ತಿಪಟೂರು: 5 ಸಾವಿರ ವರ್ಷ ಇತಿಹಾಸವಿರುವ ಸಂಸ್ಕೃತದ ಅಧ್ಯಯನದಿಂದ ವಿಜ್ಞಾನ ಕಲಿಯಲು ಮತ್ತು ಪ್ರಯೋಗ ಮಾಡಲು ಅನುಕೂಲವಾಗುತ್ತದೆ ಎಂದು ಸಂಸ್ಕೃತ ಪಂಡಿತ ಆಯುರ್ವೇದ ವೈದ್ಯಾಧಿಕಾರಿ ಪ್ರಶಾಂತ್ ತಿಳಿಸಿದರು.
ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಆದೇಶದಂತೆ ರಾಜ್ಯದ ಎಲ್ಲಾ ಸಂಸ್ಕೃತ ಶಾಲೆಗಳ ಸಂಸ್ಕೃತ ಉತ್ಸವ ಕಾರ್ಯಕ್ರಮವನ್ನು ವೀರಶೈವಾನಂದಾಶ್ರಮ ಸಂಸ್ಕೃತ ವೇದ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಚನ್ನ ಮಲ್ಲಿಕಾರ್ಜುನ ಸ್ವಾಮಿ ಪಾಠಶಾಲೆ ಕಲ್ಲು ಶೆಟ್ಟಿಹಳ್ಳಿ ಆಯೋಜನೆಗೊಳಿಸಿದ್ದ ಕಾರ್ಯ ಕ್ರಮದಲ್ಲಿ ಉದ್ಘಾಟನೆ ಗೊಳಿಸಿ ಮಾತನಾಡಿ, ಶೂನ್ಯವು ಸಂಸ್ಕೃತದ ಮೂಲ ಸಂಖ್ಯೆಯಾಗಿದೆ ಆಯುರ್ವೇದದ ಔಷಧಗಳನ್ನು ಮೊದಲು ಕಂಡುಹಿಡಿದಿದ್ದು ಋಷಿ ಮುನಿಗಳು, ಶಸ್ತ್ರಚಿಕಿತ್ಸೆ, ರೋಗಗಳಿಗೆ ಔಷದ ನೀಡಿದ ಇತಿಹಾಸ ಭಾರತ ಪರಂಪರೆಗೆ ಸೇರುತ್ತದೆ.
ಸನಾತನ ಸಂಸ್ಕೃತವು ವಿಜ್ಞಾನಕ್ಕಿಂತ ಮಿಗಿಲಾಗಿದೆ. ದೇಹದ ಆರೋಗ್ಯದ ಗುಟ್ಟು ಸಂಸ್ಕೃತ ಅಭ್ಯಾಸದ ಧ್ಯಾನ, ಯೋಗ, ಅಧ್ಯಯನ, ಸಂಸ್ಕಾರದ ಮೂಲ ಮಂತ್ರವಾಗಿದೆ, ವಿದ್ಯಾರ್ಥಿಗಳು ಸಂಸ್ಕೃತ ಕಲಿಯಲು ಹೆಚ್ಚಿನ ಆಸಕ್ತಿ ತೋರಬೇಕು ಇದೇ ಸಂದರ್ಭದಲ್ಲಿ ಸಂಸ್ಕೃತದ ಮಹೇಶ್ವರ ಸ್ತೋತ್ರಗಳು, ಆರ್ಯಭಟ ಚರಕ ಶುಶ್ರುತ ಸಾಧನೆ ವೇದ ಅಧ್ಯಯನದ ಅರಿವು ತಿಳಿಸಿ ಸಂಸ್ಕೃತ ಕಲಿತು ಸುಸಂಸ್ಕೃತರಾಗಿ ಬಾಳಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಸೀತಮ್ಮ ಮಾತನಾಡಿ, ಸಂಸ್ಕೃತ ದೇಶಕ್ಕೆ ಮಾತೃ ಭಾಷೆಯಾಗಿದೆ. ಸಂಸ್ಕೃತ ಅಧ್ಯಯನದಿಂದ ಜ್ಞಾನ ಮತ್ತು ಕ್ರಿಯಾಶಕ್ತಿ, ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ, ದೇಹಕ್ಕೆ ಆರೋಗ್ಯ ಭಾಗ್ಯವಾದರೆ, ಮೆದುಳಿಗೆ ಸಂಸ್ಕೃತಿ ಸೌಭಾಗ್ಯವಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಜಿ, ಉಮಾ ಮಹೇಶ್ ಸಂಸ್ಕೃತ ಶುಭಾಷಿತಗಳನ್ನು ಹೇಳುತ್ತಾ ಕನ್ನಡದಲ್ಲಿ ಅನುಮೋದಿಸಿ ದರು.
ವೇದಿಕೆಯಲ್ಲಿ ಸಮಿತಿಯ ನಿರ್ದೇಶಕ ಎಚ್ ಮೋಹನ್, ಶಿಕ್ಷಕ ಬಸವರಾಜು ಶಾಸ್ತ್ರಿಗಳು, ಚಂದ್ರಶೇಖರ್ ಮುಂತಾ ದವರಿದ್ದರು. ಸಂಸ್ಕೃತ ಅಧ್ಯಯನ ಶೋಭಾ ಯಾತ್ರೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗುತ್ತಾ ಜಯತು ಸಂಸ್ಕೃತ, ಸರಳ ಭಾಷೆ ಸಂಸ್ಕೃತ, ಸಂಸ್ಕೃತ ಉಳಿಸಿ ಎಂಬ ವೇದಘೋಷದೊಂದಿಗೆ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.
ಇದನ್ನೂ ಓದಿ: Tumkur News: ಜಗಜೀವನರಾಂ ಭವನ ನಿರ್ಮಾಣಕ್ಕೆ ಆಸಕ್ತಿ ತೋರಿಸಿ: ಬೇವಿನಹಳ್ಳಿ ಚನ್ನಬಸವಯ್ಯ ಪಟ್ಟು