ನವದೆಹಲಿ: ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharath Express) ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಛತ್ತೀಸ್‌ಗಢದ ಮಹಾಸುಮುಂದ್ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರ ಸಂಬಂಧಿಯೊಬ್ಬರು ರಾಜಕೀಯ ಪಕ್ಷದ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಬಾಗ್‌ಬರ್ಹಾ ನಿವಾಸಿಗಳಾದ ಶಿವ ಕುಮಾರ್ ಬಘೇಲ್, ದೇವೇಂದ್ರ ಚಂದ್ರಕರ್, ಜಿತು ತಾಂಡಿ, ಲೇಖ್ರಾಜ್ ಸೋನ್ವಾನಿ ಮತ್ತು ಅರ್ಜುನ್ ಯಾದವ್ ಬಂಧಿತರು.
Vande Bharat Express left Delhi for Varanasi today morning on its first commercial run. Tickets sold out for the next two weeks already. Get yours today! pic.twitter.com/LwokUNHRJj
— Piyush Goyal (@PiyushGoyal) February 17, 2019
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 74 ನೇ ಹುಟ್ಟುಹಬ್ಬದ ಮುನ್ನಾದಿನವಾದ ಸೋಮವಾರ ವಂದೇ ಭಾರತ್ ರೈಲಿಗೆ ಚಾಲನೆ ನೀಡಬೇಕಾಗಿತ್ತು. ಅದಕ್ಕೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿದೆ. ಇದು ಛತ್ತೀಸ್‌ಗಢ ದುರ್ಗ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರಗಳಿಗೆ ಸಂಪರ್ಕಿಸುತ್ತದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ವಿಶಾಖಪಟ್ಟಣಂನಿಂದ ದುರ್ಗ್‌ಗೆ ಹಿಂದಿರುಗುವಾಗ ರೈಲು ಬಾಗ್‌ಬರ್ಹಾ ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುತ್ತಿತ್ತು ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಪ್ರವೀಣ್ ಸಿಂಗ್ ಧಾಕಡ್ ಪಿಟಿಐಗೆ ತಿಳಿಸಿದ್ದಾರೆ. “ಕೆಲವು ಸಮಾಜ ವಿರೋಧಿ ಶಕ್ತಿಗಳು ರೈಲಿನ ಮೇಲೆ ಕಲ್ಲುಗಳನ್ನು ಎಸೆದು, ಸಿ 2, ಸಿ 4 ಮತ್ತು ಸಿ 9 ಬೋಗಿಗಳ ಕಿಟಕಿ ಗಾಜುಗಳನ್ನು ಹಾನಿಗೊಳಿಸಿವೆ. ಯಾರಿಗೂ ಗಾಯಗಳಾಗಿಲ್ಲ” ಎಂದು ಆರ್‌ಪಿಎಫ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸಹಾಯಕ ಸಬ್ ಇನ್‌ಸ್ಪೆಕ್ಟರ್ ನೇತೃತ್ವದ ಆರ್‌ಪಿಎಫ್ ಬೆಂಗಾವಲು ತಂಡವು ಕಲ್ಲು ತೂರಾಟದ ಬಗ್ಗೆ ಮಾಹಿತಿ ಕಳುಹಿಸಿದೆ. ನಂತರ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Narendra Modi : ಪ್ರಧಾನಿ ಮೋದಿ ಮನೆಗೆ ಬಂದ ಮುದ್ದುಮುದ್ದಾದ ಹೊಸ ಅತಿಥಿ!
ಅಧಿಕಾರಿಗಳ ಪ್ರಕಾರ, ಆರೊಪಿಗಳಲ್ಲಿ ಒಬ್ಬರಾದ ಶಿವ ಕುಮಾರ್ ಬಘೇಲ್ ಅತ್ತಿಗೆ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿದ್ದಾರೆ. ರೈಲ್ವೆ ಕಾಯ್ದೆ, 1989ರ ಸೆಕ್ಷನ್ 153 ಕಾಯಿದೆಯಡಿ ಈ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.