Thursday, 19th September 2024

Zircon Jewel Set Trend: ಮಹಿಳೆಯರಿಗೆ ಕ್ಲಾಸಿ ಲುಕ್ ನೀಡುವ ಬಂಗಾರೇತರ ಜಿರ್ಕೊನ್ ಜ್ಯುವೆಲ್ ಸೆಟ್!

Zircon Jewel Set Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉನ್ನತ ವರ್ಗದ ಮಹಿಳೆಯರ ಲಿಸ್ಟ್‌ನಲ್ಲಿ ಇದೀಗ ಜಿರ್ಕೊನ್ ಜ್ಯುವೆಲ್ ಸೆಟ್‌ಗಳು (Zircon Jewel Set Trend) ಸೇರಿಕೊಂಡಿವೆ. ಈ ಮೊದಲು ಕೇವಲ ಬಂಗಾರದಲ್ಲಿ (Gold) ಮಾತ್ರ ಲಭ್ಯವಿದ್ದ ಈ ದುಬಾರಿ ಆಭರಣಗಳು ಇದೀಗ ಮಧ್ಯಮ ವರ್ಗದವರಿಗೂ ಪ್ರಿಯವಾಗುವಂತೆ ಬಂಗಾರೇತರ ಜ್ಯುವೆಲರಿ ಕೆಟಗರಿಯಲ್ಲೂ ಬಿಡುಗಡೆಗೊಂಡಿವೆ. ಈ ಮೊದಲು ಹೈ ಕ್ಲಾಸ್ ಮಹಿಳೆಯರ ಸ್ವತ್ತಾಗಿದ್ದ ಜಿರ್ಕೊನ್ ಜ್ಯುವೆಲರಿಗಳು ಇದೀಗ ಸಾಮಾನ್ಯ ಯುವತಿಯರು ಹಾಗೂ ಮಹಿಳೆಯರು ಧರಿಸುವಂತಾಗಿವೆ. ಇದಕ್ಕೆ ಕಾರಣ, ಬಂಗಾರವಲ್ಲದ ಜ್ಯುವೆಲರಿ ಸೆಟ್‌ಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಇವು ದೊರೆಯುತ್ತಿರುವುದು. ಅದರಲ್ಲೂ ಅತ್ಯಾಕರ್ಷಕ ವಿನ್ಯಾಸದಲ್ಲಿ ಆಗಮಿಸಿರುವುದು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದಿಗಂತ್.

ಚಿತ್ರಕೃಪೆ: ಪಿಕ್ಸೆಲ್

ಅತ್ಯಾಕರ್ಷಕ ಜಿರ್ಕೊನ್ ಸೆಟ್‌ಗೆ ಬೇಡಿಕೆ

ಜಿರ್ಕೊನ್ ಆಭರಣಗಳಲ್ಲಿ ಇದೀಗ ಫುಲ್ ಸೆಟ್ ದೊರೆಯುತ್ತವೆ. ಅವುಗಳಲ್ಲಿ ಮಾಂಗ್ಟೀಕಾದಿಂದಿಡಿದು, ಕಮರ್ಬಾಂದ್, ಬಾಜುಬಂಧ್, ಹ್ಯಾಂಗಿಂಗ್ಸ್, ನೆಕ್ಲೇಸ್ ಸೇರಿದಂತೆ ಸಾಕಷ್ಟು ಆಭರಣಗಳು ಸೇರಿವೆ.

ಈ ಸುದ್ದಿಯನ್ನೂ ಓದಿ | IND vs BAN: ರದ್ದಾಗುವ ಭೀತಿಯಲ್ಲಿ ಭಾರತ-ಬಾಂಗ್ಲಾ ನಡುವಣ ಸರಣಿ; ಎಚ್ಚರಿಕೆ ನೀಡಿದ ಸಂಘಟನೆ

ಬ್ರೈಡಲ್ ಜಿರ್ಕೊನ್ ಸೆಟ್‌ಗೆ ಬೇಡಿಕೆ

ಎಲ್ಲದಕ್ಕಿಂತ ಹೆಚ್ಚಾಗಿ ಬ್ರೈಡಲ್ ಜಿರ್ಕೊನ್ ಸೆಟ್‌ಗಳಿಗೆ ಬೇಡಿಕೆ ಹೆಚ್ಚು. ಮೇಲೆ ತಿಳಿಸಿರುವಂತೆ ಮುಡಿಯಿಂದ ಕಾಲಿನವರೆಗೂ ಧರಿಸಬಹುದಾದ ಎಲ್ಲಾ ಬಗೆಯ ಆಭರಣಗಳು ಸೆಟ್‌ನಲ್ಲಿ ದೊರೆಯುತ್ತವೆ. ರೇಷ್ಮೆಯ ಅದರಲ್ಲೂ ಗೋಲ್ಡ್ -ಸಿಲ್ವರ್ ಶೇಡ್ ಬಾರ್ಡರ್ ಇರುವಂತಹ ಸೀರೆಗಳಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ. ಪರಿಣಾಮ, ಮದುವೆಯಲ್ಲಿ ಹುಡುಗಿಯು ಒಂದು ಸೆಟ್ ಆದರೂ ಧರಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಅಕ್ಷತಾ.

ಬಂಗಾರೇತರ ಜಿರ್ಕೊನ್ ಸೆಟ್ಗಳ ಸ್ಯಾಂಪಲ್ಸ್

ಜಿರ್ಕೊನ್ ಕಲರ್‌ಫುಲ್ ಸ್ಟೋನ್ಸ್ ಚೋಕರ್ಸ್, ಜೆಮ್ಸ್ , ಜಿರ್ಕೊನ್ ಪರ್ಲ್, ಸಿಲ್ವರ್ ಗೋಲ್ಡ್ ಪಾಲಿಶ್‌ನ ಜಿರ್ಕೊನ್ ಸೆಟ್‌ಗಳು ಹಾಗೂ ಸಿಂಪಲ್ ಲುಕ್ ನೀಡುವ ಚೈನ್ ಸ್ಟೈಲ್ ನೆಕ್ಲೇಸ್ ಹಾಗೂ ಸ್ಟಡ್ಸ್, ಎಮರಾಲ್ಡ್, ರೂಬಿ ಜಿರ್ಕೊನ್ ಸೆಟ್‌ಗಳು ಯುವತಿಯರಿಗೆ ಪ್ರಿಯವಾಗಿವೆ ಎನ್ನುತ್ತಾರೆ ಮಾರಾಟಗಾರರಾದ ಜಿಯಾ. ಇವುಗಳೊಂದಿಗೆ ಕ್ಯೂಬಿಕ್ಸ್, ಜೆಮ್, ಟೀ ಡ್ರಾಪ್, ರೊಡಿಯಂ ಪ್ಲೇಟೆಡ್, ಗೋಲ್ಡ್ ಪ್ಲೇಟೆಡ್, ಚೋಕರ್ ಸ್ಟೈಲ್, ಕಾಪರ್ ಅಲೋಯ್ ಶೈಲಿಯ ಸೆಟ್‌ಗಳು ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಆಕರ್ಷಿಸಿವೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಸೆ.17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಜಿರ್ಕೊನ್ ಜ್ಯುವೆಲರಿ ಪ್ರಿಯರು ಅರಿಯಬೇಕಾಗಿದ್ದು

ಸೀರೆಗೆ ಆದಷ್ಟೂ ಮ್ಯಾಚಿಂಗ್ ಮಾಡಿ.
ಗೋಲ್ಡನ್ ಅಥವಾ ಸಿಲ್ವರ್ ಜ್ಯುವೆಲರಿ ಸೆಟ್ಗೆ ತಕ್ಕಂತೆ ಸಿಂಗರಿಸಿಕೊಳ್ಳಿ. • ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಡಿಸೈನ್ ಚೂಸ್ ಮಾಡಿ.
ನೆಕ್ಲೈನ್‌ಗೆ ಡಿಸೈನ್‌ಗೆ ತಕ್ಕಂತೆ ಆಯ್ಕೆ ಮಾಡಿ.
ಸಿಂಪಲ್ ಡಿಸೈನ್ನವನ್ನು ಸೀರೆ ಹೊರತುಪಡಿಸಿಯೂ ಎಲ್ಲಾ ಬಗೆಯ ಔಟ್‌ಫಿಟ್‌ಗೂ ಧರಿಸಬಹುದು.

(ಲೇಖಕಿ, ಫ್ಯಾಷನ್ ಪತ್ರಕರ್ತೆ)

Leave a Reply

Your email address will not be published. Required fields are marked *