Thursday, 19th September 2024

Neeraj Chopra: ನೀರಜ್‌ ಚೋಪ್ರಾ ಬಳಿ ಫೋನ್‌ ನಂಬರ್‌ ಕೇಳಿದ ವಿದೇಶಿ ಯುವತಿ; ವಿಡಿಯೊ ವೈರಲ್‌

Neeraj Chopra

ನವದೆಹಲಿ: ಭಾರತದ ತಾರಾ ಕ್ರೀಡಾಪಟು, ಅವಳಿ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್‌ ಚೋಪ್ರಾ(Neeraj Chopra) ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಇವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಶನಿವಾರ ನಡೆದಿದ್ದ ಈ ಋತುವಿನ ಕೊನೆಯ ಡೈಮಂಡ್‌ ಲೀಗ್‌ ಫೈನಲ್ಸ್‌ ಸ್ಪರ್ಧೆಯಲ್ಲಿ ಕೇವಲ 1 ಸೆಂ.ಮೀ. ಅಂತರದಲ್ಲಿ ನೀರಜ್‌ಗೆ ಚಾಂಪಿಯನ್‌ಶಿಪ್ ಕೈತಪ್ಪಿತು. ಟೂರ್ನಿ ಮುಕ್ತಾಯದ ಬಳಿಕ ನೆರದಿದ್ದ ಅಭಿಮಾನಿಗಳು ನೀರಜ್‌ ಕಂಡು ಅವರ ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದಾರೆ. ಈ ವೇಳೆ ಸುಂದರ ಯುವತಿಯೊಬ್ಬಳು ನೀರಜ್‌ ಬಳಿ ಫೋನ್‌ ನಂಬರ್‌ ಕೇಳಿದ್ದಾರೆ. ಮತ್ತೋರ್ವ ಯುವತಿ ಐ ಲವ್‌ ಯೂ ನೀರಜ್‌ ಎಂದಿದ್ದಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(video goes viral) ಆಗಿದೆ.

ನೀರಜ್‌ ಅವರು ಸ್ಪರ್ಧೆ ಮುಗಿಸಿ ತಮ್ಮ ಕೊಠಡಿಯತ್ತ ತೆರಳುತ್ತಿದ್ದ ವೇಳೆ ನೆರದಿದ್ದ ಅಭಿಮಾನಿಗಳು ನೀರಜ್‌ ಬಳಿ ಫೋಟೊ ತೆಗೆಸಿಕೊಂಡಿದ್ದಾರೆ. ಕೆಲವರು ಆಟೋಗ್ರಾಫ್‌ ಪಡೆದುಕೊಂಡರು. ನೀರಜ್‌ ಅಭಿಮಾನಿಗಳ ಜತೆ ಅತ್ಯಂತ ಸಂಯಮದಿಂದ ಮತ್ತು ತಾಳ್ಮೆಯಿಂದ ವರ್ತಿಸಿದರು. ಇದೇ ವೇಳೆ ಯುವತಿಯೊಬ್ಬಳು ನೀರಜ್‌ ನಿಮ್ಮ ಫೋನ್‌ ನಂಬರ್‌ ಕೊಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ವಿಡಿಯೊ ವೈರಲ್‌ ಆಗಿದೆ. ಗಾಯದ ನಡುವೆಯೂ ಸ್ಪರ್ಧಿಸಿ ನೀರಜ್‌ 2ನೇ ಸ್ಥಾನ ಪಡೆದಿದ್ದರು. ನೀರಜ್​ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಈ ಬಾರಿಯೂ ಬೆಳ್ಳಿಗೆ ತೃಪ್ತಿಪಟ್ಟರು.

ಇದನ್ನೂ ಓದಿ Manu Bhaker: ನೀರಜ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮನು ಭಾಕರ್‌; ಪ್ರೇಮಾಂಕುರ ಖಚಿತ ಎಂದ ನೆಟ್ಟಿಗರು

ಪಂದ್ಯದ ಬಳಿಕ ನೀರಜ್‌ ತಮ್ಮ ‘ಎಕ್ಸ್‌’(ಟ್ವೀಟರ್‌) ಖಾತೆಯಲ್ಲಿ ಗಾಯದ ವಿಷಯ ಬಹಿರಂಗಪಡಿಸಿದ್ದರು. ಅಭ್ಯಾಸದ ವೇಳೆ ಎಡಗೈ ಮುರಿತಕ್ಕೊಳಗಾಗಿದ್ದೆ. ತೀವ್ರ ನೋವಿನ ನಡುವೆಯೇ ಸ್ಪರ್ಧಿಸಿದೆ. ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ ಎಂದು ನೀರಜ್‌ ಕೈ ಮುರಿದಿರುವುದನ್ನು ತೋರಿಸುತ್ತಿರುವ ಎಕ್ಸ್‌-ರೇ ಸಮೇತ ಟ್ವೀಟ್‌ ಮಾಡಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯ ಬಳಿಕ ನೀರಜ್‌ ಡೈಮಂಡ್‌ ಲೀಗ್‌ ಆಡಲು ತೆರಳಿದ್ದರು. ಹೀಗಾಗಿ ಭಾರತಕ್ಕೆ ಮರಳಿರಲಿಲ್ಲ. ಇನ್ನೆರಡು ದಿನಗಳಲ್ಲಿ ತವರಿಗೆ ಆಗಮಿಸುವ ಸಾಧ್ಯತೆ ಇದೆ. ಭಾರತಕ್ಕೆ ಬಂದ ಬಳಿಕ ತಮ್ಮ ತೊಡೆ ಸಂದು ಮತ್ತು ಎಡಗೈ ಮುರಿತಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ನೀರಜ್‌ ಅವರ ಬ್ರಾಂಡ್ ಮೌಲ್ಯ ಭಾರೀ ಏರಿಕೆ ಕಂಡಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಹಣಕಾಸು ಸಲಹಾ ಸಂಸ್ಥೆ ಕ್ರೋಲ್‌ನ ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್​ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ.