Sunday, 24th November 2024

MLA Munirathna: ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಡಿವೈಎಸ್ಪಿಗೆ ಮನವಿ

 ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯ.

ಚಿಂತಾಮಣಿ: ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಸದಸ್ಯರಾದ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತಯ್ತು ಒಕ್ಕಲಿಗ ಸಮುದಾಯದ ಬಗ್ಗೆ ಮಹಿಳೆಯರನ್ನು ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಲAಚಕ್ಕೆ ಬೇಡಿಕೆ ಇಟ್ಟು ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪಿ ಅಡಿಯಲ್ಲಿ ಇವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಿದ್ದುಪಡಿ ಕಾಯ್ದೆ ಅಡಿ ಪ್ರಕಾರ ದೂರು ದಾಖಲಿಸು ವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಎಂದು ಡಿವೈಎಸ್ಪಿ ಮುರಳಿಧರ್ ರವರಿಗೆ ದೂರು ನೀಡಿ ಮನವಿ ಪತ್ರವನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸಿಎನ್ ನಾರಾಯಣಸ್ವಾಮಿ,ಬ್ಲಾಕ್ ಕಾಂಗ್ರೆಸ್ ಕಸಬಾ ಹೋಬಳಿ ನಗರ ಘಟಕ ಎಸ್ ಟಿ ಅಧ್ಯಕ್ಷರಾದ ಮಾಡಿಕೆರೆ ಮಣಿಕಂಠ ಎನ್,ಜಿಲ್ಲಾ ಖಜಾಂಚಿ ಚನ್ನಕೇಶವಪುರ ವೆಂಕಟೇಶಪ್ಪ ಮಾತನಾಡಿ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರನೊಬ್ಬನ ಬಳಿ ಅವಹೇಳನಕಾರಿಯಾಗಿ ಜಾತಿಯನ್ನು ನಿಂದಿಸಿ ಮಾತನಾಡಿದ ಪ್ರಕಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಶಾಸಕನನ್ನು ಬಂಧಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಈತನ ವಿರುದ್ಧ ಕೇವಲ ಮೊಕದ್ದಮೆ ದಾಖಲಿಸಿಕೊಂಡರೆ ಸಾಲದು ಕೂಡಲೇ ಬಂಧಿಸಿ ಈತನ ಕಾನೂನು ಬಾಹಿರ ಹಾಗೂ ಅನೈತಿಕ, ಅಕ್ರಮ,ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ರಾಜರಾಜೇಶ್ವರಿ ನಗರದ ಬಿ.ಜೆ.ಪಿ ಶಾಸಕ ಮುನಿರತ್ನo ವಿರುದ್ಧ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟು ಹೊಲೆಯರ ಕುರಿತು ಜಾತಿ ನಿಂಧನೆ,ಹೆಣ್ಣು ಮಕ್ಕಳ ಕುರಿತು ಅವಹೇಳನ ಮತ್ತು ಜೀವ ಬೆದರಿಕೆ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಗ್ರಾಮಾ0ತರ ವಿಭಾಗ ಎಸ್‌ಟಿ ಅಧ್ಯಕ್ಷರಾದ ಶಂಕರಪ್ಪ ಸಿದ್ದೇಪಲ್ಲಿ,ಕಾರ್ಮಿಕ ವಿಭಾಗ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮುನಿರಾಜು ತಳಗವಾರ,ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ: Chickballapur News: ಕ್ರೀಡಾಭ್ಯಾಸದಿಂದ ದೈಹಿಕ, ಮಾನಸಿಕ ದೃಢತೆ ಆರೋಗ್ಯ ಸಾಧ್ಯ-ಶ್ರೀನಿವಾಸ್