ಬೆಂಗಳೂರು: ಮೊಹಮ್ಮದ್ ಶಮಿ (Mohammed Shami) ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಗತ್ಯ ಬೌಲರ್. ಅವರಿದ್ದರೆ ಬೌಲಿಂಗ್ ವಿಭಾಗಕ್ಕೆ ಬಲ. ಆದರೆ 2023ರ ಏಕದಿನ ವಿಶ್ವಕಪ್ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದ ಅವರು ಆ ಬಳಿಕದಿಂದ ಕ್ರಿಕೆಟ್ ಅಂಗಣಕ್ಕೆ ಇಳಿದಿಲ್ಲ. ಗಾಯ ಹಾಗೆಯೇ ವಾಸಿಯಾಗುತ್ತದೆ ಎಂದು ಕಾದು ಕಾದು, ಆಗದೇ ಹೋದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರರ ಪುನಶ್ಚೇತನ ಪ್ರಕ್ರಿಯೆಗೂ ಒಳಗಾಗಿದ್ದರು. ಎಲ್ಲವೂ ಮುಗಿದ ಮೇಲೆ ಅವರು ಬೆಂಗಳೂರಿನ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದಾರೆ. ನಿಧಾನ ಗತಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಓಟದ ಅಂತರ ಹಾಗೂ ಬೌಲಿಂಗ್ ವೇಗ ಹೆಚ್ಚಿಸುತ್ತಿದ್ದಾರೆ. ಈ 34 ವರ್ಷದ ಆಟಗಾರ ಇದೀಗ ವೃತ್ತಿಪರ ಕ್ರಿಕೆಟ್‌ಗೆ ಮರಳುವ ಕುರಿತು ಮಾತನಾಡಿದ್ದು, ಯಾವಾಗ ತಂಡಕ್ಕೆ ಸೇರಿಕೊಳ್ಳುವೆ ಎಂಬುದಾಗಿ ಕ್ರಿಕೆಟ್ ಸಮುದಾಯಕ್ಕೆ ವಿವರಿಸಿದ್ದಾರೆ.
ಗಾಯದ ಆತಂಕದಲ್ಲೇ ಇರುವ ಶಮಿ ಮತ್ತೆ ಗಾಯಗೊಳ್ಳುವ ಅಪಾಯ ತಂದುಕೊಳ್ಳುವುದಕ್ಕೆ ಸಿದ್ಧನಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಬಂಗಾಳ ಮೂಲದ ವೇಗಿಗೆ ಆದಷ್ಟು ಬೇಗ ಪುನರಾಗಮನದ ಮಾಡುವ ಬಯಕೆ ಇದ್ದರೂ ಗಾಯದ ಮೇಲೆ ಒತ್ತಡ ಹಾಕುವ ಮನಸ್ಸಿಲ್ಲ. ಸಂಪೂರ್ಣ ಫಿಟ್ನೆಸ್ ಪಡೆಯುವ ತನಕ ಮೈದಾನಕ್ಕೆ ಇಳಿಯಲಾರೆ ಎಂದಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಕಾರಣ ಹಿಂದಿರುಗುವ ದಿನಾಂಕವನ್ನು ಹೇಳಲು ಅವರಿಂದ ಸಾಧ್ಯವಾಗಿಲ್ಲ. ಯಾಕೆಂದರೆ ಅವರು ಮುಂಬರುವ ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾ ಸರಣಿಗೆ ಮರಳುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಆ ಮಾತನ್ನು ಅವರು ಒಪ್ಪುತ್ತಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಿಗೆ ಮರಳುವ ಮೊದಲು ತಮ್ಮ ಫಿಟ್ನೆಸ್ ಪರೀಕ್ಷಿಸಲು ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
Mohammed Shami is committed to bringing his best for Team India 🔥🏏#MohdShami #Indiancricket #Insidesport #CricketTwitter pic.twitter.com/o35wXU106k
— InsideSport (@InsideSportIND) September 15, 2024
ಶೀಘ್ರದಲ್ಲೇ ಪುನರಾಗಮನ ಮಾಡುವುದಕ್ಕೆ ಶ್ರಮಿಸುತ್ತಿದ್ದೇನೆ. ನಾನು ದೀರ್ಘ ಸಮಯದಿಂದ ಆಟದಿಂದ ದೂರ ಉಳಿದಿರುವುದು ಉತ್ತಮವಲ್ಲ.ಆದರೆ, ನಾನು ಹಿಂದಿರುಗುವ ಮದಲು ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ಅದಕ್ಕಾಗಿ ನಾನು ನನ್ನ ಫಿಟ್ನೆಸ್ ಹೆಚ್ಚಿಸಿಕೊಳ್ಳುವುದಕ್ಕೆ ಕೆಲಸ ಮಾಡಬೇಕಾಗಿದೆ ಎಂದು ಸಿಎಬಿ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಶಮಿ ಮಾಹಿತಿ ಹೇಳಿಕೊಂಡಿದ್ದಾರೆ.
ದೇಶೀಯ ಕ್ರಿಕೆಟ್ ಆಡುವೆ
ನಾನು ಬಲಶಾಲಿಯಾಗಿ ಹಿಂದಿರುಗಿದಷ್ಟೂ ನನಗೆ ಒಳ್ಳೆಯದು. ಬಾಂಗ್ಲಾದೇಶ, ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದರೆ ಮತ್ತೆ ಗಾಯಗೊಳ್ಳುವ ಅಪಾಯ ಇದ್ದೇ ಇರುತ್ತದೆ. ಅದು ನನಗೆ ಬೇಡದ ವಿಷಯ. ನಾನು ಈಗಾಗಲೇ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದೇನೆ. ಆದರೆ ನಾನು ಶೇಕಡಾ 100 ರಷ್ಟು ಫಿಟ್ ಆಗಿಲ್ಲ. ಅದು ಆಗುವ ತನಕ ತಪ್ಪು ಮಾಡುವುದಿಲ್ಲ. ನನ್ನ ಫಿಟ್ನೆಸ್ ಪರಿಕ್ಷೆಗಾಗಿ ನಾನು ದೇಶೀಯ ಕ್ರಿಕೆಟ್ ಆಡಬೇಕಾದರೆ ಅದೂ ಮಾಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದೆ ಏನೇ ಬಂದರೂ ನಾನು ಸಂಪೂರ್ಣವಾಗಿ ಸಿದ್ಧಗೊಳ್ಳುತ್ತೇನೆ “ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Saleema Imtiaz: ಅಂತಾರಾಷ್ಟ್ರೀಯ ಮಹಿಳಾ ಅಂಪೈರ್ ಆಗಿ ನಾಮನಿರ್ದೇಶನಗೊಂಡ ಪಾಕ್‌ನ ಸಲೀಮಾ
ಚಳಿಗಾಲದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಮೊದಲು ಭಾರತ ತಂಡವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ಈ ಸರಣಿಯಲ್ಲಿ ಶಮಿ ಕಾಣಿಸಿಕೊಳ್ಳುವ ನಿರೀಕ್ಷೆ ಎಲ್ಲದರು. ಆದರೆ ಎಲ್ಲವೂ ಅವರ ದೇಹವು ವರ್ತಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ, ಆಯ್ಕೆದಾರರು ವೇಗಿಯನ್ನು ಮರಳಿ ಕರೆತರಲು ಯಾವುದೇ ಆತುರವಿಲ್ಲ ಎಂಬ ಮನೋಭಾವ ಹೊಂದಿದೆ.