ಬೈರುತ್: ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್ (ಮೊಬೈಲ್ ಫೋನ್ ಗಳಿಗಿಂತ ಮುಂಚೆ ಇದ್ದ ಸಂವಹನ ಉಪಕರಣ) ದಾಳಿಯಲ್ಲಿ (Hezbollah Attack) ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, 2,800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ (Lebanon Pager Explosions). ಈ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೆಜ್ಬುಲ್ಲಾ ಆರೋಪಿಸಿದೆ. ಇಸ್ರೇಲ್‌ನ ಮೊಸ್ಸಾದ್ ಗೂಢಚಾರ ಸಂಸ್ಥೆ (Mossad spy agency) ತಿಂಗಳುಗಳ ಮೊದಲು ಹೆಜ್ಬುಲ್ಲಾ ಆರ್ಡರ್ ನೀಡಿದ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ 3 ಗ್ರಾಂ ಸ್ಫೋಟಕಗಳನ್ನು ತುಂಬಿಸಿಟ್ಟಿತ್ತು ಎಂದು ಹೇಳಿದೆ.
ತೈವಾನ್‌ನ ಗೋಲ್ಡ್ ಅಪೊಲೊ (Gold Apollo) ಕಂಪನಿಗೆ ಹಿಜ್ಬುಲ್ಲಾ ಪೇಜರ್ ಪೂರೈಸುವಂತೆ ಆರ್ಡರ್ ನೀಡಿತ್ತು. ಈ ಪೇಜರ್‌ಗಳು ಲೆಬನಾನ್‌ಗೆ ತಲುಪುವ ಮುನ್ನ ಅದಕ್ಕೆ ಸ್ಫೋಟಕಗಳನ್ನು ತುಂಬಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸ್ಫೋಟಗೊಂಡ ಪೇಜರ್‌ಗಳ ಪೈಕಿ ಬಹುತೇಕ AP924 ಮಾಡೆಲ್ ಆಗಿದ್ದು, ಇವನ್ನು ಗೋಲ್ಡ್ ಅಪೊಲೊದ ಇತರ 3 ಮಾಡೆಲ್‌ಗಳೊಂದಿಗೆ ಸಾಗಿಸಲಾಗಿತ್ತು. ಪೇಜರ್‌ಗಳನ್ನು ಲೆಬನಾನ್ ಮತ್ತು ಸಿರಿಯಾದ ಹಲವಾರು ಜನರಿಗೆ ವಿತರಿಸಿದ ನಂತರ ರೇಡಿಯೊ ಆವರ್ತನದೊಂದಿಗೆ ಸ್ಫೋಟಿಸಲಾಗಿದೆ.
REPORT: Israel apparently intercepted the pagers from Taiwan that detonated in the pockets of thousands of Hezbollah fighters before they reached Lebanon.
— Collin Rugg (@CollinRugg) September 17, 2024
According to the New York Times, Israel tampered with the devices that Hezbollah ordered.
They reportedly placed two… pic.twitter.com/hE1DmFhxDL
ಲೆಬನಾನ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 18) ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ರ ಸುಮಾರಿಗೆ (ಭಾರತೀಯ ಕಾಲಮಾನ ಸಂಜೆ 6 ಗಂಟೆ) ಸ್ಫೋಟ ಸಂಭವಿಸಿದೆ. ಇನ್ನು ಸಿರಿಯಾದಲ್ಲಿಯೂ ಇದೇ ಮಾದರಿಯ ಸ್ಫೋಟ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಸೆ. 17ರ ಸಂಜೆ 6ರ ಸುಮಾರಿಗೆ ಸಿರಿಯಾದಲ್ಲಿ ಈ ಸ್ಫೋಟಗಳು ನಡೆದಿವೆ. ಹೆಜ್ಬುಲ್ಲಾ ಸಂಘಟನೆಯ 14 ಮಂದಿಯ ಪೇಜರ್ ಇದೇ ರೀತಿ ಏಕಾಏಕಿ ಸ್ಫೋಟಗೊಂಡು 14 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಹಿಜ್ಬುಲ್ಲಾ ವಾದವೇನು?
ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ ಆದರೆ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ವಿವರ ತಿಳಿದಿಲ್ಲ ಎಂದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸುವುದಾಗಿ ಲೆಬನಾನ್ ಘೋಷಿಸಿದೆ. ಇಸ್ರೇಲ್ ಇದುವರೆಗೆ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೆಬನಾನ್‌ನ ಈ ಪೇಜರ್ ಸ್ಫೋಟದಲ್ಲಿ ತಾನು ಭಾಗಿಯಾಗಿಲ್ಲ ಎಂದು ಅಮೆರಿಕ ಮಂಗಳವಾರ ಸ್ಪಷ್ಟಪಡಿಸಿದೆ. ಈ ಘಟನೆಯ ಬಗ್ಗೆ ಮುಂಚಿತವಾಗಿ ತಿಳಿದಿರಲಿಲ್ಲ ಎಂದೂ ತಿಳಿಸಿದೆ.
Dozens of people have been injured in Lebanon as a result of an electronic attack, Sputnik's correspondent reports
— Sputnik (@SputnikInt) September 17, 2024
Al Jazeera reports hacking and simultaneous undermining of Hezbollah's encrypted communications network pic.twitter.com/IgJBTBhM78
ʼʼಪೇಜರ್‌ಗಳ ಸ್ಫೋಟದ ಉದ್ದೇಶ ಹಿಜ್ಬುಲ್ಲಾ ನಾಯಕರು ಮತ್ತು ಸಲಹೆಗಾರರನ್ನು ಗಾಯಗೊಳಿಸುವುದಾಗಿತ್ತು. ಪೇಜರ್‌ಗಳು ಬಹುತೇಕ ಏಕಕಾಲದಲ್ಲಿ ಸ್ಫೋಟಿಸಿರುವುದು ಇದು ಸಂಘಟಿತ ದಾಳಿ ಎಂಬ ಅನುಮಾನ ಹುಟ್ಟು ಹಾಕಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಇಸ್ರೇಲ್ ಗುಪ್ತಚರ ಸಂಸ್ಥೆಗಳು ಕೈವಾಡವಿದೆʼʼ ಎಂದು ಲೆಬನಾನ್ ಅನುಮಾನ ವ್ಯಕ್ತಪಡಿಸಿದೆ.
ಇಸ್ರೇಲ್ ಗುಪ್ತಚರರು ಟ್ರ್ಯಾಕ್ ಮಾಡಬಹುದು ಎನ್ನುವ ಕಾರಣಕ್ಕೆ ಮೊಬೈಲ್ ಫೋನ್ ಅನ್ನು ಬಳಸದಂತೆ ಹಿಜ್ಬುಲ್ಲಾ ನಾಯಕರು ಸದಸ್ಯರಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಪೇಜರ್‌ಗಳಿಗೆ ಆರ್ಡರ್ ನೀಡಲಾಗಿತ್ತು ಎನ್ನಲಾಗಿದೆ. ಈ ಪೇಜರ್ ಹೊಸ ಬ್ರ್ಯಾಂಡ್ ಆಗಿದ್ದು,ಈ ಹಿಂದೆ ಬಳಸಿರಲಿಲ್ಲ ಎಂದು ಹಿಜ್ಬುಲ್ಲಾ ನಾಯಕರು ತಿಳಿಸಿದ್ದಾರೆ.
ಪೇಜರ್ ಎಂದರೇನು?
ಸೆಲ್ ಫೋನ್‌ಗಳು ಬರುವ ಮೊದಲು ಮಾಹಿತಿ ತಿಳಿಸಲು ಪೇಜರ್‌ಗಳನ್ನು ಬಳಸಲಾಗುತ್ತಿತ್ತು. ಸೆಲ್ ಫೋನ್‌ನ ಗಾತ್ರದಷ್ಟೇ ಇರುವ ಈ ಪೇಜರ್ ಮೂಲಕ ಅಗತ್ಯವಿರುವವರಿಗೆ ಸಂದೇಶ ತಲುಪಿಸಬಹುದು.
ಈ ಸುದ್ದಿಯನ್ನೂ ಓದಿ: Hezbollah Attack : ಹೆಜ್ಬುಲ್ಲಾ ಉಗ್ರ ಸಂಘಟನೆ ವಿರುದ್ಧ ‘ಪೇಜರ್’ ದಾಳಿ, 8 ಸಾವು, 2,750 ಮಂದಿಗೆ ಗಾಯ