ನವದೆಹಲಿ: ಕಾಲೇಜಿನ ಕಾರ್ಯಕ್ರಮವೊಂದರಲ್ಲಿ (college programme) ವಿದ್ಯಾರ್ಥಿನಿಯು ಬಾಲಿವುಡ್ ಹಾಡಿಗೆ (bollywood song) ನೃತ್ಯ ಮಾಡಲು ಪ್ರಾರಂಭಿಸಿದಾಗ ಪ್ರಾಂಶುಪಾಲರು ಹಿಂದಿನ ಪರದೆಯಲ್ಲಿದ್ದ ಸ್ವಾಮಿ ವಿವೇಕಾನಂದರ (Swami Vivekananda) ಚಿತ್ರವನ್ನು ತಕ್ಷಣ ತೆಗೆಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ.
2013ರಲ್ಲಿ ತೆರೆಕಂಡ ಹಿಂದಿ ರೊಮ್ಯಾಂಟಿಕ್ ಚಿತ್ರ ‘ರಮಯ್ಯಾ ವಸ್ತಾವಯ್ಯ’ದ ಹಾಡು ಜಾದೂ ಕಿ ಜಪ್ಪಿ.. ಗೆ ಪ್ರಿಯಾ ಪಾಂಚಾಲ್ ಅವರ ಸಾಹಿತ್ಯವಿದ್ದು, ಮಿಕಾ ಸಿಂಗ್ ಮತ್ತು ನೇಹಾ ಕಕ್ಕರ್ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾದಾಗಿನಿಂದ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಇದೇ ಹಾಡಿಗೆ ದೆಹಲಿಯ ಭಗಿನಿ ನಿವೇದಿತಾ ಕಾಲೇಜ್ ಡಿಯು ಕಾಲೇಜು ವಿದ್ಯಾರ್ಥಿನಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.
ವಿದ್ಯಾರ್ಥಿಯ ಪ್ರದರ್ಶನದ ಸಂದರ್ಭದಲ್ಲಿ ಪ್ರಾಂಶುಪಾಲರ ನಡೆ ಸಾಕಷ್ಟು ಮಂದಿಯ ಮೆಚ್ಚುಗೆ ಗಳಿಸಿದೆ. ವಿಡಿಯೋದಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವಿರುವ ಪರದೆಯ ಮುಂದೆ ವಿದ್ಯಾರ್ಥಿನಿ ಜಾದೂ ಕಿ ಜಪ್ಪಿ ಹಾಡಿಗೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಿದ್ದಂತೆ ಪ್ರಾಂಶುಪಾಲರು ವೇದಿಕೆ ಸಮೀಪ ಬಂದು ಹಿಂದಿದ್ದ ಡಿಜಿಟಲ್ ಪರದೆಯನ್ನು ತೆಗೆಸಿ ವಿದ್ಯಾರ್ಥಿನಿಯು ಆ ಪರದೆಯ ಮುಂದೆ ನೃತ್ಯ ಮಾಡದಂತೆ ನೋಡಿಕೊಂಡರು.
ವಿದ್ಯಾರ್ಥಿನಿಯ ಪ್ರದರ್ಶನ ಪ್ರಾರಂಭಿಸುತ್ತಿದ್ದಂತೆ ಪ್ರಾಂಶುಪಾಲರು ತಮ್ಮ ಸ್ಥಾನದಿಂದ ಎದ್ದು ಕೆಲವು ಸೂಚನೆಗಳನ್ನು ನೀಡಲು ವೇದಿಕೆ ಸಮೀಪ ಹೋದರು. ವೇದಿಕೆಯ ಮೇಲಿದ್ದ ಸ್ವಾಮಿ ವಿವೇಕಾನಂದರ ಚಿತ್ರವಿದ್ದ ಪರದೆಯ ಸ್ವಿಚ್ ಆಫ್ ಮಾಡಿಸಿದರು.
ಪ್ರಾಂಶುಪಾಲರು ಪ್ರದರ್ಶನವನ್ನು ನಿಲ್ಲಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಶೇರ್ ಆದ ಬಳಿಕ ಭಾರಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೆ 3.2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಇದನ್ನು ಬೇರೆಬೇರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮರುಹಂಚಿಕೊಳ್ಳಲಾಗುತ್ತಿದೆ.
Viral News: ಕೀರ್ತನೆಗೆ ಕುಣಿಯುವುದು ಹೇಗೆ? ತಿಳಿಯಲು ಈ ವೈರಲ್ ವೀಡಿಯೊ ನೋಡಿ
ಈ ವಿಡಿಯೋ ಭಗಿನಿ ನಿವೇದಿತಾ ಕಾಲೇಜ್ ಡಿಯುಗೆ ಸೇರಿದೆ ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಇದರ ಕಾಮೆಂಟ್ ವಿಭಾಗದಲ್ಲಿ ಒಬ್ಬರು “ಪ್ರಾಂಶುಪಾಲರಿಗೆ ಗೌರವ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಲೇಜು ಪ್ರದರ್ಶನಗಳಲ್ಲಿ ಯಾವ ಹಾಡುಗಳಿಗೆ ವಿದ್ಯಾರ್ಥಿಗಳು ಪ್ರದರ್ಶನ ಮಾಡುತ್ತಾರೆ ಎಂಬುದನ್ನು ಶಿಕ್ಷಕರು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನೊಬ್ಬರು, ಪ್ರಾಂಶುಪಾಲರು ಹಾಡನ್ನು ನಿಲ್ಲಿಸಲಿಲ್ಲ. ಸ್ವಾಮಿ ವಿವೇಕಾನಂದರ ಹಿನ್ನೆಲೆಯ ಚಿತ್ರವನ್ನು ತೆಗೆದುಹಾಕಲು ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದರೆ, ಮತ್ತೊಬ್ಬರು ಇದಕ್ಕಾಗಿಯೇ ನಾವು ಜಾನಪದ ಅಥವಾ ದೇಶಭಕ್ತಿಯ ಹಾಡುಗಳನ್ನು ಮಾತ್ರ ಅನುಮತಿಸಬೇಕು ಎಂದು ತಿಳಿಸಿದ್ದಾರೆ.