ತೊಂಡೇಭಾವಿ: ಅದಾನಿ ಫೌಂಡೇಷನ್ ಮತ್ತು ಎಸಿಸಿ ಸಿಮೆಂಟ್ (ಅದಾನಿ ಗ್ರೂಪ್ಸ್) ಅವರ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೊಂಡೇಭಾವಿಯ ಅದಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರವು ಮತ್ತೊಮ್ಮೆ ಯಶಸ್ವಿ ಯಾಗಿ 100% ಉದ್ಯೋಗ ಖಾತರಿಯನ್ನು ಸಾಧಿಸಿದೆ.
ಈ ಬಾರಿ ದ್ವಿತೀಯ ಬ್ಯಾಚ್‌ನ 20 ಮಂದಿ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ ನಂತರ, ಎಲ್ಲರನ್ನು ಫಾಕ್ಸ್ಕಾನ್ ಕಂಪನಿಯಲ್ಲಿ ಇದೇ ಸೆ.14 ರಂದು ಉದ್ಯೋಗದಲ್ಲಿ ನಿಯೋಜಿಸಲು ಯಶಸ್ವಿಯಾಯಿತು.
ಈ ಆಜ್ಞಾಕಾರಕ ಕಾರ್ಯವು ಅದಾನಿ ಫೌಂಡೇಷನ್‌ನ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯ ಒಂದು ಭಾಗ ವಾಗಿದೆ. ಸ್ಥಳೀಯ ಸಮುದಾಯದ ಯುವಜನತೆಗೆ ಉಚಿತ ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ಒದಗಿಸುವ ಮೂಲಕ, ಈ ಕೇಂದ್ರವು ಯುವಜನತೆಯ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಯುವಜನತೆಗೆ ಉದ್ಯೋಗ ಖಾತರಿ ನೀಡುವ ಈ ಮಹತ್ವಾಕಾಂಕ್ಷೆಯ ಯೋಜನೆ, ಸಮುದಾಯದಲ್ಲಿ ಭರ್ಜರಿ ಸ್ಫೂರ್ತಿಯನ್ನೂ ಕೂಡಾ ತುಂಬುತ್ತಿದೆ.ನಮ್ಮ ಪಾಲಿಗೆ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದು ಮಾತ್ರವಲ್ಲ, ಅವರ ಭವಿಷ್ಯವನ್ನು ಕಟ್ಟಿಕೊಡುವುದೇ ಪ್ರಮುಖ ಗುರಿ,” ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯಮಿಗಳ ಬಗೆಗೆ ಇಂಥ ಪೂರ್ವಗ್ರಹವೇಕೆ ?