Thursday, 19th September 2024

IND vs BAN: ಮೊದಲ ಟೆಸ್ಟ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡದ ವರದಿ ಹೀಗಿದೆ

IND vs BAN

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ(IND vs BAN) ಮತ್ತು ಭಾರತ ತಂಡಗಳ ನಡುವಣ ಮೊದಲ(IND vs BAN 1st test) ಟೆಸ್ಟ್‌ ಪಂದ್ಯ ನಾಳೆ(ಗುರುವಾರ)ಯಿಂದ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಇತ್ತಂಡಗಳ ಸಂಭಾವ್ಯ ತಂಡ, ಪಿಚ್‌ ರಿಪೋರ್ಟ್‌(Pitch Report), ಹವಾಮಾನ ವರದಿ(Weather Report), ಮುಖಾಮುಖಿ ದಾಖಲೆಯ ವಿವರ ಇಂತಿದೆ.

ಪಿಚ್‌ ರಿಪೋರ್ಟ್‌

ಚೆನ್ನೈ ಭಾರತದ ಅತೀ ಪುರಾತನ ಕ್ರಿಕೆಟ್‌ ತಾಣ. ಭಾರತಕ್ಕೆ ಟೆಸ್ಟ್‌ ಮಾನ್ಯತೆ ಲಭಿಸಿದ ಎರಡೇ ವರ್ಷದಲ್ಲಿ (1934) ಇಲ್ಲಿ ಮೊದಲ ಪಂದ್ಯ ನಡೆದಿತ್ತು. ಇದು ಸ್ಪಿನ್‌ ಸ್ನೇಹಿ ಪಿಚ್‌ ಆಗಿದೆ. ಆದರೆ ಈ ಬಾರಿ ಕೆಂಪು ಮಣ್ಣಿನ ಬೌನ್ಸಿ ಪಿಚ್‌ ನಿರ್ಮಿಸಲಾಗಿದೆ. ಆರಂಭದಲ್ಲಿ ವೇಗಿಗಳಿಗೆ ಈ ಪಿಚ್‌ ನೆರವಾದರೂ ಕೂಡ ಬಳಿಕ ಸ್ಪಿನ್‌ ಬೌಲರ್‌ಗಳಿಗೆ ನೆರವು ನೀಡಲಿದೆ ಎಂದು ಪಿಚ್‌ ಕ್ಯೂರೇಟರ್‌ ತಿಳಿಸಿದ್ದಾರೆ.

ಮುಖಾಮುಖಿ

ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಅಜೇಯ ದಾಖಲೆ ಹೊಂದಿದೆ. ಈವರೆಗಿನ 13 ಟೆಸ್ಟ್‌ಗಳಲ್ಲಿ ಭಾರತ 11 ರಲ್ಲಿ ಜಯ ಸಾಧಿಸಿದೆ. 2 ಪಂದ್ಯ ಡ್ರಾಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ. ಹಾಗಂತ ಎದುರಾಳಿಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಕಾಣುವಂತಿಲ್ಲ. ಈಗಾಗಲೇ ಬಾಂಗ್ಲಾ ತಂಡ ಪಾಕ್‌ಗೆ ಅವರದ್ದೇ ನೆಲದಲ್ಲಿ ನೀರು ಕುಡಿಸಿತ್ತು.

ಹವಾಮಾನ ವರದಿ

ಚೆನ್ನೈನಲ್ಲಿ ಬಿಸಿಲಿನ ತಾಪ ವಿಪರೀತವಾಗಿರುವ ಕಾರಣ ಆಟಗಾರರು ಅತಿಯಾಗಿ ಬಳಲುವುದು ಖಚಿತ. ದಿನವಿಡೀ ಸುಡು ಬಿಸಿಲಿನ ಉರಿ ಇರಲಿದೆ. ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ.

ಇದನ್ನೂ ಓದಿ IND vs BAN: ಚೆಪಾಕ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ ಕುಲದೀಪ್ ಯಾದವ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ),ಝಾಕಿರ್ ಹಸನ್, ಮೊಮಿನುಲ್ ಹಕ್,ಮುಶ್ಫಿಕರ್ ರಹೀಮ್, ಲಿಟ್ಟನ್ ಕುಮಾರ್ ದಾಸ್(ವಿ.ಕೀ), ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ,ಹಸನ್ ಮಹಮ್ಮದ್, ಟಸ್ಕಿನ್ ಅಹ್ಮದ್. ನಹಿದ್ ರಾಣಾ.