ಬೆಂಗಳೂರು: ಹೈಕೋರ್ಟ್ (Karnataka High Court) ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮಂಗಳವಾರ ಒಂದೇ ದಿನ 503 ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಹೆಸರಾದ ಇವರು ಮತ್ತೊಂದು ದಾಖಲೆ ಮಾಡಿದ್ದಾರೆ.
ಬೆಂಗಳೂರು ಪ್ರಧಾನ ಪೀಠದಲ್ಲಿರುವ 17ನೇ ಕೋರ್ಟ್ ಹಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರದ ಕಲಾಪದಲ್ಲಿ ಪಟ್ಟಿ ಮಾಡಲಾಗಿದ್ದ ಒಟ್ಟು 503 ಕ್ರಿಮಿನಲ್ ಹಾಗೂ ರಿಟ್ ಅರ್ಜಿಗಳ ವಿಚಾರಣೆಯನ್ನು ದಿನದ ಕಲಾಪದ ಅವಧಿ ಪೂರ್ಣಗೊಳ್ಳುವ 45 ನಿಮಿಷ ಮೊದಲೇ ಮುಕ್ತಾಯಗೊಳಿಸಿದ್ದಾರೆ. ಇವುಗಳಲ್ಲಿ 187 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 125 ಪ್ರಕರಣಗಳಲ್ಲಿ ಮಧ್ಯಂತರ ಆದೇಶ ನೀಡಲಾಗಿದೆ.
ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ, ಪ್ರಸ್ತುತ ಧಾರವಾಡ ಪೀಠದಲ್ಲಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿಬ್ಬರೂ ನಿಯಮಿತವಾಗಿ ತಮ್ಮ ಸರದಿಗೆ ಒಪ್ಪಿಸುವ ಯಾವುದೇ ವರ್ಗಗಳ ಅರ್ಜಿಗಳ ಕ್ಷಿಪ್ರ ವಿಲೇವಾರಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ನಾಗಪ್ರಸನ್ನ ಒಂದು ದಿನದ ಕಲಾಪದಲ್ಲಿ 600ಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಿದ್ದಾರೆ.
ಇದನ್ನೂ ಓದಿ: Muda Scam: ಸಿಎಂ ವಿರುದ್ಧ ಪಾಸಿಕ್ಯೂಷನ್ ಪ್ರಶ್ನಿಸಿ ಅರ್ಜಿ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್