ಬೆಂಗಳೂರು: 2024ರ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ (Asian Champions Trophy) ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಭಾರತ 2011ರಿಂದ ಆರಂಭಗೊಂಡ ಈ ಟ್ರೋಫಿಯಲ್ಲಿ 5ನೇ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಪರ ಜುಗ್ರಾಜ್ ಬಾರಿಸಿ ಏಕೈಕ ಗೋಲ್ ಭಾರತಕ್ಕೆ ಜಯ ತಂದುಕೊಟ್ಟಿತು. ಆದರೆ ಇದೇ ಮೊದಲ ಬಾರಿಗೆ ಫೈನಲ್‌ಗೇರಿ ಪ್ರಶಸ್ತಿ ಗೆಲ್ಲುವ ಆಸೆಯಲ್ಲಿದ್ದ ಚೀನಾ ತಂಡಕ್ಕೆ ನಿರಾಸೆ ಎದುರಾಗಿದೆ.
ಪಂದ್ಯದ ಮೊದಲ ಮೂರು ಕ್ವಾರ್ಟರ್ ಗೋಲ್ ರಹಿತವಾಗಿ ಮುಂದುವರಿಯಿತು. ಜಿದ್ದಾಜಿದ್ದಿನಿಂದ ನಡೆದ ಸ್ಪರ್ಧೆಯಲ್ಲಿ ಯಾರು ಗೆಲ್ಲುವರೆಂಬ ಕುತೂಹಲ ಹೆಚ್ಚಾಯಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲ್ ಹೊಡೆಯಲು ವಿಫಲಗೊಂಡರು. ಆದರೆ, ಜುಗ್ರಾಜ್ ಸಿಂಗ್ ಭಾರತಕ್ಕೆ ಗೆಲುವು ತಂದುಕೊಟ್ಟರು. ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಅವರು ಗೋಲ್ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅತ್ತ ಚೀನಾ 4 ಪೆನಾಲ್ಟಿ ಕಾರ್ನರ್‌ಗಳ ಅವಕಾಶ ಪಡೆದ ಹೊರತಾಗಿಯೂ ಗೋಲು ದಾಖಲಿಸಲು ವಿಫಲಗೊಂಡು ಸೋಲೊಪ್ಪಿಕೊಂಡಿತು.
.@KrishanBPathak pulling out all the stops ✋
— Sony Sports Network (@SonySportsNetwk) September 17, 2024
The #ACT2024 Final hangs in the balance, with neither team giving an inch 🔥 #SonySportsNetwork #HockeyIndia #INDvsCHN | @TheHockeyIndia @asia_hockey @FIH_Hockey pic.twitter.com/f1YwBVPj0P
ಯಾವ ತಂಡವು ಹೆಚ್ಚು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ?
ಐದು ಪ್ರಶಸ್ತಿಗಳೊಂದಿಗೆ, ಭಾರತವು ಅತ್ಯಥದಿಕ ಏಷ್ಯನ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಪಾಕಿಸ್ತಾನವು ಮೂರು ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಭಾರತದೊಂದಿಗೆ ಹಂಚಿಕೊಂಡ ಒಂದು ಪ್ರಶಸ್ತಿಯೂ ಸೇರಿಕೊಂಡಿದೆ.
So close to a breakthrough 🤯
— Sony Sports Network (@SonySportsNetwk) September 17, 2024
Captain @13harmanpreet was inches away from giving #TeamIndia the lead 🫣 🤏#SonySportsNetwork #ACT2024 #HockeyIndia #INDvsCHN | @thehockeyindia pic.twitter.com/3Kd4arO8yk
ಏಷ್ಯನ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ
ಏಷ್ಯನ್ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯನ್ನು 2011ರಲ್ಲಿ ಆಡಲಾಯಿತು. ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಉದ್ಘಾಟನಾ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ರಾಜ್ಪಾಲ್ ಸಿಂಗ್ ನಾಯಕತ್ವದಲ್ಲಿ ಭಾರತ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿತು. 2011ರ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಭಾರತ ಫೈನಲ್ ಪ್ರವೇಶಿಸಿತ್ತು.
ಪಾಕಿಸ್ತಾನವು 2012ರಲ್ಲಿ ಮುಂದಿನ ಆವೃತ್ತಿಯನ್ನು ಗೆದ್ದಿತು. ಹಾಲಿ ಚಾಂಪಿಯನ್ ಭಾರತವನ್ನು ಸೋಲಿಸಿತು. 2021ರಲ್ಲಿ ದಕ್ಷಿಣ ಕೊರಿಯಾ ತಂಡ ಗೆಲ್ಲುವ ತನಕ ಭಾರತ ಹಾಗೂ ಪಾಕಿಸ್ತಾನವೇ ಇದರಲ್ಲಿ ಪಾರಮ್ಯ ಮೆರೆದಿತ್ತು.