Friday, 20th September 2024

FEAR Movie: ಭಯಪಡಿಸಲು ಬರ್ತಿದ್ದಾರೆ ವೇದಿಕಾ; ‘ಫಿಯರ್’ ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ ಪ್ರಭುದೇವ

FEAR Movie

ಬೆಂಗಳೂರು: ನಟಿ ವೇದಿಕಾ ಅಭಿನಯದ ಫಿಯರ್‌ ಚಿತ್ರದ (FEAR Movie) ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಬಿಡುಗಡೆ ಮಾಡಿದ್ದಾರೆ. ದತ್ತಾತ್ರೇಯ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಎ.ಆರ್. ಅಭಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಜಾತಾ ರೆಡ್ಡಿ ಸಹ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ನಿರ್ದೇಶಕ ಡಾ. ಹರಿತಾ ಗೋಗಿನೇನಿ ಫಿಯರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಅರವಿಂದ್ ಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಫಿಯರ್‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶ್ವೇತಾ ಶೆಟ್ಟಿಯವರು ಡಬ್ಬಿಂಗ್ ಹೊಣೆಯನ್ನು ನಿಭಾಯಿಸಿದ್ದಾರೆ. ʼಫಿಯರ್ʼ ಬಿಡುಗಡೆಗೂ ಮುನ್ನವೇ ವಿವಿಧ ಅಂತಾರಾಷ್ಟ್ರೀಯ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ಸೃಷ್ಟಿಸಿದೆ.

ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ʼFEARʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕತ್ತಲ ಕೋಣೆಯಲ್ಲಿ ನಾಯಕಿ ಭಯಭೀತರಾಗಿ ಕಾಣುತ್ತಿರುವ ಸ್ಟಿಲ್‌ನೊಂದಿಗೆ ಡಿಸೈನ್ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸುತ್ತಿದೆ. ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ ʼಫಿಯರ್‌ʼ ಚಿತ್ರ ಶೀಘ್ರದಲ್ಲೇ ರಿಲೀಸ್‌ಗೆ ಸಿದ್ಧವಾಗುತ್ತಿದೆ.

ಚಿತ್ರದಲ್ಲಿ ಜೆಪಿ (ಜಯಪ್ರಕಾಶ್ ), ಪವಿತ್ರ ಲೋಕೇಶ್, ಅನೀಶ್ ಕುರುವಿಲ್ಲ, ಸಯಾಜಿ ಶಿಂಧೆ, ಸತ್ಯ ಕೃಷ್ಣ, ಸಾಹಿತಿ ದಾಸರಿ, ಶಾನಿ ಮುಂತಾದವರು ಇದ್ದು, ಚಿತ್ರಕ್ಕೆ ಅನೂಪ್ ರುಬೇನ್ಸ್ ಸಂಗೀತ, ಐ ಆಂಡ್ರ್ಯೂ ಛಾಯಾಗ್ರಹಣ, ಕೃಷ್ಣಕಾಂತ್ ಸಾಹಿತ್ಯ, ವಿಶಾಲ್ ನೃತ್ಯ ಸಂಯೋಜನೆ , ಶ್ವೇತಾ ಶೆಟ್ಟಿ ಅವರು ಕನ್ನಡ ಡೈಲಾಗ್ಸ್ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ | Sandalwood News: ‘ದೂರದರ್ಶನ’ ನಿರ್ದೇಶಕರ ಹೊಸ ಸಾಹಸ; ‘ಪೀಟರ್’ಗೆ ಸಾಥ್ ಕೊಟ್ಟ ವಿಜಯ್ ಸೇತುಪತಿ, ಡಾಲಿ ಧನಂಜಯ್

ದರೋಡೆಕೋರರ ಕಥೆ ಹೇಳುವ ಇವರು ಆಧುನಿಕ ʼಅಸುರರುʼ; ಚಿತ್ರದ ಟೀಸರ್‌ ರಿಲೀಸ್‌

Asuraru Movie

ಬೆಂಗಳೂರು: ‘ಹುಲಿಬೇಟೆ’ (Hulibete) ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ ಈಗ ದರೋಡೆಯ ಕಥೆ ಹೊತ್ತು ಬಂದಿದ್ದು, ʼಅಸುರರುʼ ಸಿನಿಮಾ (Asuraru Movie)ದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇತ್ತೀಚೆಗೆ ಜರುಗಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಈ ವೇಳೆ ನಿರ್ದೇಶಕ ರಾಜ್ ಬಹದ್ದೂರ್ ಮಾತನಾಡಿ, ʼʼಈ ಹಿಂದೆ ನಾನು ʼಹುಲಿಬೇಟೆʼ ಸಿನಿಮಾ ಮಾಡಿದ್ದೆ. ತಾತ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಲ್ಲಿ ಈ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಸಬೇಕು ಎಂದಾಗ ʼಅಸುರರುʼ ಸಿನಿಮಾ ಮಾಡಿದ್ದು. ʼಅಸುರರುʼ ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ದರೋಡೆ ಮಾಡುವುದು. ಅವರೇ ಅಸುರರುʼʼ ಎಂದು ತಿಳಿಸಿದರು.

ನಾಯಕ ತಮ್ಮಣ್ಣ ಮಾತನಾಡಿ, ʼʼಸಿನಿಮಾ ಇಲ್ಲಿವರೆಗೂ ಬರಲು ಕಾರಣ ಇಡೀ ಸಿನಿಮಾ ತಂಡ. ಎಲ್ಲರೂ ಎಲ್ಲಾ ಕೆಲಸ ಮಾಡಿದ್ದಾರೆ. ನವೆಂಬರ್ 1ರಂದು ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿದೆʼʼ ಎಂದು ಮನವಿ ಮಾಡಿದರು.

ʼಅಸುರರುʼ ಚಿತ್ರಕ್ಕೆ ರಾಜ್ ಬಹದ್ದೂರ್ ಆ್ಯಕ್ಷನ್‌ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ: Sandalwood News: ನೂರೆಂಟು ಗಣೇಶನ ದರ್ಶನ‌ ಪಡೆದ ʼಮಿ. ರಾಣಿʼ ಚಿತ್ರತಂಡ!

ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್‌ನಡಿ ನಿರ್ಮಾಣವಾಗಿರುವ ʼಅಸುರರುʼ ಸಿನಿಮಾಕ್ಕೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ʼಅಸುರರುʼ ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿ ಕೊಡಲಾಗಿದೆ. ಟೀಸರ್ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಚಿತ್ರತಂಡ ನವೆಂಬರ್ 1ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.