Saturday, 23rd November 2024

Viral Video: ಮಹಿಳೆಯರನ್ನು ಟಚ್‌ ಮಾಡಿದರೆ ಹುಷಾರ್‌! ಪೊಲೀಸರು ನಿಮ್ಮ ವಿಡಿಯೊ ತೆಗೆದು ಸೋಷಿಯಲ್‌ ಮೀಡಿಯಾಗೆ ಹಾಕ್ತಾರೆ!

Viral Video

ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಇದೀಗ ಹೈದರಾಬಾದ್ ಪೊಲೀಸರು (Hyderabad Police) ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪುರುಷನೊಬ್ಬ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವ ವಿಡಿಯೋವೊಂದನ್ನು (Viral Video) ಪೋಸ್ಟ್ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಕಿಕ್ಕಿರಿದು ಸೇರಿರುವ ಜನರ ಮಧ್ಯೆ ವ್ಯಕ್ತಿಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅನೇಕ ವೀಕ್ಷಕರು ಘಟನೆಯ ಬಗ್ಗೆ ತಮ್ಮ ಕೋಪ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋದ ಜೊತೆಗೆ ಹೈದರಾಬಾದ್ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ. ರಸ್ತೆ, ಸಾರ್ವಜನಿಕ ಸ್ಥಳ ಮತ್ತು ನೀವು ಎಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ಅಲ್ಲಿ ನಮ್ಮ She ತಂಡ ನಿಮ್ಮ ನಡವಳಿಕೆಯನ್ನು ರೆಕಾರ್ಡ್ ಮಾಡುತ್ತಿವೆ. ನಿಮ್ಮ ದುಷ್ಕೃತ್ಯಗಳನ್ನು ತಡೆಯುವುದು ನಮ್ಮ ಏಕೈಕ ಮಂತ್ರವಾಗಿದೆ. She ತಂಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮೀಸಲಾಗಿರುವ ವಿಶೇಷ ಪೊಲೀಸ್ ಪಡೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡಿದ ಅನಂತರ ಸುಮಾರು 1.5 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ತಮ್ಮ ದೂರುಗಳನ್ನು ಹೇಳಿಕೊಂಡಿದ್ದಾರೆ. ಕೆಲವರು ಇವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸದೆ ಘಟನೆಯನ್ನು ಮಾತ್ರ ಏಕೆ ದಾಖಲಿಸಿದ್ದಾರೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. ಹೆಚ್ಚಿನವರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿಯ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ ಎನ್ನಲಾಗಿದೆ. ಒಬ್ಬ ಬಳಕೆದಾರ, ಸರ್, ಈ ನಡವಳಿಕೆಯನ್ನು ರೆಕಾರ್ಡ್ ಮಾಡುವುದು ಸಮಸ್ಯೆಯ ಒಂದು ಅಂಶವಾಗಿದೆ. ಆದರೆ ಶಿಕ್ಷೆಯೇ ನಿಜವಾದ ಪರಿಹಾರವಾಗಿದೆ. ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಕೇಳಿದ್ದಾರೆ. ಇನ್ನೊಬ್ಬರು ದಯವಿಟ್ಟು ಅಪರಾಧಿಗಳ ಚಿತ್ರಗಳನ್ನು ಸಾರ್ವಜನಿಕವಾಗಿ ಹಾಕಿ ನಾಚಿಕೆಪಡಿಸಿ ಎಂದು ಸಲಹೆ ನೀಡಿದರು.

Vande Bharat Train: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲು ಹೋಗಿ ರೈಲು ಹಳಿಗೆ ಬಿದ್ದ ಶಾಸಕಿ; ವೈರಲ್‌ ವಿಡಿಯೊ ಇಲ್ಲಿದೆ

ಮತ್ತೊಬ್ಬ ಬಳಕೆದಾರರು, ಪೊಲೀಸರನ್ನು ಶ್ಲಾಘಿಸಿದ್ದಾರೆ. ನಾನು ಹೈದರಾಬಾದ್‌ನಿಂದ ಬಂದಿದ್ದೇನೆ ಮತ್ತು ಇಲ್ಲಿ ಶಿ ತಂಡದ ಕೆಲಸವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಭಾರತದಲ್ಲಿ ಅಂತಹ ಯಾವುದೇ ರಕ್ಷಣಾ ಸೇವೆ ಇದೆ ಎಂದು ನಾನು ಭಾವಿಸುವುದಿಲ್ಲ. ಶಿ ತಂಡದ ಪ್ರಯತ್ನಗಳಿಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ. ಇನ್ನೊಬ್ಬರು ಇದು ನಿಜವಾಗಿಯೂ ಚೆನ್ನಾಗಿದೆ. ಇತರ ರಾಜ್ಯಗಳಲ್ಲಿಯೂ ಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.