Thursday, 19th September 2024

Emmys 2024: 76ನೇ ಎಮ್ಮಿ ಅವಾರ್ಡ್ಸ್‌ ಘೋಷಣೆ; ಇಲ್ಲಿದೆ ವಿಜೇತರ ಪಟ್ಟಿ

Emmys 2024

ವಾಷಿಂಗ್ಟನ್‌: ಪ್ರತಿಷ್ಠಿತ 76ನೇ ಎಮ್ಮಿ (Emmys 2024) ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ಭಾನುವಾರ ನಡೆಯಿತು. ʼಶೋಗನ್‌ʼ ಮತ್ತು ʼಬೇಬಿ ರೈಂಡೀರ್‌ʼ ಸೀರಿಸ್‌ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಸಿನಿಮಾಗಳಿಗೆ ಆಸ್ಕರ್ (Oscar) ಇರುವಂತೆ, ಕಿರುತೆರೆಯ ಅತ್ಯುತ್ತಮ ಸೀರಿಸ್‌, ಡಾಕ್ಯುಮೆಂಟರಿ, ನಟನಟಿಯರ ಪ್ರತಿಭೆ ಗುರುತಿಸಿ ಎಮ್ಮಿ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿದೆ ಈ ಬಾರಿಯ ವಿಜೇತರ ಸಂಪೂರ್ಣ ವಿವರ.

ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಡ್ರಾಮಾ ಸೀರಿಸ್‌: ಶೋಗನ್‌ (Shogun)
ಅತ್ಯುತ್ತಮ ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌: ಬೇಬಿ ರೈಂಡೀರ್‌ (Baby Reindeer)
ಅತ್ಯುತ್ತಮ ಕಾಮಿಡಿ ಸಿರೀಸ್‌: ಹ್ಯಾಕ್ಸ್‌ (Hacks)
ಕಾಮಿಡಿ ಸಿರೀಸ್‌ನ ಅತ್ಯುತ್ತಮ ನಟ: ಜೆರೆಮಿ ಅಲೆನ್ ವೈಟ್(Jeremy Allen White) (ದಿ ಬೇರ್)
ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪ್ರಮುಖ ನಟ: ಹಿರೋಯುಕಿ ಸನದಾ (Hiroyuki Sanada) (ಶೋಗನ್)
ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪ್ರಮುಖ ನಟ: ರಿಚರ್ಡ್ ಗಾಡ್ (Richard Gadd) (ಬೇಬಿ ರೈಂಡೀರ್‌)
ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪ್ರಮುಖ ನಟಿ: ಅನ್ನಾ ಸವಾಯಿ (Anna Sawai) (ಶೋಗನ್)
ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪ್ರಮುಖ ನಟಿ: ಜೋಡಿ ಫೋಸ್ಟರ್ (Jodie Foster) (ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ)
ಕಾಮಿಡಿ ಸಿರೀಸ್‌ನ ಅತ್ಯುತ್ತಮ ಪೋಷಕ ನಟ: ಎಬೊನ್ ಮಾಸ್-ಬಚ್ರಾಚ್ (Ebon Moss-Bachrach) (ದಿ ಬೇರ್)
ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪೋಷಕ ನಟ: ಬಿಲ್ಲಿ ಕ್ರುಡಪ್ (Billy Crudup) (ದಿ ಮಾರ್ನಿಂಗ್ ಶೋ)
ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪೋಷಕ ನಟ: ಲಾಮೊರ್ನೆ ಮೋರಿಸ್ (Lamorne Morri) (ಫಾರ್ಗೋ)
ಕಾಮಿಡಿ ಸೀರಿಸ್‌ನ ಪೋಷಕ ನಟಿ: ಲಿಜಾ ಕೊಲೊನ್-ಝಯಾಸ್ (Liza Colón-Zayas) (ದಿ ಬೇರ್)
ಡ್ರಾಮಾ ಸೀರಿಸ್‌ನ ಅತ್ಯುತ್ತಮ ಪೋಷಕ ನಟಿ: ಎಲಿಜಬೆತ್ ಡೆಬಿಕಿ (ದಿ ಕ್ರೌನ್)
ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪೋಷಕ ನಟಿ – ಜೆಸ್ಸಿಕಾ ಗುನ್ನಿಂಗ್ (Elizabeth Debicki) (ಬೇಬಿ ರೈಂಡೀರ್‌)
ಕಾಮಿಡಿ ಸಿರೀಸ್‌ನ ಅತ್ಯುತ್ತಮ ನಿರ್ದೇಶನ: ದಿ ಬೇರ್ (The Bear)
ಡ್ರಾಮಾ ಸಿರೀಸ್‌ನ ಅತ್ಯುತ್ತಮನಿರ್ದೇಶನ: ಶೋಗನ್ (Shogun)
ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ನಿರ್ದೇಶನ: ರಿಪ್ಲೆ(Ripley)
ಫಿಲ್ಮ್‌ ರೈಟ್ಸ್‌ ಫಾರ್‌ ನೆಟ್‌ಫ್ಲಿಕ್ಸ್‌: ಸ್ಟೀವನ್ ಜೈಲಿಯನ್ (Steven Zaillian)
ರಿಯಾಲಿಟಿ ಕಾಂಪಿಟಿಷನ್ ಪ್ರೋಗ್ರಾಂ: ಡಿ ಟ್ರೈಟರ್‌ (The Traitors)
ಟಾಕ್ ಸಿರೀಸ್: ದಿ ಡೈಲಿ ಶೋ (The Daily Show)

ಕಳೆದ ವರ್ಷ ಪ್ರಶಸ್ತಿ ಗೆದ್ದಿದ್ದ ಭಾರತೀಯರು

ಕಳೆದ ವರ್ಷ ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಮಿಡಿಯನ್ ವೀರ್​ ದಾಸ್​ಗೆ ವಿಶಿಷ್ಟ ಕಾಮಿಡಿ ವಿಭಾಗದಲ್ಲಿ ಮತ್ತು ಶ್ರೇಷ್ಠ ಕೊಡುಗೆಗಾಗಿ ಏಕ್ತಾ ಕಪೂರ್​ ಅವರಿಗೆ ಪ್ರಶಸ್ತಿ ಬಂದಿತ್ತು. ಏಕ್ತಾ ಕಪೂರ್​ ಕಿರುತೆರೆಗೆ ನೀಡಿರುವ ವಿಶೇಷ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿತ್ತು.

ಈ ಸುದ್ದಿಯನ್ನೂ ಓದಿ: SIIMA awards 2024 : ಕಾಟೇರ, ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಹಲವು ಪ್ರಶಸ್ತಿಗಳು

Leave a Reply

Your email address will not be published. Required fields are marked *