ರಾಯ್‌ಪುರ: ಇಂದು ಪ್ರಧಾನಿ ನರೇಂದ್ರ ಮೋದಿವರ 74ನೇ ಹುಟ್ಟುಹಬ್ಬ(PM Modi Birthday)ದ ಹಿನ್ನೆಲೆ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ಇದರ ಜತೆ ಜತೆಗೆ ಬಿಜೆಪಿಯ ಮಿತ್ರ ಪಕ್ಷಗಳ ನಾಯಕರೂ ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಹೀಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(H.D. Kumaraswamy) ಕೂಡ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ನೆಚ್ಚಿನ ಪ್ರಧಾನಿಗೆ ಶುಭಕೋರಿದ್ದಾರೆ.
ಛತ್ತೀಸ್‌ಗಢದ ಬಿಲಾಯ್ ಉಕ್ಕು ಕಾರ್ಖಾನೆಯಲ್ಲಿ ಬಳಿ ಕಾರ್ಮಿಕರು ಮತ್ತು ಅಧಿಕಾರಿಗಳೊಂದಿಗೆ ಎಚ್‌ಡಿಕೆ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡಿರುವ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಚ್ಛತೆಯನ್ನು ಪ್ರತಿಪಾದಿಸಿದವರು. ಬಾಪೂಜಿ ಕನಸು ನನಸು ಮಾಡಿದವರು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿಯವರು. ಸ್ವಚ್ಚ ಭಾರತ ಎನ್ನುವುದು ಬರೀ ಅಭಿಯಾನವಷ್ಟೇ ಅಲ್ಲ, ಅದನ್ನು ನಿತ್ಯ ಆಚರಣೆಯಾಗಿ ಪರಿವರ್ತಿಸಿದ್ದು ನಮ್ಮ ಪ್ರಧಾನಿಗಳು ಎನ್ನುವುದು ನನ್ನ ಅಭಿಮತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾನ್ಯ ಪ್ರಧಾನಿಗಳ ಜನ್ಮದಿನವಾದ ಇಂದು ನಾನು ಬಿಲಾಯ್ ಉಕ್ಕು ಕಾರ್ಖಾನೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡೆ. ಕಾರ್ಖಾನೆಯ ಕಾರ್ಮಿಕರು, ಅಧಿಕಾರಿಗಳು ನನ್ನೊಂದಿಗೆ ಭಾಗಿಯಾದರು. ಮತ್ತೊಮ್ಮೆ ಪ್ರಧಾನಿಗಳಿಗೆ ಹೃದಯಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ ಎಂದು ಶುಭ ಕೋರಿದ್ದಾರೆ.
ಭಾರತದ ಸ್ವಚ್ಛತೆಯನ್ನು ಪ್ರತಿಪಾದಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು. ಬಾಪೂಜಿ ಕನಸು ನನಸು ಮಾಡಿದವರು ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರು. ಸ್ವಚ್ಚ ಭಾರತ ಎನ್ನುವುದು ಬರೀ ಅಭಿಯಾನವಷ್ಟೇ ಅಲ್ಲ, ಅದನ್ನು ನಿತ್ಯ ಆಚರಣೆಯಾಗಿ ಪರಿವರ್ತಿಸಿದ್ದು ನಮ್ಮ ಪ್ರಧಾನಿಗಳು ಎನ್ನುವುದು ನನ್ನ ಅಭಿಮತ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 17, 2024
ಮಾನ್ಯ ಪ್ರಧಾನಿಗಳ… pic.twitter.com/iTySt6Gloc
ಇಂದು (ಸೆಪ್ಟೆಂಬರ್ 17) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. 74ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪರಿ ಮುರ್ಮು ಸೇರಿದಂತೆ ದೇಶ-ವಿದೇಶಗಳ ಗಣ್ಯರು, ವಿವಿಧ ಪಕ್ಷಗಳ ಮುಖಂಡರು ಶುಭ ಹಾರೈಸಿದ್ದಾರೆ.
ಇಂದು ಮಧ್ಯಾಹ್ನ ಒಡಿಶಾದ ಭುವನೇಶ್ವರಕ್ಕೆ ಪ್ರಯಾಣಿಸಲಿರುವ ಮೋದಿ ಅವರು ಅಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾದ ‘ಸುಭದ್ರಾ’ಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಒಡಿಶಾದ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ವಾರ್ಷಿಕ 10,000 ರೂಪಾಯಿ ದೊರೆಯಲಿದೆ. ಜತೆಗೆ 26 ಲಕ್ಷ ಪಿಎಂ ಆವಾಸ್ ಯೋಜನೆ ಮನೆಗಳನ್ನು ಉದ್ಘಾಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ, ವಿದೇಶಕ್ಕೆ ತೆರಳುವ ಅಗತ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ