Friday, 22nd November 2024

Terror attack: 3 ಎನ್‌ಕೌಂಟರ್‌… 5 ಉಗ್ರರ ಹತ್ಯೆ-ಕಣಿವೆ ರಾಜ್ಯದಲ್ಲಿ ಸೇನೆ ಭರ್ಜರಿ ಬೇಟೆ

terror attack

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆಂದು ಜಮ್ಮು-ಕಾಶ್ಮೀರ(Jammu and Kashmir)ಕ್ಕೆ ತಲುಪುವ ಮುನ್ನವೇ ಮೂರು ಪ್ರತ್ಯೇಕ ಸೇನಾ ಕಾರ್ಯಾಚರಣೆ(JK Encounter) ನಡೆದಿದ್ದು, ಒಟ್ಟು ಐವರು ಉಗ್ರರನ್ನು(Terror attack) ಹೊಡೆದುರುಳಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಪಠಾಣ್‌ ಪ್ರದೇಶದ ಚಕ್‌ ಥಾಪರ್‌ ಕ್ರೀರಿ ಬಳಿ ಶುಕ್ರವಾರ ತಡರಾತ್ರಿ ಉಗ್ರರು ಅವಿತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಸೇನೆ, ಜಮ್ಮು ಪೊಲೀಸರ ಜತೆಗೂಡಿ ಜಂಟೀ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಮತ್ತೊಂದೆಡೆ ಕಥುವಾದಲ್ಲೂ ಪ್ರತ್ಯೇಕ ಶೂಟೌಟ್‌ ನಡೆದಿದ್ದು, ಇಬ್ಬರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ.

ಕಿಶ್ತ್ವಾರ್‌ನಲ್ಲೂ ಗುಂಡಿನ ಚಕಮಕಿ

ಕಿಶ್ತ್ವಾರ್‌ ಜಿಲ್ಲೆಯಲ್ಲೂ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಭಾರೀ ಕಾರ್ಯಾಚರಣೆ ಶುರುವಾಗಿತ್ತು. ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರು ಸಿಡಿಸಿದ ಗುಂಡಿನ ದಾಳಿಯಲ್ಲಿ ಸುಬೇದಾರ್‌ ವಿಪನ್‌ ಕುಮಾರ್‌ ಮತ್ತು ಸಿಪಾಯ್‌ ಅರವಿಂದ ಸಿಂಗ್‌ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ತಕ್ಷಣ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಪ್ರಧಾನಿ ಮೋದಿ ಇಂದು ದೋಡಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.ಈ ಭೇಟಿ ಮುನ್ನವೇ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Terrorist Encounter : ಶ್ರೀನಗರದಲ್ಲಿ ಗುಂಡಿನ ಚಕಮಕಿ; 2 ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ