Friday, 22nd November 2024

MLA Munirathna: ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಗಡಿಪಾರು ಮಾಡಿ- ಮುನಿರತ್ನ ವಿರುದ್ಧ ಛಲವಾದಿ ಮುಖಂಡರು ಕಿಡಿ

ಗುಬ್ಬಿ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನರನ್ನು ಗಡಿಪಾರು ಮಾಡಿ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕೆಂದು ತಾಲೂಕು ಛಲವಾದಿ ಮಹಾಸಭ ಮುಖಂಡರು ಪ್ರತಿಭಟಿಸಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ಈರಣ್ಣ ಮಾತನಾಡಿ, ಬೆಂಗಳೂರು ಆರ್ ಆರ್ ನಗರದ ಶಾಸಕ ಮುನಿರತ್ನ  ದಲಿತ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಶಾಸಕ ಸ್ಥಾನಕ್ಕೆ ರಾಜೀ ನಾಮೆ ಕೊಡಬೇಕು ಆತನನ್ನು ಗಡಿಪಾರು ಮಾಡಿ ಮುಂದೆ  ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು ಕಿಡಿಕಾರಿದರು.

ಛಲವಾದಿ ಮಹಾಸಭಾ ಉಪಾಧ್ಯಕ್ಷ ಕಿಟ್ಟದಕುಪ್ಪೆ ನಾಗರಾಜು ಮಾತನಾಡಿ, ಅತಿ ಹೆಚ್ಚು ದಲಿತ ಸಮುದಾಯದ ಮತ ಪಡೆದು  ಶಾಸಕನಾಗಿ ಆಯ್ಕೆಯಾಗಿ ಜನಾಂಗದ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವ ಕೆಲಸ  ಮಾಡಿದ್ದು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಗಡಿಪಾರು ಮಾಡ ಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಬಿ ಆರತಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಛಲವಾದಿ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷ ಮಂಜುನಾಥ್, ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕ ಅಧ್ಯಕ್ಷ ಗುಬ್ಬಿ ಬಸವರಾಜು, ಪತ್ರಕರ್ತ ಸಾತೇನಹಳ್ಳಿ ಬಸವರಾಜು, ಯುವ ಘಟಕದ ಅಧ್ಯಕ್ಷ ಮಧು ಕೆ, ಸಚಿನ್, ನಗರ ಅಧ್ಯಕ್ಷ ದಿವಾಕರ್, ನಿಟ್ಟೂರ್ ಹೋಬಳಿ ಘಟಕದ ಅಧ್ಯಕ್ಷ ಗೋಪಾಲ್, ಚೇಳೂರು ಆನಂದ್, ಸಿಎಸ್ ಪುರ ಬಸವರಾಜು, ರಘು, ಸೋಮಣ್ಣ ಹೂವಿನ ಕಟ್ಟೆ, ಅಡಗೂರು ಮೂರ್ತಣ್ಣ, ರಮೇಶ್, ಯತೀಶ್ ಎನ್, ರಮೇಶ್, ಗಿರೀಶ್, ಮಾದಲಾಪುರ ಲೋಕೇಶ್ ಇತರರು ಇದ್ದರು.

ಇದನ್ನೂ ಓದಿ: Gubbi Pattana Panchayat Election: ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷರಾಗಿ ಮಮತ ಶಿವಪ್ಪ ಅವಿರೋಧ ಆಯ್ಕೆ