Thursday, 19th September 2024

Minister M C Sudhakar: ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಅಭಿವೃದ್ದಿ ಮಾಡುತ್ತೇನೆ- ಸಚಿವ ಎಂ ಸಿ ಸುಧಾಕರ್

ಚಿಂತಾಮಣಿ: ಮುರುಗಮಲೆ ದರ್ಗಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಆಗಿ ಅಭಿವೃದ್ದಿ ಮಾಡುತ್ತೇನೆ ಎಂದು ಸಚಿವ ಎಂ ಸಿ ಸುಧಾಕರ್ ಭರವಸೆ ನೀಡಿದರು.

ತಾಲೂಕಿನ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹತ್ತು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದಾಗ ದರ್ಗಾಗೆ ಒಂದು ಉತ್ತಮ ರೂಪ ಕೊಡಬೇಕೆಂದು ಕನಸು ಕಂಡಿದ್ದೆ. ಅಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಖಾಲಿದ್ ರಾಜ್ಯಾಧ್ಯಕ್ಷರಾಗಿದ್ದರು. ಹಲವಾರು ಬಾರಿ ದರ್ಗಾ ಅಭಿವೃದ್ದಿ ವಿಚಾರದಲ್ಲಿ ಅವರ ಜೊತೆ ಮಾತುಕತೆ ನಡೆಸಿದ್ದೆ ಆಗಿನ ವಕ್ಫ್ ಸಚಿವರಾದ ಮಮ್ತಾಜ್ ಅಲಿಖಾನ್ ರವರ ನಾಲ್ಕು ಕೋಟಿ ಅನುದಾನ ಹಾಕಿ ಕಾಮಗಾರಿ ಮಾಡಿದ್ದು ಅದು ಹಾಳಾಗಿ ಹೋಯಿತು ನಂತರ ನನಗೆ ಅವಕಾಶ ಸಿಗಲಿಲ್ಲ ಹತ್ತು ವರ್ಷಗಳ ನಂತರ ಪುನಃ ಎಲ್ಲಾ ಮುಸ್ಲಿಂ ಬಾಂಧವರು ಮುರುಗಮಲ್ಲ ಕ್ಷೇತ್ರ ಸೇರಿದಂತೆ ವಿವಿಧ ಭಾಗಗಳ ಜನರು ಸಹಕರಿಸಿದ ಕಾರಣ ಮಂತ್ರಿ ಹಾಗೂ ಶಾಸಕನಾಗಿದ್ದೇನೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ!ಎಂ ಸಿ ಸುಧಾಕರ್ ಹೇಳಿದರು.

ಇದನ್ನೂ ಓದಿ: Dr M C Sudhakar: 50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ

ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯತಾಣವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾಬಾಜಾನ್ ದರ್ಗಾ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರದ ವಕ್ಫ್ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ರವರನ್ನು ಭೇಟಿ ಮಾಡಿ ದರ್ಗಾ ಅಭಿವೃದ್ದಿ ವಿಚಾರದ ಬಗ್ಗೆ ಮಾತುಕತೆ ನಡೆಸಿ ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಬೇಕು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ  ದರ್ಗಾಗೆ ಬರುತ್ತಾರೆ  ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೇಳಿದಾಗ ಅವರು ವಕ್ಫ್ ಇಲಾಖೆಯಿಂದ ಹೆಚ್ಚಿನ ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದಲೂ ಅನುದಾನ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿವರಿಸಿದ ಅವರು ಮುಸ್ಲಿಂ ಸಂಪ್ರದಾಯದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಅಭಿವೃದ್ಧಿಪಡಿಸಲು ಈಗಾಗಲೇ ನೀಲಿ ನಕಾಶೆ ತಯಾರು ಮಾಡಲಾಗಿದೆ. ದರ್ಗಾ ಆವರಣದಲ್ಲಿ ಇನ್ನು ಹೆಚ್ಚಾಗಿ ಬದಲಾವಣೆಗಳು ತರಬೇಕಾಗಿದೆ. ದರ್ಗಾ ಆವರಣದ ಅಭಿವೃದ್ಧಿ ಕಾಮಗಾರಿಗಳು ವಕ್ಫ್ ಇಲಾಖೆಯ ಮುಖಾಂತರವೇ ವಕ್ಫ್ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿ ಮಾಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಹನೀಫ್ ಸೆಟ್. ಕಾರ್ಯದರ್ಶಿ ಆರಿಫ್ ಖಾನ್.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್, ಸದಸ್ಯರದ ಅಮೀರ್ ಜಾನ್, ಗ್ರಾಮದ ಮುಖಂಡರಾದ ಲಕ್ಷ್ಮೀನಾರಾಯಣ ರೆಡ್ಡಿ, ಶ್ರೀರಾಮರೆಡ್ಡಿ, ಮೂರ್ತಿ, ತನ್ವೀರ್ ಪಾಷಾ, ಕರಿಯಪಲ್ಲಿ ಮಾಲಿಕ್ ಪಾಷ, ಗಂಡ್ರಗಾನಹಳ್ಳಿ ಪ್ಯಾರಜಾನ್, ಸೈಯದ್ ನಯಾಜ್, ವಕ್ಫ್ ಬೋರ್ಡ್ ಅಧಿಕಾರಿ ನವೀದ್ ಪಾಷಾ, ದರ್ಗಾ ಮೇಲ್ವಿಚಾರಕರಾದ ತಯೂಬ್ ನವಾಜ್, ಅಬ್ದುಲ್ ಸಲಾಂ, ಅಬ್ದುಲ್ ರೆಹಮಾನ್, ಇಂತಿಯಾಜ್ ಪಾಷಾ ಸೇರಿದಂತೆ ಸ್ಥಳೀಯ ಮುಖಂಡರುಗಳು ಗ್ರಾಮಸ್ಥರು ಭಾಗವಹಿಸಿದ್ದರು.