ ಮಾಸ್ಟ್‌ಪೀಸ್, ಅವರ ಮೌಲ್ಯಗಳನ್ನು ಒಳಗೊಂಡಿದ್ದು, ಅವರು ನಮಗೆ ಬಿಟ್ಟುಹೋಗಿರುವ ಅದ್ಭುತ ಪರಂಪರೆಗೆ ಒಂದು ಶಾಶ್ವತ ಶ್ರದ್ಧಾಂಜಲಿಯಾಗಿದೆ.
ಸಮಾಜಕ್ಕೆ ಹಿಂದಿರುಗಿ ಕೊಡುವುದರ ಬಗ್ಗೆ ನನ್ನ ತಂದೆ ಆಳವಾಗಿ ಬದ್ಧರಾಗಿದ್ದರು ಮತ್ತು ಅವರ ತತ್ವಗಳು ಮತ್ತು ದೂರದೃಷ್ಟಿಯು, ಅವರು ಸ್ಥಾಪಿಸಿದ ಸಂಸ್ಥೆಗಳ ಮೂಲಕ ಪ್ರೇರಣೆ ಒದಗಿಸುತ್ತಲೇವೆ. ಇಡೀ ಹೀರೋ ಸಮುದಾ ಯಕ್ಕೆ, ಅವರ ಉದಾತ್ತ ಕೊಡುಗೆಗಳಿಗಾಗಿ ಮತ್ತು ದಾನ ಉಪಕ್ರಮಗಳಿಗಾಗಿ ನಿಧಿ ಸಂಗ್ರಹಣೆ ಮಾಡಲು ನೆರವಾ ದುದಕ್ಕೆ, ನಾನು ಮನಃಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ಇದನ್ನೂ ಓದಿ: Kolkata Tour: ಕೊಲ್ಕತ್ತಾಗೆ ಭೇಟಿ ನೀಡಿದಾಗ ಈ ಪ್ರಸಿದ್ಧ ಮಾರುಕಟ್ಟೆ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ!
ನಮ್ಮ “ಗ್ರಾಹಕ-ಮೊದಲು” ಸಿದ್ಧಾಂತಕ್ಕೆ ಅನುಗುಣವಾಗಿ, ಎಐ-ಶಕ್ತಿಯ ಸ್ಪರ್ಧೆಯ ಮೂಲಕ, ಜಗತ್ತಿನಾದ್ಯಂತ ಇರುವ ನಮ್ಮ 118+ ದಶಲಕ್ಷ ಗ್ರಾಹಕರಾದ ನಮ್ಮ ಅಮೂಲ್ಯ ಭಾಗೀದಾರರಿಗೆ ಈ ಮಾಸ್ಟ್‌ಪೀಸ್ ನೀಡಲು ನನಗೆ ಬಹಳ ಉತ್ಸಾಹವಾಗುತ್ತಿದೆ.
ಡಾ. ಪವನ್ ಮುಂಜಾಲ್, ಎಕ್ಸಿಕ್ಯೂಟಿವ್ ಚೇರ್ಮನ್, ಹೀರೋ ಮೋಟೋಕಾರ್ಪ್
ಜಗತ್ತಿನ ಅತಿದೊಡ್ಡ ಮೋಟಾರುಸೈಕಲ್ ಮತ್ತು ಸ್ಕೂಟರ್ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ವಿಶೇಷವಾದ ಕಲೆಕ್ಟರ್ಸ್ ಆವೃತ್ತಿಯ ಮೋಟಾರುಸೈಕಲ್ ಆದ “ದಿ ಸೆಂಟೆನಿಯಲ್”ನ ಹರಾಜನ್ನು ಪೂರ್ಣ ಗೊಳಿಸಿದೆ. ಅತ್ಯಂತ ಶ್ರದ್ಧೆಯಿಂದ ತಯಾರಿಸಲಾಗಿರುವ ಈ ಮೋಟಾರುಸೈಕಲ್, ಸಂಸ್ಥೆಯ ದಾರ್ಶನಿಕ ಸ್ಥಾಪಕ ಹಾಗೂ ಚೇರ್ಮನ್ ಎಮೆರಿಟಸ್ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಪರಂಪರೆಯ ಸ್ಮರಣೆಯಾಗಿದೆ.
ಕೇವಲ 100 ಯೂನಿಟ್‌ಗಳ ಉತ್ಪಾದನೆಯೊಂದಿಗೆ, ಪ್ರತಿಯೊಂದು ಮೋಟಾರುಸೈಕಲ್, ಉತ್ಕಂಟತೆ ಮತ್ತು ಇಂಜಿನಿಯರಿಂಗ್‌ನ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಡೀಲರುಗಳು, ಸರಬರಾಜುದಾರರು, ವ್ಯಾಪಾರ ಸಹಯೋಗಿ ಗಳು ಹಾಗೂ ಸಂಸ್ಥೆಯ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹರಾಜು, ಹಿಂದೆಂದೂ ಕಾಣದ ಉತ್ಸಾಹ ಮತ್ತು ಕೌತುಕತೆಯನ್ನು ಉಂಟು ಮಾಡಿ CE100 ಸಂಖ್ಯೆಯ ಮೋಟಾರುಸೈಕಲ್‌ಗೆ ರೂ. 20.30 ಲಕ್ಷದ ಅತ್ಯಧಿಕ ಬಿಡ್‌ನಲ್ಲಿ ಅಂತ್ಯಗೊಂಡಿತು. 75 ಯೂನಿಟ್‌ಗಳಿಗೆ ಸಂಘಟಿತ ಬಿಡ್ ಮೊತ್ತವು ಮಹತ್ತರವಾದ ರೂ. 8.50 ಕೋಟಿ ತಲುಪಿ, ಈ ಕಲೆಕ್ಟಸ್ ಮೋಟಾರುಸೈಕಲ್‌ಗಳ ಅದ್ವಿತೀಯ ಮೌಲ್ಯ, ಇಚ್ಛೆ ಮತ್ತು ವಿಶಿಷ್ಟ ಆಕರ್ಷಣೆಯನ್ನು ಪ್ರದರ್ಶಿಸಿತು.
ಈ ಅದ್ವಿತೀಯ ಪ್ರತಿಕ್ರಿಯೆಯು, ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಪರಂಪರೆಗೆ ಇರುವ ದೀರ್ಘ ಗೌರವವನ್ನೂ ಎತ್ತಿತೋರಿಸುತ್ತದೆ. ಗಣನೀಯವಾಗಿ, ಹರಾಜಿನ ಮೊತ್ತವನ್ನು ಸಂಪೂರ್ಣವಾಗಿ, ಸಮುದಾಯಕ್ಕೆ ಹಿಂದಿರುಗಿ ನೀಡಬೇಕೆನ್ನುವ ಅವರ ಸಂಪ್ರದಾಯವನ್ನು ವರ್ಧಿಸುವ ದಾನ ಉಪಕ್ರಮಗಳಿಗೇ ಮೀಸಲಾಗಿಡಲಾಗುತ್ತದೆ.
ಉಳಿದ 25 ಬೈಕ್‌ಗಳನ್ನು ಹೀರೋ ಮೋಟೋಕಾರ್ಪ್ ಘಟಕಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಸ್ಪರ್ಧೆಗಳ ಮೂಲಕ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ನೀಡಲಾಗುತ್ತದೆ.
ಗ್ರಾಹಕ ಸ್ಪರ್ಧೆ : ವಿಶೇಷ ಎಐ-ಶಕ್ತಿಯ ಸ್ಪರ್ಧೆಯೊಂದರಲ್ಲಿ, 118 ದಶಲಕ್ಷಕ್ಕಿಂತ ಹೆಚ್ಚಿನ ಹೀರೋ ಮೋಟೋಕಾರ್ಪ್ ಗ್ರಾಹಕರು, ಈ ಐತಿಹಾಸಿಕ ಮಾಸ್ಟ್‌ಪೀಸ್‌ಅನ್ನು ಹೊಂದುವ ಜೀವಿತಾವಧಿಯಲ್ಲಿ-ಒಮ್ಮೆ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಸ್ಪರ್ಧೆಯು ಎರಡು ಹಂತಗಳಲ್ಲಿ ಅನಾವರಣಗೊಳ್ಳುತ್ತದೆ: ಮೊದಲು ಭಾಗವಹಿಸುವವರು, ತಮ್ಮ ಭಾವಚಿತ್ರ ಮತ್ತು ಹೀರೋ ಉತ್ಪನ್ನವು ಯಾವ ರೀತಿ ತಮ್ಮ ಜೀವನಗಳ ಮೇಲೆ ಪ್ರಭಾವ ಬೀರಿತು ಎನ್ನುವುದರ ಕಥೆಗಳನ್ನು myheroforever@heromotocorp.com ಗೆ ಇ-ಮೇಲ್ ಮೂಲಕ ತಿಳಿಸುವರು.
ನಂತರ, ಜೆನ್ ಎಐ ಬಳಸಿ, ಪ್ರತಿಯೊಬ್ಬ ಭಾಗೀದಾರರ ಹೀರೋ ಪಯಣದ ದೃಶ್ಯ ಪ್ರತಿನಿಧಿತ್ವವನ್ನು ಸೃಷ್ಟಿಸ ಲಾಗುತ್ತದೆ. ತದನಂತರ ಭಾಗವಹಿಸುವವರು #MyForeverHero ಎಂಬ ವಿನೂತನವಾದ ಎಆರ್ ಫಿಲ್ಟರ್ ಬಳಸಿ ಅದನ್ನು ರಚಿಸಿ ಅದನ್ನು ಸಮೂಹ ಮಾಧ್ಯಮದಲ್ಲಿ ಅವರ ವೀಡಿಯೋಗಳನ್ನು ಹಂಚಿಕೊಳ್ಳುವರು. ಪ್ರತಿಷ್ಠಿತ ಪ್ಯಾನೆಲ್, ಎಂಟ್ರಿಗಳನ್ನು ಪರಿಶೀಲಿಸಿ ಅತ್ಯಂತ ಪ್ರೇರಣಾತ್ಮಕವಾಗಿರುವ ಕಥೆಯನ್ನು ವಿಜೇತ ಎಂಟ್ರಿ ಎಂದು ಆಯ್ಕೆ ಮಾಡುತ್ತದೆ.
‘ದಿ ಸೆಂಟೆನಿಯಲ್”, ಇಂಜಿನಿಯರಿಂಗ್ ಮತ್ತು ವಿನ್ಯಾಸದ ಮಾಸ್ಟ್‌ಪೀಸ್ ಆಗಿದೆ. ಈ ಅದ್ವಿತೀಯ ಮೋಟಾರು ಸೈಕಲ್‌ನ ಪ್ರತಿ ವಿವರವನ್ನೂ, ಅದರ ಸರಿಸಾಟಿಯಿಲ್ಲದ ಸ್ಥಾನಮಾನವನ್ನು ಪ್ರತಿಫಲಿಸುವುದಕ್ಕಾಗಿ, ಅತ್ಯಂತ ಶ್ರದ್ದೆಯಿಂದ ರೂಪಿಸಲಾಗಿದೆ. ಹಗುರತೂಕದ ಅಲ್ಯುಮಿನಿಯಮ್ ಸ್ವಿಂಗ್‌ಆರ್ಮ್ ಮತ್ತು ಕಾರ್ಬನ್ ಫೈಬರ್ ಪ್ಯಾನೆಲ್‌ಗಳು, ಇದರ ಕಾರ್ಯಕ್ಷಮತೆಯನ್ನು ಮತ್ತು ಕಾರ್ಯವೈಖರಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆಧುನಿಕ ಸೌಂದರ್ಯದ ನೋಟವನ್ನೂ ಹೊರಸೂಸುತ್ತದೆ.
ಪ್ರಿಸಿಶನ್-ಮಶೀನ್ಡ್ ಹ್ಯಾಂಡಲ್‌ಬಾರ್ ಗಳು, ರೇರ್-ಸೆಟ್ ಫುಟ್ ಪೆಗ್ಸ್, ಮತ್ತು ವರ್ಗದಲ್ಲೇ ಅಗ್ರಮಾನ್ಯವಾದ ಕಾರ್ಬನ್ ಫೈಬರ್ ಮತ್ತು ಅಕ್ರಪೋವಿಕ್(Akrapovic)ನ ಟೈಟಾನಿಯಮ್ ಎಕ್ಸಾಸ್ಟ್ ಸಿಸ್ಟಮ್ ಒಳಗೊಂಡಂತೆ ಅದು ಅಗತ್ಯಕ್ಕೆ ತಕ್ಕ ಬಿಡಿಭಾಗಗಳನ್ನು ಹೊಂದಿದೆ. ಕಾರ್ಬನ್ ಫಬರ್ ಕೌಲ್ ಮತ್ತು ವಿಶಿಷ್ಟವಾದ ವಿಶೇಷ ಆವೃತ್ತಿ ಸಂಖ್ಯೆಯ ಬ್ಯಾಡ್ಜ್ ಇರುವ ಸೋಲೋ ಸೀಟ್‌ನಿಂದ ಸಜ್ಜುಗೊಂಡಿರುವ “ದಿ ಸೆಂಟೆನಿಯಲ್”, ಹೀರೋ ಮೋಟೋಕಾರ್ಪ್‌ನ ಪ್ರೇರಣಾತ್ಮಕ ಪರಂಪರೆಯೊಳಗೇ ಒಂದು ಅದ್ವಿತೀಯ ಸ್ಥಾನ ಗಳಿಸಿದೆ.