Sunday, 24th November 2024

ಹಿರೇಬೇವನೂರ ಗ್ರಾಮದಲ್ಲಿ ಸೆ.19ರಂದು ಪಿ.ಕೆಪಿ.ಎಸ್ ಸರ್ವಸಾಧಾರಣ ಸಭೆ

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ೨೦೨೩-೨೪ನೇ ಸಾಲಿನ ೬೫ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆಯು ಸಂಘದ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಇವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಸಂಜೆ ೪ ಗಂಟೆಗೆ ಗ್ರಾಮದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯ ದಲ್ಲಿ ಕರೆಯಲಾಗಿದೆ.

ಸಭೆಯಲ್ಲಿ 2024ನೇಸಾಲಿನ ಅಢಾವೆ ಪತ್ರಿಕೆ, ಜಮಾ, ಖರ್ಚು ಲಾಭ- ಹಾನಿ ಹಾಗೂ ಇನೀತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಸಭೆಗೆ ಸಂಘದ ಆಡಳಿತ ಮಂಡಳಿಯ ಸರ್ವಸದಸ್ಯರು, ಗ್ರಾಮದ ಗಣ್ಯರು ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಜಿ ಚಪಳಗಾಂವ ಪ್ರಕಟಣೆಗೆ ತಿಳಿಸಿದ್ದಾರೆ.