ಚಿಕ್ಕಬಳ್ಳಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಶೋಧನೆಗೆ ಅಗ್ರಸ್ಥಾನವಿದೆ. ಇದರಲ್ಲಿ ಯಶಸ್ಸು ಕಾಣಬೇಕಾದರ ವಿದ್ಯಾರ್ಥಿಗಳು ಹೆಚ್ಚು ಕಾರ್ಯಗಾರಗಳು ಮತ್ತು ವಿಚಾರಸಂಕಿರಣಗಳಲ್ಲಿ ಭಾಗವಹಿಸಿದಾಗ ಮಾತ್ರವೇ ಜ್ಞಾನ ವಿನಿಮಯ ಸಾಧ್ಯ, ಈ ಮೂಲಕ ವಿವಿಧ ಕ್ಷೇತ್ರಗಳ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಛಾತಿ ಬೆಳೆಸಿಕೊಂಡು ನವೀನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ತಿಳಿಸಿದರು.
ನಗರ ಹೊರವಲಯ ಎಸ್ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಇಂಜಿನಿರ್ಸ್ ದಿನಾಚರಣೆ ಹಾಗೂ ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸ್ಸ್ ಹೆಸರಿನ ೨ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈಮಾನಿಕ ಕ್ಷೇತ್ರದಲ್ಲಿ ಭಾರತದ ಸಾಧನೆ ಗಮನಾರ್ಹವಾಗಿದ್ದು ಕರ್ನಾಟಕದ ಪಾಳೂ ಇದರಲ್ಲಿದೆ.ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಾರಣ ಈ ಭಾಗದಲ್ಲಿ ಏರೋನಾಟಿಕಲ್ ಇಂಜನಿಯರಿಂಗ್ ವ್ಯಾಸಾಂಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ಅಧ್ಯಯನ ವಿಷಯ ಯಾವುದೇ ಇರಲಿ ಅದರಲ್ಲಿ ಆಳವಾದ ಜ್ಞಾನ ಪಡೆದು,ಅದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದಾಗ ಮಾತ್ರವೇ ಪಡೆದ ಶಿಕ್ಷಣಕ್ಕೆ ಸಾರ್ಥಕತೆ ದೊರೆಯಲಿದೆ ಎಂದರು.
ಐಐಎಸ್ಸಿ ಇನ್ ಹೈಪರ್ ಸಾನಿಕ್ಸ್ ಅಂಡ್ ಏರೋಸ್ಪೇಸ್ ಇಂಜನಿಯರಿಂಗ್ ವಿಭಾಗದ ಸಿಇಒ ಗೋಪಾಲನ್ ಜಗದೀಶ್ ಮಾತನಾಡಿ ಭಾರತ ಕಂಡ ಶ್ರೇಷ್ಟ ಇಂಜಿನಿಯರ್ ವಿಶ್ವೇಶ್ವರಯ್ಯ ಅವರು ನಮ್ಮ ನೆರೆಯವರಾದ ಮುದ್ದೇನಹಳ್ಳಿಯವರು ಎಂಬುದು ಸಂತೋಷದ ವಿಷಯ.ಇವರನ್ನು ಓದುವ ಮೂಲಕ ಪ್ರತಿಯೊಬ್ಬರು ಪ್ರಾಮಾಣಿಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಮೌಲ್ಯವಿಲ್ಲದ ಜೀವನ ವ್ಯರ್ಥ, ಕಲಿಯುಗದಲ್ಲಿ ಸಂಘಟನೆಗೆ ಹೆಚ್ಚಿನ ಶಕ್ತಿಯಿದೆ. ನಿರಂತರ ಕಲಿಕೆಯೆ ಜೀವನದ ಧ್ಯೇಯವಾಗಬೇಕು ಎಂದು ಹೇಳಿದರು.
ಭೈರವೈಕ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ವಿಶ್ವಕಂಡ ಮಹಾಗುರು.ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಕರಾದ ಮೇಲೆ ಅವರಂತೆ ಧನ್ಯತಾ ಭಾವದಿಂದ ಸಮಾಜಕ್ಕೆ ಸೇವೆಯನ್ನು ಮಾಡುವಂತವ ರಾಗಬೇಕು ಎಂದ ಅವರು ಇದೇ ವೇಳೆ ಇವರು ಶಾಕ್ವೇವ್ಸ್ಗಳ ಉಪಯೋಗಗಳನ್ನು ಉದಾಹರಣೆಗಳೊಂದಿಗೆ ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿಕೊಟ್ಟರು. ಅಂತರಾಷ್ಟ್ರೀಯ ಸಮ್ಮೇಳನದ 100 ಹೆಚ್ಚು ಸಂಶೋಧನಾ ಲೇಖನ ಗಳನ್ನು ವಿವಿಧ ಭಾಗದ ಸಂಶೋಧಕರು ಪ್ರಸ್ತುತ ಪಡಿಸಿ ಜ್ಞಾನ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ಸೇವೆ ಜ್ಞಾನದಿಂದ ಆದರ್ಶವಂತ ಚಿರಂಜೀವಿ ಯಾಗಿದ್ದಾರೆ. ಕಲಿತಿದ್ದು ಕೈ ಅಗಲ, ಕಲಿಯುವುದು ಮುಗಿಲಗಲ ಎಂಬಂತೆ ಕಲಿಕೆಯಲ್ಲಿ ಸದಾ ನಿರಂತರ ವಾಗಿರಬೇಕು. ಜಾಗರೂಕತೆಯಿದ್ದಲ್ಲಿ ಭಯ ಇರುವುದಿಲ್ಲ.
ಇದು ಅಭಿವೃದ್ದಿಯ ಪಥಕ್ಕೆ ದಾರಿದೀಪ ವಾಗುತ್ತದೆ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಆಶೀರ್ವಾದ ದೊಂದಿಗೆ ನಮ್ಮ ಎಸ್ಜೆಸಿ ತಾಂತ್ರಿಕ ಮಹಾವಿದ್ಯಾಲಯಕ್ಕೆ 2024-25 ವರ್ಷದಿಂದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಸ್ವಾಯತ್ತತೆ ಮಾನ್ಯತೆಯನ್ನು ನೀಡಿದೆ ಎಂದು ತಿಳಿಸಿ. ಸ್ವಾಯತ್ತತೆಯ ಮಾನ್ಯತೆಯಿಂದ ಸಂಸ್ಥೆಯು ಅಭಿವೃದ್ಧಿಯ ಪಥಕ್ಕೆ ಸದಾ ಸಾಗುತ್ತಿರಲಿ ಎಂದು ಆಶಿಸಿದರು.
ಈ ಸಮಾರಂಭದಲ್ಲಿ ಡಾ|| ಇಸ್ಮಾಯಿಲ್ ನಸಿ ಕಂಗಲ್, ಡಾ|| ದೀಪ ಎಂ.ಎಸ್, ಪ್ರಾಂಶುಪಾಲರಾದ ಡಾ|| ಜಿ.ಟಿ ರಾಜು, ಕುಲಸಚಿವ ಸುರೇಶ.ಜೆ, ಡಾ|| ಮಂಜುನಾಥ್ ಕುಮಾರ್ ಬಿ.ಹೆಚ್, ಡೀನ್ ಅಕಾಡೆಮಿಕ್ಸ್, ಡಾ|| ದೀಪ ಎಂ.ಎಸ್, ಸಿ.ಒ.ಇ, ಮುಖ್ಯಸ್ಥರು, ವೈಮಾನಿಕ ವಿಭಾಗ, ಡಾ|| ಮಧುಸೂದನ್ ಎಸ್.ವಿ, ಮುಖ್ಯಸ್ಥರು, ಏರೋಸ್ಪೇಸ್ ಇಂಜಿನಿಯರಿAಗ್ ವಿಭಾಗ, ಡಾ|| ತ್ಯಾಗರಾಜ್ ಎನ್.ಆರ್, ಮುಖ್ಯಸ್ಥರು, ಯಾಂತ್ರಿಕ ವಿಭಾಗ, ಕಾಮಗಾರಿ ವಿಭಾಗದ ಮುಖ್ಯಸ್ಥರಾದ ಡಾ|| ಜಿ.ನಾರಾಯಣ್, ಡಾ|| ರಾಜಶೇಖರ್ ಕೆ.ಎಂ, ಮುಖ್ಯಸ್ಥರು, ಭೌತಶಾಸ್ತç, ಡಾ|| ಶ್ರೀನಿವಾಸ್ ಕೆ, ಮುಖ್ಯಸ್ಥರು, ರಸಾಯನಶಾಸ್ತç,ಡಾ|| ಶ್ರೀನಿವಾಸ್ ರೆಡ್ಡಿ ಪೆರ್ಲಾ, ಮುಖ್ಯಸ್ಥರು, ಗಣಿತಶಾಸ್ತç ರವರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿ ೩೦೦ಕ್ಕೂ ಹೆಚ್ಚಿನ ಭಾಗವಹಿಸಿದ್ದರು.