Friday, 20th September 2024

Kalaburagi_incident: ಸಿದ್ದ ಸಿರಿ ಇಥೆನಾಲ್ ಕಾರ್ಖಾನೆ ಮರು ಸ್ಥಾಪನೆಗೆ ಆಗ್ರಹ, ರೈತ ಮುಖಂಡರ ಬಂಧನ

ಬಿಜಾಪೂರ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಒಡೆತನದ ಚಿಂಚೋಳಿ ಸಿದ್ದಸಿರಿ ಇಥೆನಾಲ್ ಸಕ್ಕರೆ ಕಾರ್ಖಾನೆ ಮರು ಸ್ಥಾಪನೆಗಾಗಿ ಚಿಂಚೋಳಿ ಕಬ್ಬು ಬೆಳಗಾರರ ರೈತ ಮುಖಂಡರು ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸಲು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಲು ಹೊರಟ ಕಬ್ಬು ಬೆಳೆಗಾರರನ್ನು ತೆರಳದಂತೆ ಪೊಲೀಸರು ತಡೆ ಒಡ್ಡಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸಮ್ಮುಖದಲ್ಲಿ ತಹಸೀಲ್ ಕಾರ್ಯಾಲಯದಲ್ಲಿ ಬೆಳಿಗ್ಗೆ 8.45 ರಿಂದ ಬಂಧನದಲ್ಲಿ ಇಡಲಾಯಿತು.

ಪರಿಸರ ಮಾಲಿನ್ಯದ ಕಾರಣ ಒಡ್ಡಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಇಥೆನಾಲ್ ಕಾರ್ಖಾನೆಯ ಕಾರ್ಯ ಚಟುವಟಿಕೆಗಳು ನಡಸದಂತೆ ಬಂದ್ ಮಾಡಲಾಗಿತ್ತು. ಇದರ ವಿರುದ್ದ ರೈತರ ಆಕ್ರೋಶಗೊಂಡು ತಿಂಗಳ ಹಿಂದೆ ಚಿಂಚೋಳಿ ಬಂದ್ ಮಾಡಿ ಧರಣಿ ನಡೆಸಲಾಗಿತ್ತು. ಈಗ ಕಲಬುರಗಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಂದ ವಿಷಯ ತಿಳಿದು ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು ಮನವಿ ಸಲ್ಲಿಸಲ್ಲು ತೆರೆಳುತಿದ್ದ ಮುಖಂಡರನ್ನು ಧರಣಿ ಮಾಡುವ ಶಂಕೆಯಿಂದ ಅವರನ್ನು ಪೊಲೀಸರು ಇಲ್ಲಿನ ತಹಸೀಲ್ ಕಾರ್ಯಲಯದಲ್ಲಿ ಬಂಧನದಲ್ಲಿ ಇಡಲಾಯಿತು.

ಅಖಿಲ ಭಾರತ ರೈತ ಹಿತರಕ್ಷೆ ಸಂಘದ ಪ್ರಧಾನ ಕಾರ್ಯದರ್ಶಿ ನಂದಿಕುಮಾರ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಂಟೆ, ಕೆ. ಎಂ. ಬಾರಿ, ಸೂರ್ಯಕಾಂತ ಹುಲಿ, ಶ್ರೀಮಂತ ಕಟ್ಟಿಮನಿ, ಚಿತ್ರಶೇಖರ ಪಾಟೀಲ್, ಜನಾರ್ಧನ್ ಕುಲಕರ್ಣಿ ಸೇರಿ ಹಲವರನ್ನು ಬಂಧನದಲ್ಲಿಡಲಾಯಿತು.

ಕಾನೂನು ಸುವ್ಯವಸ್ಥೆ ಹಿನ್ನೆಲೆ: ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವುದರ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಚಿಂಚೋಳಿಯಿಂದ ಕಲಬುರಗಿ ಕಡೆ ಕಬ್ಬು ಬೆಳೆಗಾರರು ಧರಣಿ ಮಾಡಲು ತೆರಳದಂತೆ ತಡೆಯಲಾಗಿದೆ. ಜಿಲ್ಲೆಯಿಂದ ಏಂಟು ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಅದರಂತೆ ಚಿಂಚೋಳಿಯಿಂದ ನಂದಿಕುಮಾರ ಪಾಟೀಲ್ ನಂಪಾ ಹಾಗೂ ಜನಾರ್ಧನ ಕುಲಕರ್ಣಿ ಇಬ್ಬರು ರೈತ ಮುಖಡರಿಗೆ ಪೊಲೀಸ್ ಪೇದೆ ಜೊತೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಡಿವೈ ಎಸ್ ಪಿ ಸಂಗಮ ನಾಥ ಹಿರೇಮಠ ತಿಳಿಸಿದರು.

ಈ ಸಂಧರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ವೈಜ್ಞ ನಿಕ ಅಧಿಕಾರಿ ಶಿವರಾಜ, ಸಾಯಕ ಪರಿಸರ ಮಾಲಿನ್ಯ ಅಧಿಕಾರಿ ಸುಧಾರಾಣಿ, ರಾಕೇಶ, ಚಿಂಚೋಳಿ ಪಿ ಎಸ್ ಐ ಗಂಗಮ್ಮ ಜಿನಿಕೇರಿ, ಮಿರಿಯಾಣ ಪಿ ಎಸ್ ಐ ಮಾಡಿವಾಳಪ್ಪ ಭಾಗೋಡಿ ಸೇರಿ ಇತರರು ಇದ್ದರು.

ಬಂಧನದಲ್ಲಿದ್ದ ಯಾರನ್ನು ಹೊರಗಡೆ ಬಿಡದಂತೆ ಪೇದೆಗಳನ್ನು ಹೊರಗಡೆ ನಿಯೋಜಿಸಲಾಗಿತ್ತು. ಎಲ್ಲರು ವಯಸ್ಸಿನಿಂದ ಹಿರಿಯರಾಗಿದ್ದವರು ಆಗಿದ್ದರು, ಇದರಲ್ಲಿ ಕೆಲವರಿಗೆ ಸಕ್ಕರೆ ಕಾಯಿಲೆ ಉಳ್ಳವರು ಇದ್ದವರಾಗಿದರು ಎಂದು ಎನ್ನಲಾಗುತ್ತಿದೆ.

ರೈತ ಮುಖಂಡ ನಂದಿಕುಮಾರ ಪಾಟೀಲ್ ನಂಪಾ ಹಾಗೂ ಜನಾರ್ಧನ್ ಕುಲಕರ್ಣಿ ಅವರನ್ನು ಪೇದೆಯೊಂದಿಗೆ ಖಾಸಗಿ ವಾಹನದಲ್ಲಿ ಕಲಬುರಗಿಗೆ ಕಳುಹಿಸಿಕೊಡಲಾಯಿತು. ಕಲಬುರಗಿಗೆ ಹೋಗುವ ಮುಖ್ಯ ರಸ್ತೆ ಸೇರಿ ಹೋಗುವ ಎಲ್ಲಾ ಕೂಡು ರಸ್ತೆಗಳಲ್ಲಿ ಪೊಲೀಸ್ ಬಿಡು ಬಿಡಲಾಗಿದೆ.

ಇದನ್ನೂ ಓದಿ: ಯತ್ನಾಳ್‌ಗೆ ಶೀಘ್ರ ಗೇಟ್‌ಪಾಸ್ ನೀಡಲಾಗುವುದು: ಅರುಣ್ ಸಿಂಗ್