ಗುಬ್ಬಿ: ಪ್ರೀತಿ ಮತ್ತು ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆಂಬ ಸಂದೇಶವನ್ನು ಸಾರುವ ಮೂಲಕ ಪಾನಕ ಹಂಚಿ ಅರ್ಥಪೂರಕವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದಿಂದ ತಾಲೂಕ್ ಕಚೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಪಾನಕ ಹಂಚಿ ತಮ್ಮ ಬಾಂಧವ್ಯ ವ್ಯಕ್ತಪಡಿಸಿ.
ಮುಖಂಡ ಸಲ್ಮಾನ್ ಖಾನ್ ಮಾತನಾಡಿ, ನಾವು ಈ ವರ್ಷ ಈದ್ ಮಿಲಾದ್ ಒಂದು ರೀತಿಯ ವಿಶೇಷವಾಗಿ ಪ್ರೀತಿ ಸೌಹಾರ್ದಯುತವಾಗಿ ಆಚರಣೆ ಮಾಡಬೇಕೆಂದು ಪಾನಕ ವಿತರಿಸುತ್ತಿದ್ದೇವೆ. ಇದೇ ರೀತಿ ಪ್ರತಿ ವರ್ಷವೂ ಬಹಳ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಲಾಗುವುದು. ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ಭಾರತ್ ಭೀಮ್ ಸೇನೆಯ ಯುವ ಘಟಕದ ಸಾದತ್ ಮಾತನಾಡಿ ನಾವೆಲ್ಲ ಒಂದೇ ಕುಟುಂಬದ ಅಣ್ಣ ತಮ್ಮಂದಿ ರಂತೆ ಇದ್ದೇವೆ. ದೇವನೊಬ್ಬ ನಾಮ ಹಲವು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಪ್ರೀತಿ ಮತ್ತು ಖುಷಿ ಹಂಚಲು ನಾವು ಪ್ರಯತ್ನ ಮಾಡುತಿದ್ದೇವೆ ಎಂದರು.
ಇದೆ ಸಂದರ್ಭದಲ್ಲಿ ನಂಜೇಶ್ ಗೌಡ, ಭಾರತ್ ಭೀಮ್ ಸೇನೆಯ ಸಚಿನ್, ಮಧು, ಇಮ್ರಾನ್ ಪಾಷ ಮತ್ತಿತರರು ಇದ್ದರು.