Thursday, 19th September 2024

PM Modi Birthday: ಪ್ರಧಾನಿ ಮೋದಿಗೆ ಪ್ರಿಯವಾದ ಖಾದ್ಯಗಳು ಯಾವುವು ಗೊತ್ತೆ?

PM Modi Birthday

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ತಮ್ಮ 74ನೇ ಹುಟ್ಟುಹಬ್ಬವನ್ನು (PM Modi Birthday) ಆಚರಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ನಿರಂತರ ಕ್ರಿಯಾಶೀಲರಾಗಿರುವ ಅವರಿಗೆ ಸಸ್ಯಾಹಾರದ (vegetarian food) ಮೇಲಿನ ಪ್ರೀತಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಅವರಿಗೆ ಹೆಚ್ಚು ಪ್ರಿಯವಾದ ಖಾದ್ಯದ ಕುರಿತು ಇಲ್ಲಿದೆ ಮಾಹಿತಿ.

ನಿರಂತರ ಕೆಲಸದಲ್ಲಿ ತೊಡಗಿಕೊಂಡಿರುವ ನರೇಂದ್ರ ಮೋದಿ ಅವರು ತಮ್ಮ ಕೆಲಸದ ನೀತಿ ಮತ್ತು ಶಿಸ್ತಿನ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಆರೋಗ್ಯದ ಗುಟ್ಟು ಸರಳ ಮತ್ತು ಪರಿಣಾಮಕಾರಿ ಆಹಾರ ಪದ್ಧತಿ. ಯೋಗ ಮತ್ತು ಧ್ಯಾನದ ಮೂಲಕ ದಿನಚರಿಯನ್ನು ಪ್ರಾರಂಭಿಸುವ ಅವರು ಸಮತೋಲಿತ ಆಹಾರವನ್ನು ಸೇವಿಸುತ್ತಾರೆ.

PM Modi Birthday

2021ರ ಏಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಆಹಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ಅವರು ಕೆಲವು ತರಕಾರಿಗಳ ಎಲೆಗಳನ್ನು ತಿನ್ನುವ ಪ್ರಯೋಜನಗಳ ಬಗ್ಗೆ ಪ್ರಸ್ತಾಪಿಸಿದ್ದರು.
ಬೆಳಗಿನ ಉಪಾಹಾರಕ್ಕಾಗಿ ಮೋದಿ ಅವರು ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ಉಪಾಹಾರ ಮುಗಿಸುತ್ತಾರೆ. ಭಾರತೀಯ ಆಹಾರಕ್ಕೆ ಆದ್ಯತೆ ನೀಡುವ ಅವರು ಚಪಾತಿ, ಬೇಳೆ, ಪಲ್ಯ, ಸಲಾಡ್ ಅನ್ನು ಸೇವಿಸುತ್ತಾರೆ.

ಪೌಷ್ಟಿಕ ತಜ್ಞರಾದ ರುಜುತಾ ದಿವೇಕರ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಅರಿಶಿನವನ್ನು ಆಹಾರದಲ್ಲಿ ಸೇವಿಸಬೇಕು ಎಂದು ಹೇಳಿದ್ದಾರೆ.
2019ರ ಏಪ್ರಿಲ್ ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಮಾವಿನಹಣ್ಣುಗಳನ್ನು ಇಷ್ಟಪಡುವುದಾಗಿ ಹೇಳಿದ್ದರು.

PM Modi Birthday

2020ರ ಫೆಬ್ರವರಿಯಲ್ಲಿ ದೆಹಲಿಯ ಹುನಾರ್ ಹಾತ್‌ಗೆ ಹೋಗಿದ್ದ ಅವರು ಬಿಹಾರಿ ಖಾದ್ಯ ಲಿಟ್ಟಿ ಚೋಖಾವನ್ನು ಸವಿದಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಅವರು, ನಾನು ಊಟಕ್ಕೆ ಅತ್ಯುತ್ತಮವಾದ ಲಿಟ್ಟಿ ಚೋಖಾವನ್ನು ಸವಿದಿದ್ದೇನೆ ಎಂದು ಹೇಳಿದ್ದರು.

PM Modi Birthday: ಪ್ರಧಾನಿ ಮೋದಿ ಬರ್ತ್‌ ಡೇಗೆ HDK ವಿಶ್‌; ಸ್ವಚ್ಛತಾ ಕಾರ್ಯದಲ್ಲಿ ಭಾಗಿ

ಅಲ್ಲದೇ ಹಲವು ಬಾರಿ ಖಿಚಡಿ ಮೇಲಿನ ತಮ್ಮ ಪ್ರೀತಿಯನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಮೋದಿಯವರಿಗೆ ನುಗ್ಗೆ ಸೊಪ್ಪಿನ ಪರೋಟ ಕೂಡ ಇಷ್ಟ ಎನ್ನಲಾಗಿದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಶೀತ, ಜ್ವರ ಮುಂತಾದ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.