ಬೆಂಗಳೂರು: ಭಾರತದ ವಿಜ್ಞಾನಿಗಳ ಪರಿಶ್ರಮದಿಂದ ಸೌರಶಕ್ತಿ ಚಾಲಿತ ವಿಮಾನವೊಂದು (Solar powered plane) ಅಭಿವೃದ್ಧಿಗೊಂಡಿದೆ. ಬಹೂಪಯೋಗಿ ವಿಮಾನ ಭವಿಷ್ಯದಲ್ಲಿ ಭಾರತದ ಪಾಲಿಗೆ ದೊಡ್ಡ ಕೊಡಗೆಯಾಗಲಿದೆ. ಈ ವಿಮಾನವನ್ನು ಒಂದು ಬಾರಿ ಹಾರಿ ಬಿಟ್ಟರೆ 90 ದಿನಗಳವರೆಗೆ ಹಾರಬಲ್ಲದು. ಇದ ಪ್ರೊಟೊ ಟೈಪ್ ಅನ್ನು ಈಗಾಗಲೇ 10 ಗಂಟೆಗಳ ಕಾಲ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದು ಹೈ-ಆಲ್ಟಿಟ್ಯೂಡ್ ಪ್ಲಾಟ್ಫಾರ್ಮ್ (HAP) ಮೂಲಕ ಹಾರಬಲ್ಲ ದೇಶದ ಮೊದಲ ವಿಮಾನ ಎನಿಸಿಕೊಳ್ಳಲಿದೆ. ಅಲ್ಲದೆ ಇದು ಮಾನ ರಹಿತವಿಮಾವೂ ಆಗಿರುವುದು ವಿಶೇಷ. ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್‌ನಲ್ಲಿ ವಿಮಾನ ಅಭಿವೃದ್ಧಿಯಾಗಿದೆ.
ಎಚ್ಎಪಿಎಸ್ (High-Altitude Platform) ಡ್ರೋನ್‌ಗಳ ರೀತಿಯಲ್ಲೇ ಇರುತ್ತದೆ. ಆದರೆ, ಸ್ಟ್ರಾಟೋಸ್ಪಿಯರ್ ಮೂಲಕ ಹಾರುವರ ಸಾಮರ್ಥ್ಯ (ವಾಣಿಜ್ಯ ವಿಮಾನಗಳಿಗಿಂತ ಹೆಚ್ಚು) ಹೊಂದಿರುವ ಕಾರಣ ವಿಮಾನದಂತೆ ವರ್ತಿಸುತ್ತದೆ. ಕಣ್ಗಾವಲ ಕೆಲಸದಿಂದ ಹಿಡಿದು 5 ಜಿ ತರಂಗಗಳ ಪ್ರಸಾರದವರೆಗೆ ಹಲವಾರು ಉದ್ದೇಶಗಳಿಗಾಗಿ ಈ ವಿಮಾನವನ್ನು ಬಳಸಬಹುದು. ವರದಿಗಳ ಪ್ರಕಾರ, ಅರಿಜೋನಾ ಮರುಭೂಮಿಯಲ್ಲಿ 64 ದಿನಗಳ ನಿರಂತರ ಹಾರಾಟ ಪ್ರದರ್ಶಿಸಿದ ಏರ್‌ಬಸ್ ಜೆಫಿರ್ ಪ್ರಸ್ತುತ ವಿಶ್ವದ ಏಕೈಕ ಎಚ್ಎಪಿಎಸ್ ಆಗಿದೆ.
ಇತ್ತೀಚೆಗೆ ನಡೆದ ಇಂಡಿಯಾ ಡಿಫೆನ್ಸ್ ಏವಿಯೇಷನ್ ಎಕ್ಸ್‌ಪೊದಲ್ಲಿ ಈ ಪ್ರಮುಖ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು. ಮೂರು ದಿನಗಳ ಈ ಕಾರ್ಯಕ್ರಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 12 ರಂದು ಉದ್ಘಾಟಿಸಿದ್ದರು.
ಈ ವರ್ಷದ ಆರಂಭದಲ್ಲಿ ವಿಶ್ವ ಆರ್ಥಿಕ ವೇದಿಕೆಯ ಅಗ್ರ 10 ಉದಯೋನ್ಮುಖ ತಂತ್ರಜ್ಞಾನಗಳ ಪಟ್ಟಿಯಲ್ಲಿ ಎಚ್ಎಪಿಎಸ್ ಸ್ಥಾನ ಪಡೆದಿದೆ. ಈ ವಿಮಾನಗಳನ್ನು ದೂರದ ಪ್ರದೇಶಗಳಿಗೆ ಮೊಬೈಲ್ ನೆಟ್ವರ್ಕ್ ವಿಸ್ತರಿಸಲು ಮತ್ತು ವಿಶ್ವಾದ್ಯಂತ 2.6 ಬಿಲಿಯನ್ ಜನರಿಗೆ ಡಿಜಿಟಲ್ ಸೇವೆಯ ಕೊರತೆ ನಿವಾರಿಸಲು ಸಹಾಯ ಮಾಡಲು ಬಳಸಬಹುದು ಎಂದು ಅಂತರರಾಷ್ಟ್ರೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Arvind Kejriwal : ಕೇಜ್ರಿವಾಲ್ ಜೈಲಿಂದ ಬಿಡುಗಡೆಗೊಂಡಾಗ ಪಟಾಕಿ ಸಿಡಿಸಿದವರ ಮೇಲೆ ಬಿತ್ತು ಕೇಸ್
ಫೆಬ್ರವರಿಯಲ್ಲಿ ಎನ್ಎಎಲ್ ವಿಜ್ಞಾನಿಗಳು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಎಚ್ಎಪಿಎಸ್ ಮೂಲಮಾದರಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದರು.
“ಚಳ್ಳಕೆರೆಯಲ್ಲಿ ನಾವು ಪರೀಕ್ಷಿಸಿದ ಎಚ್ಎಪಿಎಸ್ ಒಂದು ಮೂಲಮಾದರಿಯಾಗಿದೆ. ಇದು 5 ಮೀಟರ್ ಉದ್ದದ ಉದ್ದವಿದ್ದು 12 ಮೀಟರ್ ರೆಕ್ಕೆಗಳನ್ನು ಹೊಂದಿದ್ದು, 23 ಕೆ.ಜಿ ತೂಕವಿದೆ. 2027 ರ ವೇಳೆಗೆ, 30 ಮೀಟರ್ ಗಿಂತ ಕಡಿಮೆ ರೆಕ್ಕೆಗಳನ್ನು ಹೊಂದಿರುವ ಮತ್ತು 100 ಕೆ.ಜಿಗಿಂತ ಹೆಚ್ಚು ಆದರೆ 150 ಕೆ.ಜಿಗಿಂತ ಕಡಿಮೆ ತೂಕ ಹೊಂದಿರುವ ಪೂರ್ಣ ಪ್ರಮಾಣದ ಆವೃತ್ತಿಯನ್ನು ನಿರ್ಮಿಸುವ ವಿಶ್ವಾಸವಿದೆ. ಇದು 15 ಕೆ.ಜಿ ತೂಕದ ಪೇಲೋಡ್‌ಗಳನ್ನು ಸಾಗಿಸಲಿದೆ. ” ಎಂದು ಮುಖ್ಯ ವಿಜ್ಞಾನಿ ಎಲ್ ವೆಂಕಟಕೃಷ್ಣನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದರು.
ಬೆಂಗಳೂರು ಮೂಲದ ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಎಂಬ ಸ್ಟಾರ್ಟ್ಅಪ್ ಕೂಡ 24 ಗಂಟೆಗ ಹಾರಾಟಬಲ್ಲ ಇದೇ ರೀತಿಯ ಮೂಲಮಾದರಿಯನ್ನು ರಚಿಸಿದೆ.