Friday, 22nd November 2024

Viral News: 20 ವರ್ಷಗಳಿಂದ ಒಂದೇ ಸಂಖ್ಯೆಯ ಲಾಟರಿ ಖರೀದಿಸಿ ಕೊನೆಗೂ 8 ಕೋಟಿ ರೂ. ಗೆದ್ದ

Viral News

ಅಮೆರಿಕದ (America) ವ್ಯಕ್ತಿಯೊಬ್ಬ ಲಾಟರಿಯಲ್ಲಿ (lottery) 8 ಕೋಟಿ ರೂ. ಗೆದ್ದುಕೊಂಡು ಸಂಭ್ರಮದಲ್ಲಿದ್ದಾನೆ. ಅವರು ಗೆದ್ದಿರುವುದು ವಿಶೇಷವಲ್ಲ. ಅವರ ಇದಕ್ಕಾಗಿ 20 ವರ್ಷಗಳ ಕಾಲ ತಪಸ್ಸು ಮಾಡಿದ್ದಾನೆ ಎಂದೇ ಹೇಳಬಹುದು. ಯಾಕೆಂದರೆ ಅವನು 20 ವರ್ಷಗಳಿಂದ ಒಂದೇ ಸಂಖ್ಯೆಗಳಿರುವ ಲಾಟರಿ ಟಿಕೇಟ್ ಖರೀದಿ ಮಾಡಿ ಕೊನೆಗೂ ದೊಡ್ಡ ಮೊತ್ತವನ್ನೇ ಬಹುಮಾನವಾಗಿ ಗೆದ್ದಿದ್ದಾರೆ . ಈ ಸುದ್ದಿ ಈಗ ಎಲ್ಲೆಡೆ ವೈರಲ್ (Viral News) ಆಗಿದೆ.

ಅವನ 20 ವರ್ಷ ತಪಸ್ಸಿನ ಫಲ ಕೊನೆಗೂ ಸಿಕ್ಕಿದೆ. ಈ ಬಾರಿ ಅವನು ಲಾಟರಿಯಲ್ಲಿ 1 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 8 ಕೋಟಿ ರೂ. ಅನ್ನು ಬಹುಮಾನವಾಗಿ ಗೆದ್ದಿದ್ದಾರೆ . ಥಾಮಸ್ ಎನ್ಸ್ಕೋ ಎಂಬಾತನೇ ಈ ಅದೃಷ್ಟಶಾಲಿ ವ್ಯಕ್ತಿ.

ಮ್ಯಾಸಚೂಸೆಟ್ಸ್‌ನ ಥಾಮಸ್ ತಮ್ಮ ಜನ್ಮದಿನವನ್ನು ಪ್ರೇರಣೆಯಾಗಿ ಪಡೆದು ಅದೇ ಸಂಖ್ಯೆಯ ಲಾಟರಿಗಳನ್ನು ಕಳೆದ 20 ವರ್ಷಗಳಿಂದ ಖರೀದಿ ಮಾಡಿದ್ದಾರೆ. ಕಳೆದ 19 ವರ್ಷಗಳಂತೆ ಅವರಿಗೆ ಈ ಬಾರಿಯೂ ಗೆಲ್ಲುವ ನಿರೀಕ್ಷೆ ಏನೂ ಇರಲಿಲ್ಲ. ಆದರೂ ಬ್ಲ್ಯಾಕ್‌ಸ್ಟೋನ್‌ನಲ್ಲಿರುವ ಆಂಡರ್ಸನ್‌ನ ವೆರೈಟಿ ಸ್ಟೋರ್‌ನಿಂದ ಮೆಗಾ ಮಿಲಿಯನ್ ಲಾಟರಿ ಟಿಕೇಟ್ ಖರೀದಿಸಿದ್ದರು.

ಥಾಮಸ್ ಅವರಿಗೆ ಡಾರ್ಚೆಸ್ಟರ್‌ನಲ್ಲಿರುವ ಮ್ಯಾಸಚೂಸೆಟ್ಸ್ ರಾಜ್ಯ ಲಾಟರಿ ಪ್ರಧಾನ ಕಚೇರಿಯು ತೆರಿಗೆಯನ್ನು ಒಳಗೊಂಡಂತೆ 1,000,000 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಇದರಿಂದ ಎನ್ಸ್ಕೋ ಅವರಿಗೆ ವಿಜೇತ ಟಿಕೆಟ್‌ ಮಾರಾಟ ಮಾಡಿದ ಅಂಗಡಿಯು 10,000 ಡಾಲರ್ ಬೋನಸ್ ಪಡೆದಿದೆ.

ಲಾಟರಿ ಟಿಕೆಟ್‌ನಲ್ಲಿ ಇದು ಅವರ ಮೊದಲ ಗೆಲುವು ಅಲ್ಲ. ಯಾಕೆಂದರೆ ಥಾಮಸ್ ಅವರ ಪತ್ನಿ 20 ವರ್ಷಗಳ ಹಿಂದೆ ಲಾಟರಿಯಲ್ಲಿ 1 ಮಿಲಿಯನ್ ಡಾಲರ್ ಗೆದ್ದಿದ್ದರು. ಲಾಟರಿಯಲ್ಲಿನ ಗೆಲುವಿನ ಮೊತ್ತದಿಂದ ತಮ್ಮ ಸಂಪೂರ್ಣ ಕುಟುಂಬಕ್ಕೆ ಪ್ರಯೋಜನ ಸಿಗಬೇಕು ಎಂಬುದಾಗಿ ಥಾಮಸ್ ಹೇಳಿಕೊಂಡಿದ್ದಾರೆ.

ಏನಿದು ಮೆಗಾ ಮಿಲಿಯನ್ ಲಾಟರಿ?

ಮೆಗಾ ಮಿಲಿಯನ್ ಲಾಟರಿಯಲ್ಲಿ 45 ರಾಜ್ಯಗಳ ಜನರು ಪಾಲ್ಗೊಳ್ಳುತ್ತಾರೆ. ಇದರ ಲಕ್ಕಿ ಡ್ರಾ ಅನ್ನು ವಾಷಿಂಗ್ಟನ್ ಡಿಸಿ, ಯುಎಸ್ ವರ್ಜಿನ್ ಐಲ್ಯಾಂಡ್ಸ್, ಜಾರ್ಜಿಯಾದ ಅಟ್ಲಾಂಟಾದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾಡಲಾಗುತ್ತದೆ. ಈ ವರ್ಷ ಕೇವಲ ಇಬ್ಬರು ಮೆಗಾ ಮಿಲಿಯನ್‌ ಲಾಟರಿ ಗೆದ್ದಿದ್ದು ನೂರಾರು ಮಂದಿ ಸಣ್ಣ ಬಹುಮಾನಗಳನ್ನು ಗೆದ್ದಿದ್ದಾರೆ.

ಮಾರ್ಚ್‌ನಲ್ಲಿ ನ್ಯೂಜೆರ್ಸಿಯಲ್ಲಿ ನಡೆದ ಡ್ರಾದಲ್ಲಿ ಒಬ್ಬರು 1.13 ಶತಕೋಟಿ ಡಾಲರ್ ಗೆದ್ದಿದ್ದು, ಬಳಿಕ ಜೂನ್‌ನಲ್ಲಿ ಇಲಿನಾಯ್ಸ್‌ನ ಅದೃಷ್ಟಶಾಲಿ ವ್ಯಕ್ತಿ 552 ಮಿಲಿಯನ್ ಡಾಲರ್ ಗಳಿಸಿದ್ದರು.

Viral News: ತಂದೆ ಹುಲಿ ಬೇಟೆಯಾಡಿ ರಕ್ತ ಮುಖಕ್ಕೆ ಹಚ್ಚಿದ್ದರು ಎಂದ ಟೀಮ್‌ ಇಂಡಿಯಾದ ಮಾಜಿ ವೇಗಿ

ಪ್ರಸ್ತುತ ಲಾಟರಿ ಜಾಕ್‌ಪಾಟ್ ಮೊತ್ತ 800 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 67,10,51,20,000 ಕೋಟಿ ರೂ. ಆಗಿದ್ದು, ಅದೃಷ್ಟಶಾಲಿ ವ್ಯಕ್ತಿ ತೆರಿಗೆ ಕಡಿತದ ಬಳಿಕ ಸುಮಾರು 404.2 ಮಿಲಿಯನ್ ಡಾಲರ್ ಅಂದರೆ ಸುಮಾರು 33,90,48,619 ರೂ. ಅನ್ನು ನೀಡಲಾಗುತ್ತದೆ ಎನ್ನುತ್ತಾರೆ ತೆರಿಗೆ ಅಧಿಕಾರಿಗಳು.