Saturday, 23rd November 2024

BJP_RSS_Meet: ಒಡೆದ ಮನಸ್ಸು; ಸಂಘದ ಸಭೆಯಲ್ಲಿ ಅಸಂತೋಷ

B Y Vijayendra

ರಾಜ್ಯಾಧ್ಯಕ್ಷರಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ ವರಿಷ್ಠರು
ಸಂತೋಷ್ ಎಚ್ಚರಿಕೆ ಬೆನ್ನಲ್ಲೇ ವಿಜಯೇಂದ್ರ ದೆಹಲಿಗೆ

ಬೆಂಗಳೂರು: ಎರಡು ದಿನಗಳ ಹಿಂದೆ ಸಂಘ ಪರಿಹಾರದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾ ಧ್ಯಕ್ಷ ವಿಜಯೇಂದ್ರ (BYVijayendra) ಅವರಿಗೆ ತಮ್ಮ ಸ್ಥಾನಕ್ಕೆ ಕುತ್ತು ಬಂದಿರುವ ಬಗ್ಗೆ ಪರೋಕ್ಷ ಸಂದೇಶ ಸಿಕ್ಕಿದೆಯೇ ಎನ್ನುವ ಅನುಮಾನಗಳು ಬಿಜೆಪಿ ಕಾರ್ಯಕರ್ತ(BJP workers)ರಲ್ಲಿ ಮೂಡಿವೆ.

ಸಭೆಯಲ್ಲಿದ್ದ 38 ಜನರಲ್ಲಿ 36 ಮಂದಿ ವಿಜಯೇಂದ್ರ ಅವರನ್ನು ವಿರೋಧಿಸಿ ಮಾತನಾಡಿದ್ದು ಒಂದು ಭಾಗವಾ
ದರೆ, ಕೆಲ ದಿನಗಳಿಂದ ರಾಜ್ಯ ರಾಜಕೀಯದ ಆಗುಹೋಗು ಗಳಿಂದ ದೂರವಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ
ಕಾರ್ಯ ದರ್ಶಿ ಬಿ.ಎಲ್.ಸಂತೋಷ್ (B L Santhosh) ಅವರ ‘ಅಸಂತೋಷ’ದ ಮಾತುಗಳು ಈ ಸಂದೇಶಕ್ಕೆ ಪುಷ್ಟಿ ನೀಡುವಂತೆ ಮಾಡಿದೆ ಎನ್ನಲಾಗಿದೆ.

ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಬಿಜೆಪಿಗರು ಮುಗಿಬಿದ್ದ ಬಳಿಕ ಸಂಘ ಪರಿವಾರದವರು ‘ಇರುವಷ್ಟು ದಿನ
ಸಂಭಾಳಿಸಿಕೊಂಡು ಹೋಗಿ’ ಎನ್ನುವ ಎಚ್ಚರಿಕೆ ನೀಡಿದ್ದರು. ಇದರ ನಡುವೆ ಬಿ.ಎಲ್.ಸಂತೋಷ್ ಅವರು, ರಾಜ್ಯ
ಬಿಜೆಪಿಯನ್ನು ಒಡೆದ ಮನೆಯೆಂದು ವಿಶ್ಲೇಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಘ ಪರಿವಾರ(Sangh Parivar) ದ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಬಿಜೆಪಿ ವರಿಷ್ಠರ ಪರವಾಗಿ ಸಂತೋಷ್ ಭಾಗವಹಿಸಿದ್ದರು. ಸಭೆಯಲ್ಲಿ ಅವರು ಮಾತ ನಾಡುವಾಗ, ‘ಒಡೆದ ಕನ್ನಡಿ, ಒಡೆದ ಮನೆ ಹಾಗೂ ಮನಸ್ಸು ಸರಿಪಡಿಸಲು ಆಗುವು ದಿಲ್ಲ’ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BJP Karnataka: ಕಾಂಗ್ರೆಸ್ ಅಂದ್ರೆ ಅಧಿಕಾರದಿಂದ ಅಧಿಕಾರಕ್ಕೋಸ್ಕರ ಇರುವ ಪಕ್ಷ: ವಿಜಯೇಂದ್ರ ಟೀಕೆ

ಸಂಘಟನೆ ಅಸಾಧ್ಯ: ಬಿ.ಎಲ್.ಸಂತೋಷ್ ಅವರು ತಮ್ಮ ಮಾತನ್ನು ಇಲ್ಲಿಗೆ ನಿಲ್ಲಿಸದೇ, ಈ ರೀತಿಯ ಪರಿಸ್ಥಿತಿ ಇರು
ವಾಗ ಪಕ್ಷ ಸಂಘಟನೆ ನಿಮ್ಮಿಂದ ಸಾಧ್ಯವಿಲ್ಲ. ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದು ಕೊಳ್ಳದಿರುವುದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ವಿಶ್ವಾಸವೇ ಇಲ್ಲದೇ ಪಕ್ಷವನ್ನು ಯಾವ ರೀತಿಯಲ್ಲಿ ಬಲಪಡಿ ಸಲು ಸಾಧ್ಯ ಎಂದು ನೇರವಾಗಿಯೇ ವಿಜಯೇಂದ್ರಗೆ ಪ್ರಶ್ನಿಸಿದ್ದಾರೆನ್ನಲಾಗಿದೆ.

ಮಾತಿನ ಮರ್ಮವೇನು?
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಅವರ ಮಾತಿನ ಹಿಂದೆ ನಾನಾರ್ಥವಿದೆ. ಅದರಲ್ಲಿಯೂ ಆರ್‌ಎಸ್‌ಎಸ್(RSS)ಮುಖಂಡರ ಸಮ್ಮುಖದಲ್ಲಿ ಈ ರೀತಿಯ ಮಾತುಗಳನ್ನು ಆಡುವ ಮೂಲಕ, ನಿಶ್ಚಿತ ವಾಗಿ ಪಕ್ಷದ ವರಿಷ್ಠರ ‘ನಿಗೂಢ ಸಂದೇಶ’ ರವಾನಿಸುವ ಪ್ರಯತ್ನ ಮಾಡಿದ್ದಾರೆ. ಸಂತೋಷ್ ಅವರ ಮಾತಿ ನೊಂದಿಗೆ, ಸಂಘ ಪರಿವಾರದ ‘ಇರುವಷ್ಟು ದಿನ ಸಂಭಾಳಿಸಿ’ ಎನ್ನುವುದನ್ನು ತಾಳೆ ಹಾಕಿ ನೋಡಿದರೆ ಎಲ್ಲವೂ ಸ್ಪಷ್ಟವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ದೆಹಲಿಗೆ ಹಾರಿದ್ದೇಕೆ?
ಆರ್‌ಎಸ್‌ಎಸ್ ನಾಯಕರು ಹಾಗೂ ಸಂತೋಷ್ ಜಿ (Santhosh ji)ಇಬ್ಬರೂ ವಿಜಯೇಂದ್ರ ಪರವಾಗಿ ನಿಲ್ಲದೇ, ಬಹುತೇಕ ಕೈಬಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯೇಂದ್ರ ಅವರು, ಇದೇ ಕಾರಣಕ್ಕೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಗುರುವಾರ ರಾತ್ರಿಯೇ ದೆಹಲಿಗೆ ತೆರಳಿರುವ ವಿಜಯೇಂದ್ರ ಅಮಿತ್ ಶಾ (Amit shah) ಅವರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಎಚ್ಚರಿಕೆ ಮಾತುಗಳೇನು?
ಹಲವು ಕಾರಣಗಳಿಗೆ ಪಕ್ಷದಲ್ಲಿ ನಾಯಕರ ನಡುವೆ ಮನಸು ಒಡೆದು ಹೋಗಿದೆ ಸದ್ಯ ಪಕ್ಷ ಒಡೆದ ಮನೆಯಾಗಿದೆ; ಇದನ್ನು ಸರಿಪಡಿಸುವ ಹಂತ ದಾಟಿದೆ ಈ ಹಂತದಲ್ಲಿ ಸಂಘಟನೆ ಮಾಡುವುದು, ಎಲ್ಲರನ್ನೂ ಒಗ್ಗೂಡಿಸುವುದು ಸುಲಭವಲ್ಲ